*ಗೋಣಿಕೊಪ್ಪ, ಆ. ೫: ಹುಲಿ ದಾಳಿಗೆ ಕರು ಬಲಿಯಾದ ಘಟನೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಗಲ್ ಹಾಡಿಯಲ್ಲಿ ನಡೆದಿದೆ.
ಶನಿವಾರ ಮಧ್ಯಾಹ್ನ ೧ ಗಂಟೆಗೆ ಈ ಘಟನೆ ನಡೆದಿದ್ದು, ಮೇಯಲು ಬಿಟ್ಟಿದ್ದ ಕರುವಿನ ಮೇಲೆ ಹುಲಿ, ದಾಳಿ ನಡೆಸಿ ಕತ್ತಿನ ಭಾಗ ಸೀಳಿದೆ.
ಜೊತೆಯಲ್ಲಿದ್ದ ಗೂಳಿಯ ಮೇಲೂ ಹುಲಿ ದಾಳಿ ನಡೆಸಿದೆ. ಕರು ಹಾಡಿಯ ನಿವಾಸಿ ಜೆ ಆರ್ ಸಿಂಧು ಅವರದ್ದಾಗಿದೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.