ಸುAಟಿಕೊಪ್ಪ, ಆ. ೭: ಭಾನುವಾರ ಮರದಿಂದ ಬಿದ್ದು, ಮೃತಪಟ್ಟಿದ್ದ ಸುಂಟಿಕೊಪ್ಪ ನಾಕೂರು ಶಿರಂಗಾಲ ಗ್ರಾಮದ ನೆಟ್ಲಿ ಬಿ. ನಿವಾಸಿ, ಪೊಲೀಸ್ ಸಿಬ್ಬಂದಿ ಲೋಕೇಶ್ಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಂತಿಮ ಗೌರವ ಸಲ್ಲಿಸಲಾಯಿತು.
ಮೃತರ ಮನೆಯ ಅಂಗಳದಲ್ಲಿ ಮೃತದೇಹಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ರಾಮರಾಜನ್, ಹೆಚ್ಚುವರಿ ಅಧಿಕಾರಿ ಸುಂದರ್ರಾಜ್, ಡಿವೈಎಸ್ಪಿ ಗಂಗಾ ಧರಪ್ಪ, ವೃತ್ತ ನಿರೀಕ್ಷಕ ಮಹೇಶ್, ಶಸಸ್ತç ದಳದ ಅಧಿಕಾರಿ ಚೆನ್ನ ನಾಯಕ್, ಸುಂಟಿಕೊಪ್ಪ ಪಿಎಸ್ಐ ಶ್ರೀಧರ್, ಅಪರಾಧ ದಳದ ಪಿಎಸ್ಐ ಸ್ವಾಮಿ ಹಾಗೂ ಸಿಬ್ಬಂದಿಗಳು ಸರ್ಕಾರಿ ಗೌರವದೊಂದಿಗೆ ಅಂತಿಮ ಗೌರವ ಸಲ್ಲಿಸಿದರು. ಅಂತ್ಯಕ್ರಿಯೆಯಲ್ಲಿ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನಾಥ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನಾರ್, ಮಾಜಿ ಅಧ್ಯಕ್ಷ ಬಿ.ಜಿ.ರಮೇಶ್, ಮಾಜಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಮಣಿ ಜಿಲ್ಲಾ ಭೂ ನ್ಯಾಯ ಮಂಡಳಿ ಸದಸ್ಯ ಡಾ: ಶಶಿಕಾಂತ್ ರೈ, ನೂರಾರು ಗ್ರಾಮಸ್ಥರು ಅಪಾರ ಬಂಧು ಬಳಗ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.