ಗೋಣಿಕೊಪ್ಪ ವರದಿ, ಆ. ೭ : ಬಾಳಾಜಿ ಗ್ರಾಮದ ದಿವಂಗತ ರಾಜು, ಗೌರಮ್ಮ ದಂಪತಿ ಪುತ್ರ ನಾಗರಾಜು (೪೨) ಜುಲೈ ೩೧ ರಿಂದ ನಾಪತ್ತೆ ಯಾಗಿದ್ದಾರೆ.

ಸ್ವಲ್ಪ ಕುಂಟಿಕೊAಡು ನಡೆಯುವ ಇವರಿಗೆ ಮಾತನಾಡಲು ಆಗುವುದಿಲ್ಲ, ಕಿವಿ ಕೇಳಿಸುವುದಿಲ್ಲ. ಮನೆಗೆ ಕೈಕೇರಿಯಿಂದ ಹೊರಟವರು ಮನೆಗೆ ಬಂದಿಲ್ಲ ಎಂದು ತಾಯಿ ಗೌರಮ್ಮ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ತೆಯಾದವರು ೦೮೨೭೪೨೪೭೩೩೩ ಸಂಖ್ಯೆಗೆ ಮಾಹಿತಿ ನೀಡಬೇಕಿದೆ ಎಂದು ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.