ಮಡಿಕೇರಿ, ಆ. ೫: ಲ್ಯಾಂಪ್ಸ್ ಅಕಾಡೆಮಿ ತಿತಿಮತಿ ವಿದ್ಯಾಸಂಸ್ಥೆಯಲ್ಲಿ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಸುಮನ್ ಮೂಡಗದ್ದೆ ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರಿಗೆ ವಿಧೇಯರಾಗಿ, ಪ್ರಾಮಾಣಿಕತೆ, ಪರೋಪಕಾರ, ದೇಶಪ್ರೇಮ, ಸರ್ವಧರ್ಮ ಸಮನ್ವಯತೆ, ಸಹೋದರತ್ವ ಭಾವನೆ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಹಿತನುಡಿಗಳನ್ನಾಡಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಅಪೋಲಿನ್ ಡಿಸೋಜ ಮಕ್ಕಳಿಗೆ ಹಿತನುಡಿಗಳನ್ನಾಡಿದರು. ಶಾಲಾ ನಾಯಕಿಯಾಗಿ ಶ್ರದ್ಧ ಎಂ.ಎA, ಕ್ರೀಡಾ ನಾಯಕನಾಗಿ ಹರ್ಷನ್ ಕೆ.ಹೆಚ್, ಕ್ರೀಡಾ ನಾಯಕಿಯಾಗಿ ಅರ್ಚನ ಎಸ್, ಸಾಂಸ್ಕೃತಿಕ ನಾಯಕಿಯಾಗಿ ತ್ರಿಶಾ ಎಸ್.ಎ, ಶಿಸ್ತು ಪರಿಪಾಲನ ನಾಯಕಿಯಾಗಿ ವಿಧಾನ್ಯ ಎ.ಎಂ, ಭಾಷಾ ಮಾಧ್ಯಮ ನಾಯಕಿಯಾಗಿ ಫಿದಾ ಟಿ.ಎಂ, ಆರೋಗ್ಯ ನಾಯಕಿಯಾಗಿ ಜಸೀಲ್ ಎ.ಆರ್, ತೋಟಗಾರಿಕಾ ನಾಯಕಿಯಾಗಿ ದಿಲನ್ ಮತ್ತು ಪೊನ್ನಪ್ಪ, ಕ್ರಾಫ್ಟ್ ನಾಯಕಿಯಾಗಿ ಮೋಕ್ಷಿತಾ ಪಿ.ಆರ್. ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಶಾಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.