ಮಡಿಕೇರಿ, ಆ. ೬: ಮಣಿಪುರ ರಾಜ್ಯದ ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ ಪ್ರಕರಣ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಇತರೆ ದೌರ್ಜನ್ಯ ಖಂಡಿಸಿ ಕೊಡಗು ಜಿಲ್ಲಾ ಮಹಿಳೋದಯ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಗಾಂಧಿ ಮೈದಾನದಲ್ಲಿ ಜಮಾವಣೆಗೊಂಡ ಮಹಿಳಾ ಸದಸ್ಯರು ಗಾಂಧಿ ಮೈದಾನದಿಂದ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣವನ್ನು ಖಂಡಿಸಿದರು.
ಜಿಲ್ಲಾ ಮಹಿಳೋದಯ ಒಕ್ಕೂಟದ ವಲಯ ಸಂಯೋಜಕಿ ಜಾಯ್ಸ್ ಮೆನೇಜಸ್, ಅಧ್ಯಕ್ಷೆ ಚಿನ್ನಮ್ಮ, ಕಾರ್ಯಕರ್ತರಾದ ವಿಜಯ ನಾರಾಯಣ, ಪ್ರಮುಖರಾದ ರೀಟಾ, ಮಮತಾ, ರೇಣುಕುಮಾರಿ, ಲಲಿತಾ, ಕೊಡಗು ಜಿಲ್ಲಾ ಮಹಿಳೋದಯ ಒಕ್ಕೂಟದ ಸದಸ್ಯರು, ಸ್ವಸಹಾಯ ಗುಂಪಿನ ಸದಸ್ಯರು ಇದ್ದರು.