ಸೋಮವಾರಪೇಟೆ, ಆ.೭ : ಕುಶಾಲನಗರ ಬೈಚನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಕ್ವ ಪಬ್ಲಿಕ್ ಶಾಲೆ ಅನಧಿಕೃತ ಶಾಲೆಯಾಗಿದ್ದು, ಪಾಲಕರು ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲು ಮಾಡಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಸೂಚನೆ ನೀಡಿದ್ದಾರೆ.
ಕರ್ನಾಟಕ ಶಾಲಾ ಶಿಕ್ಷಣ ಕಾಯ್ದೆ-೧೯೮೩ರ ನಿಯಮ ಕೆಇಇ ರೂಲ್ಸ್ ೧೯೯೭ರಂತೆ ಅಧಿಕೃತವಾಗಿ ಮಾನ್ಯತೆ ಪಡೆಯದಿರುವ ಕಾರಣ ಶಾಲೆಗೆ ಡೈಸ್ ಸಂಖ್ಯೆ ಮತ್ತು ಮಕ್ಕಳಿಗೆ ಸಾಟ್ಸ್ ಸಂಖ್ಯೆ ಇರುವುದಿಲ್ಲ. ಪಾಲಕರು ಮಕ್ಕಳನ್ನು ದಾಖಲಾತಿ ಮಾಡಿದಲ್ಲಿ ಮುಂದಿನ ಆಗುಹೋಗುಗಳಿಗೆ ಇಲಾಖೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಸುರೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.