ಕೂಡಿಗೆ, ಆ. ೬: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆ ಮುಖ್ಯ ನಾಲೆಗಳಲ್ಲಿ ಈಗಾಗಲೇ ಸೋರಿಕೆಯ ನೀರು ಹರಿದು ಬರುತ್ತಿರುವುದನ್ನು ಬಳಕೆ ಮಾಡಿಕೊಂಡು ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ನಾಟಿ ಕಾರ್ಯವನ್ನು ಆರಂಭಿಸಿದ್ದಾರೆ.

ಅಚ್ಚುಕಟ್ಟು ಪ್ರದೇಶಗಳಾದ ಹೆಬ್ಬಾಲೆ, ಕೂಡಿಗೆ, ಶಿರಂಗಾಲ, ತೊರೆನೂರು, ಹುದುಗೂರು, ಮದಲಾಪುರ, ಕಾಳಿದೇವನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅನೇಕ ಉಪ ಗ್ರಾಮಗಳಲ್ಲಿ ಈಗಾಗಲೇ ಕೃಷಿ ಇಲಾಖೆಯ ವತಿಯಿಂದ ಪರಿಷ್ಕೃತಗೊಂಡ ಭಿತ್ತನೆ ಬೀಜದ ಭತ್ತದ ಸಸಿಮಡಿಗಳನ್ನು ಸಿದ್ಧತೆ ಮಾಡಿಕೊಂಡಿರುವ ಅಚ್ಚುಕಟ್ಟು ಪ್ರದೇಶದ ರೈತರು ಸಾವಯವ ಗೊಬ್ಬರವನ್ನು ಬಳಕೆ ಮಾಡಿಕೊಂಡು ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡಿ ಭತ್ತದ ನಾಟಿ ಮಾಡಲು ಆರಂಭ ಮಾಡಿದ್ದಾರೆ.

ಈ ವ್ಯಾಪ್ತಿಯ ನೂರಾರು ರೈತರು ಆಧುನಿಕ ತಂತ್ರಜ್ಞಾನದ ಅಡಿ ಯಲ್ಲಿ ಎತ್ತುಗಳಲ್ಲಿ ಉಳುಮೆ ಮಾಡು ವುದನ್ನು ಬಿಟ್ಟು, ಟ್ರಾö್ಯಕ್ಟರ್‌ನ ಟಿಲ್ಲರ್ ಮೂಲಕ ಉಳುಮೆ ಮಾಡುತ್ತಿದ್ದಾರೆ. ಭತ್ತದ ನಾಟಿ ಮಾಡಲು ಈ ತಿಂಗಳು ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಹೈಬ್ರೀಡ್ ಭತ್ತದ ತಳಿಯ ಬೆಳೆಯು ಕೊಯ್ಲಿಗೆ ಬರುವ ಸಂದರ್ಭದಲ್ಲಿ ಉತ್ತಮವಾದ ಕಾಳುಕಟ್ಟಲು ಹವಾಮಾನವು ಅನುಕೂಲವಾಗುವುದು. ಚಳಿಗಾಲ ಆರಂಭವಾಗುವ ಮುನ್ನ ಭತ್ತದ ಬೆಳೆಯ ತೆನೆಕಟ್ಟಲು ಆರಂಭವಾದಲ್ಲಿ ಭತ್ತವು ಜೇಳು ಬೀಳುವುದಿಲ್ಲ ಎಂದು ಪ್ರಗತಿಪರ ರೈತರಾದ ಕಫೀನಪ್ಪ, ನಾಗರಾಜ್, ರವಿಶಂಕರ್, ಸೋಮಶೇಖರ್, ಲೋಕೇಶ್ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.