ಅವನು ಅತ್ಯಂತ ವಿನಾಶಕಾರಿ, ವಿಧ್ವಂಸಕ ಹಾಗೂ ರಾಕ್ಷಸೀಯ ಅಸ್ತçವನ್ನು ಲೋಕಕ್ಕೆ ತನ್ನ ದೇಶದ ಪರವಾಗಿ ಎರಡನೇ ವಿಶ್ವ ಯುದ್ಧದ ಸಂದರ್ಭ ಸಂಶೋಧಿಸಿದ್ದ. ಅತ್ಯಂತ ವಿದ್ಯಾವಂತ ಹುಡುಗನಾಗಿದ್ದರೂ, ಬಾಲ್ಯದ ಕೆಲ ಕಹಿ ನೆನಪುಗಳು ಎಲ್ಲರಿಂದ ದೂರವಿದ್ದುಕೊಂಡು ಅಂತರ್ಮುಖಿಯಾಗಿ ಬೆಳೆಯಲು ಕಾರಣವಾಗಿತ್ತು. ಹಾಗೆ ಒಬ್ಬಂಟಿಯಾಗಿ ಮಾನಸಿಕವಾಗಿ ಬಳಲಿ ಖಿನ್ನನಾಗಿದ್ದ ಹುಡುಗ ಅದೊಂದು ದಿನ ಜಗತ್ತನ್ನೇ ನಾಶ ಮಾಡಬಲ್ಲ ಅಸ್ತç ಒಂದನ್ನು ಸಂಶೋಧಿಸಿದ್ದ. ಅದೇ ‘ಪರಮಾಣು ಬಾಂಬ್' ಅವನೇ ‘ಜೆ. ರಾಬರ್ಟ್ ಓಪ್ಪನ್ ಹೈಮರ್'!

ರಸಾಯನ ಶಾಸ್ತç ವಿಷಯವಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸುತ್ತಲೇ ಜೊತೆಗೇ ಫಿಲೋಸಫಿ, ಆರ್ಟ್, ಸಾಹಿತ್ಯದಲ್ಲೂ ಆಸಕ್ತಿ ತೋರಿ ಅಧ್ಯಯನ ನಡೆಸಿದ. ನಂತರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎರ್ನೆಸ್ಟ್ ಲೂಥರ್ ಫರ್ಡ್ ಎನ್ನುವ ಫಿಜೀಸಿಸ್ಟ್ ಹತ್ತಿರ ಕೆಲಸಕ್ಕೆ ಸೇರಿದನು. ನೋಬಲ್ ಪಡೆದಿದ್ದ ಎರ್ನೆಸ್ಟ್ ಲೂಥರ್ ಫರ್ಡ್ ಅವರು ಓಪ್ಪನ್ ಹೈಮರ್ ಅವರ ಅರ್ಜಿಯನ್ನು ತಿರಸ್ಕರಿಸುತ್ತಾರೆ. ಆದರೂ ಛಲ ಬಿಡದೆ, ತಮ್ಮ ಅಧ್ಯಾಪಕರೊಬ್ಬರ ಬಳಿ ಶಿಫಾರಸ್ಸು ಪತ್ರ ತೆಗೆದುಕೊಂಡು, ಎಲೆಕ್ಟಾçನ್ ಸಂಶೋಧನೆ ಮಾಡಿದ್ದ ಜೆ.ಜೆ. ಥಾಮ್‌ಸನ್ ಅವರ ಬಳಿ ಕೆಲಸ ಮಾಡುತ್ತಾ, ಕ್ವಾಂಟಮ್ ಮೆಕ್ಯಾನಿಕ್ಸ್ ವಿಷಯದ ಕುರಿತು ಅತೀವ ಆಸಕ್ತಿ ಮೂಡುತ್ತದೆ. ಅದರೊಂದಿಗೆ ಸೌರ ಮಂಡಲದ ಕುರಿತು ಇದ್ದ ಕುತೂಹಲದಿಂದ ಬ್ಲಾö್ಯಕ್ ಹೋಲ್ಸ್ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದನು. ಆಲ್ಬರ್ಟ್ ಐನ್‌ಸ್ಟೀನ್ ಅವರ ‘ರಿಲೇಟಿವಿಟಿ’ ಥಿಯರಿಯನ್ನು ಆಧಾರವಾಗಿ ಇಟ್ಟುಕೊಂಡು ಬ್ಲಾö್ಯಕ್ ಹೋಲ್‌ಗಳು ಇರುವುದನ್ನು ನಿರೂಪಿಸಿದ್ದ.

ಹೀಗಿದ್ದರೂ, ಓಪ್ಪನ್ ಹೈಮರ್ ಬದುಕಿನಲ್ಲಿ ತಾನು ಅಂದುಕೊAಡಿದ್ದನ್ನು ಮಾಡಲಾಗಿಲ್ಲ ಎಂಬ ಖಿನ್ನತೆ, ಜಿಗುಪ್ಸೆಗೆ ಈಡಾಗಿದ್ದನು. ಹೀಗಾಗಿ ಮಾನಸಿಕ ಸ್ಥಿತಿ ಹದಗೆಟ್ಟಿತ್ತು. ಪರಿಣಾಮವಾಗಿ ಡೆಮೆನ್ಷಿಯಾ ಪೈಯೋಕ್ಸ್ ಎಂಬ ಮಾನಸಿಕ ಖಾಯಿಲೆ ಬಂದಿತ್ತು. ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಲೇ ದೊಡ್ಡ ದೊಡ್ಡ ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಅವಕಾಶಗಳು ದೊರೆತವು. ಆಗ ಓಪ್ಪನ್ ಹೈಮರ್ ‘ಪ್ರಾಸೆಸ್' ಎಂಬ ಅನ್ವೇಷಣೆಯನ್ನು ಮಾಡುತ್ತಾನೆ. ಇದು ಮುಂದಿನ ದಿನಗಳಲ್ಲಿ ಭೌತಶಾಸ್ತçದಲ್ಲೇ ಅತಿ ದೊಡ್ಡ ಕ್ರಾಂತಿಯನ್ನೇ ತರುತ್ತದೆ.

ಇಷ್ಟಾದರೂ ಓಪ್ಪನ್ ಹೈಮರ್ ಜೀವನದಲ್ಲಿ ನಿರಾಸಕ್ತನಾಗಿದ್ದನು. ಆಗ ಅವನಿಗೆ ಹಿಂದೂ ಧರ್ಮದ ಭಗವದ್ಗೀತೆ ಆಕರ್ಷಿಸುತ್ತದೆ. ಹಿಂದೂ ಧರ್ಮಶಾಸ್ತçಗಳನ್ನು ಸಂಸ್ಕೃತದಲ್ಲಿ ಓದುವ ಸಲುವಾಗಿ ೧೯೩೩ರಲ್ಲಿ ಬರ್ಕ್ಲೇನ್‌ನಲ್ಲಿ ಸಂಸ್ಕೃತ ಕಲಿಯಲು ಹೊರಡುತ್ತಾರೆ. ಅಲ್ಲಿ ಸಂಸ್ಕೃತದ ಪ್ರೊಫೆಸರ್ ಆಗಿದ್ದ ಆರ್ಥರ್ ಡಬ್ಲೂ. ರೈಡರ್ ಎನ್ನುವವರು ಭಗವದ್ಗೀತೆಯನ್ನು ಅಧ್ಯಯನ ಮಾಡಲು ಸಲಹೆ ನೀಡುತ್ತಾರೆ. ರಾಮಕೃಷ್ಣ ಮಠದ ಸ್ವಾಮೀಜಿಗಳಾಗಿದ್ದ ಪ್ರಭಾವಾನಂದರು ಬರೆದಿದ್ದ ‘ಭಗವದ್ಗೀತೆ ಖಿhe Soಟಿg oಜಿ ಉoಜs' ಎಂಬ ಪುಸ್ತಕವನ್ನು ೧೯೩೦ರಲ್ಲೇ ಗೆಳೆಯ ಫ್ರಾನ್ಸಿಸ್ ಫರ್ಗ್ಯೂಸನ್ ತಂದು ಕೊಟ್ಟಿದ್ದನ್ನು ಮರು ಅಧ್ಯಯನ ಮಾಡುತ್ತಾನೆ ಓಪ್ಪಮ್ ಹೈಮರ್.

ದಿ ಮಾನ್ ಹ್ಯಾಟನ್ ಯೋಜನೆ

ಎರಡನೇ ಮಹಾ ಯುದ್ಧವು ತೀರಾ ತೀಕ್ಷ÷್ಣವಾಗಿ ನಡೆಯುತ್ತಿದ್ದ ಸಂದರ್ಭವದು. ಸಾವು-ನೋವುಗಳು ಸಾಮಾನ್ಯವೆಂಬAತಹ ಬರ್ಬರತೆ ಆವರಿಸಿತ್ತು. ಅಕ್ಟೋಬರ್ ೧, ೧೯೩೯ರಲ್ಲಿ ನೋಬಲ್ ಪುರಸ್ಕೃತ ವಿಜ್ಞಾನಿಯಾದ ಆಲ್ಬರ್ಟ್ ಐನ್‌ಸ್ಟೆöÊನ್ ಅವರು ಯು.ಎಸ್. ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ರೂಸ್ ವೆಲ್ಟ್ಗೆ ಪತ್ರ ಬರೆಯುತ್ತಾರೆ. ಅದರಲ್ಲಿ ಜರ್ಮನಿಯ ಹಿಟ್ಲರ್ ಹಾಗೂ ನಾರ್ಜೀಗಳು ಅಣು ಬಾಂಬ್ ಅಣ್ವಸ್ತçದ ಸಂಶೋಧನೆ ಕುರಿತು ತರಾತುರಿಯಲ್ಲಿ ನಿರತರಾಗಿರುವ ಅಪಾಯದ ಬಗ್ಗೆ ಮಾಹಿತಿ ನೀಡುತ್ತಾರೆ. ತಡ ಮಾಡದೆ ಅಧ್ಯಕ್ಷ ಫ್ರಾಂಕ್ಲಿನ್, ಮಾನ್ ಹ್ಯಾಟನ್ ಕೋಡ್ ವರ್ಡ್ಸ್ನ್ನು ಬಳಸಿ ಒಂದು ಗುಪ್ತ ಅಭಿಯಂತರರ ಹಾಗೂ ವಿಜ್ಞಾನಿಗಳ ತಂಡವನ್ನು ರಚಿಸುತ್ತಾರೆ.

ಈ ಹೊತ್ತಿಗೆ ನ್ಯೂಕ್ಲಿಯರ್ ಫಿನಿಕ್ಸ್ ಕ್ಷೇತ್ರದಲ್ಲಿ ಓಪ್ಪನ್ ಹೈಮರ್‌ಗೆ ಇದ್ದ ಆಸಕ್ತಿ ಗಮನಿಸಿ, ಲೆಫ್ಟಿನೆಂಟ್ ಜನರಲ್ ಲೆನ್ಲಿ ಗ್ರೂಸ್ ವಿಶ್ವಯುದ್ಧ ೨ಗೆ ಪ್ರಭಾವಿ ಅನುಭವವನ್ನು ಅಸ್ತç ಒಂದನ್ನು ಸಂಶೋಧಿಸುವ ಜವಾಬ್ದಾರಿಯನ್ನು ಓಪ್ಪನ್ ಹೈಮರ್‌ನಿಗೆ ವಹಿಸುತ್ತಾರೆ. ಆಗ ಓಪ್ಪನ್ ಹೈಮರ್ ತಮ್ಮ ಎಲ್ಲಾ ಬುದ್ಧಿವಂತಿಕೆ ವ್ಯಯಿಸಿ, ಜ್ಞಾನವನ್ನು ಧಾರೆ ಎರೆದು ಅಣು ಬಾಂಬ್ ಸಂಶೋಧಿಸಿದ.

೧೯೪೫, ಜುಲೈ ೧೬ ರಂದು ಬೆಳಿಗ್ಗೆ ೫ ಗಂಟೆಗೆ ನ್ಯೂ ಮೆಕ್ಸಿಕೋದಲ್ಲಿ ನಿರ್ಜನ ಬಂಜರು ಪ್ರದೇಶದಲ್ಲಿ ಅಣು ಬಾಂಬ್ ಪರೀಕ್ಷೆಗೆ ಮುಂದಾಗಲಾಯಿತು. ಸ್ಫೋಟದ ತೀವ್ರತೆಗೆ ಸಮೀಪವೇ ಇದ್ದ ಉಕ್ಕಿನ ಟವರ್ ಹೌಸ್ ಕರಗಿ ಹೋಗಿತ್ತು. ಸ್ಫೋಟದ ತೀವ್ರತೆಗೆ ಅದರ ಪಳೆಯುಳಿಕೆಗಳೂ ಇಲ್ಲದೆಯಾಗಿತ್ತು. ಸ್ಫೋಟಗೊಂಡಿದ್ದು ಅಣಬೆ ಆಕಾರದಲ್ಲಿ ಹೊಗೆ ದಟ್ಟವಾಗಿ ಮೇಲಕ್ಕೆ ೧೨ ಕಿಲೋಮೀಟರ್ ತನಕ ಆಗಸದಲ್ಲಿ ರ‍್ರಗಿನ ಬೆಂಕಿ ಮಿಶ್ರಿತ ಹೊಗೆ ಭುಗಿಲೆದ್ದಿತ್ತು. ಅದನ್ನು ನೋಡಿದ ಓಪ್ಪನ್ ಹೈಮರ್‌ನಿಗೆ ಭಗವದ್ಗೀತೆಯಲ್ಲಿ ಸಂಜಯ ದೃತರಾಷ್ಟçನಿಗೆ ವಿರಾಟರೂಪ ದರ್ಶನದ ವೇಳೆ ಕೃಷ್ಣ ಅರ್ಜುನನಿಗೆ ಹೇಳಿದ ವಾಕ್ಯಗಳು ನೆನಪಿಗೆ ಬರುತ್ತದೆ.

ದಿವಿ ಸೂರ್ಯ ಸಹಸ್ರಸ್ಯ

ಭವೇ ದ್ಯುಗ ಪದುತ್ಥಿತಾ

ಯದಿ ಭಾಃ ನದೃಶೀ ಸಾ

ಸ್ಯಾದ್ಭಾ ಸಸ್ತಸ್ಯ ಮಹಾತ್ಮನಃ||

ಅರ್ಥಾತ್ ‘ಸಾವಿರಾರು ಸೂರ್ಯರು ಒಮ್ಮೆಲೆ ಮುಗಿಲಲ್ಲಿ ಪ್ರಜ್ವಲಿಸಿದರೆ, ಅಂತಹ ಬೆಳಕು ಆ ಭಗವಂತನ ಬೆಳಕಿಗೆ ಸರಿ ಹೊಂದುವುದೇನು?' ಎಂಬ ಭಗವದ್ಗೀತೆಯ ೧೧ನೇ ಅಧ್ಯಾಯದ ೧೨ನೇ ಶ್ಲೋಕ ನೆನಪಾಗುತ್ತದೆ.

ಹಿರೋಶಿಮಾ ಉಡೀಸ್!

೧೯೪೫ ಆಗಸ್ಟ್ ೬ನೇ ತಾರೀಕು ಅಮೇರಿಕಾದ ಬಿ೨೯ ಅನ್ನೋ ವಿಮಾನ ೪,೫೦೦ ಕೆ.ಜಿ. ತೂಕದ ಬಾಂಬನ್ನು ಜಪಾನಿನ ಹಿರೋಶಿಮಾದ ಮೇಲೆ ಸ್ಫೋಟಿಸಲಾಯಿತು. ಬಾಂಬಿನ ಹೆಸರು ‘ಲಿಟ್ಲ್ ಬಾಯ್' ಎಂದಾಗಿತ್ತು. ಇದರಲ್ಲಿ ೬೬,೦೦೦ ಜನರು ನಿಂತ ನೆಲದಲ್ಲೇ ನಿರ್ಜೀವರಾದರು. ಹಿರೋಶಿಮಾ ನಗರ ಪರಿಚಯವೇ ಸಿಕ್ಕದಷ್ಟು ನೆಲಸಮವಾಗಿತ್ತು.

ನಾಗಾಸಕಿ ಧ್ವಂಸ...

ಜಪಾನ್ ಎರಡನೇ ಬಾರಿಗೆ ಬೆಚ್ಚಿ ಬಿದ್ದ ಘಟನೆ ಇದಾಗಿದೆ. ಹಿರೋಶಿಮಾ ಮೇಲೆ ಅಣು ಬಾಂಬ್ ಸ್ಫೋಟದ ನಂತರ ಈ ನಗರವನ್ನು ಕೂಡ ಮಣಿಯದ ಜಪಾನಿನ ಹುಟ್ಟಡಗಿಸಲು ಅಣು ಬಾಂಬ್ ಸ್ಫೋಟದ ನಂತರ ಮತ್ತೊಮ್ಮೆ ಅದೇ ಕೃತ್ಯಕ್ಕೆ ಕೈ ಹಾಕಿತು. ‘ಫ್ಯಾಟ್ ಮ್ಯಾನ್' ಎಂಬ ೧೦,೮೦೦ ಪೌಂಡಿನ ತೂಕದ ಅಣು ಬಾಂಬ್ ನಾಗಾಸಕಿಯಲ್ಲಿ ಹಾಕಲಾಯಿತು. ೫ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಲ್ಲವೂ ನಾಮಾವಶೇಷವಾಯಿತು. ಸುಮಾರು ೩,೦೦೦ ಜನರು ಸತ್ತರು. ೭೦,೦೦೦ ಜನರು ಗಂಭೀರವಾಗಿ ಗಾಯಗೊಂಡರು. ಇವೆರಡೂ ಬಾಂಬಿAಗ್‌ಗಳ ನೇರ, ಪರೋಕ್ಷ ಪರಿಣಾಮದಿಂದ ವಾರದೊಳಗೆ ೨ ಲಕ್ಷಕ್ಕೂ ಮೀರಿ ಜನರು ಪ್ರಾಣ ಕಳೆದುಕೊಂಡರು.

ಈ ಅನಾಹುತಕಾರಿ ಸ್ಫೋಟಗಳಿಂದ ಮತ್ತಷ್ಟು ಖಿನ್ನನಾಗಿದ್ದರೂ ಓಪ್ಪನ್ ಹೈಮರ್ ಮನದ ತುಂಬಾ ಭಗವದ್ಗೀತೆಯ ಒಂದೇ ಶ್ಲೋಕವು ಹರಿದಾಡುತ್ತಿತ್ತು. ಅದೇ ೧೧ನೇ ಅಧ್ಯಾಯದ ೩೨ನೇ ಶ್ಲೋಕವಾದ

‘ಕಾಲೋಸ್ಮಿ ಲೋಕಕ್ಷಯ ಕೃತ್ಪçವೃದ್ಧೋ

ಲೋಕಾನ್ ಸಮಾ ಹರ್ತುಮಿಹ ಪ್ರವೃತ್ತಃ|'

ರೇಡಿಯೋದ ಸಂದರ್ಶನವೊAದರಲ್ಲಿ ಕೂಡ

'ಓoತಿ I ಂm beಛಿome ಜeಚಿಣh,

ಣhe ಜesಣಡಿoಥಿeಡಿ oಜಿ ತಿoಡಿಟಜs' ಎಂದೆನ್ನುತ್ತಾನೆ.

ಅದು ಅರ್ಜುನನಿಗೆ ಶ್ರೀ ಕೃಷ್ಣ ಪರಮಾತ್ಮನು ವಿರಾಟ ದರ್ಶನದ ಸಮಯದಲ್ಲಿ ಹೇಳಿದ್ದ ವಿಚಾರವಾಗಿರುತ್ತದೆ.

‘ಲೋಕವನ್ನೇ ಕಬಳಿಸೋದಕ್ಕೆ ಬೆಳೆದು ನಿಂತಿರುವ ಕಾಲ ಪುರುಷ ನಾನು.

ನೀನು ಇಲ್ಲಿ ನಿಮಿತ್ತ ಮಾತ್ರ.

ನೀನಿಲ್ಲದಿದ್ದರೂ ಕೂಡ ಎರಡೂ ಕಡೆಯ ಪಡೆಗಳಲ್ಲಿ ಯಾವೊಬ್ಬನೂ ಉಳಿಯೋದಕ್ಕೆ ಸಾಧ್ಯವಿಲ್ಲ.

ಏಕೆಂದರೆ ನಾನು ಕಾಲಪುರುಷ' ಎಂಬ ಭಾವಾರ್ಥ ನೀಡುತ್ತದೆ.

ಜಗತ್ತಿಗೆ ಅತಿ ಹೃದಯ ವಿದ್ರಾವಕ ಪರಿಣಾಮ ತೋರುವ ಅತಿ ಖತರ್ನಾಕ್ ಅಣು ಬಾಂಬ್ ಸಂಶೋಧಿಸಿದ ರಾಬರ್ಟ್ ಓಪ್ಪನ್ ಹೈಮರ್ ಪುಸ್ತಕಗಳನ್ನೇ ಗೆಳೆಯರನ್ನಾಗಿಸಿಕೊಂಡು ಜ್ಞಾನ ವೃದ್ಧಿಸಿಕೊಂಡವನು. ಸದಾ ನಿತ್ಯ ಪುಸ್ತಕದ ಹುಳುವಾಗಿ ಅದರೊಂದಿಗೆ ಸಮಯ ಕಳೆಯುತ್ತಿದ್ದ. ಅದೇ ಜ್ಞಾನದಿಂದ ಶೇಷ್ಠ ಸಂಶೋಧನೆ ಮಾಡಿ ‘ಅಣು ಬಾಂಬಿನ ಪಿತಾಮಹ' ಎಂದು ಜಗತ್ವಿಖ್ಯಾತಿ ಹೊಂದಿದ. ಅದಕ್ಕೂ ಅವನಿಗೆ ಸ್ಫೂರ್ತಿಯಾಗಿದ್ದು ಪುಸ್ತಕವೇ. ಅದೇ ಭಗವದ್ಗೀತೆ.

ಜಗತ್ತು ಅಣು ಬಾಂಬ್‌ಗಳಿAದ ಮೆರೆದ ಕ್ರೂರತೆಯನ್ನು ಹಿರೋಶಿಮಾ, ನಾಗಾಸಕಿ ನಗರಗಳ ಮೇಲೆ ನಡೆದ ದಾಳಿಗಳಿಂದಾಗಿ ಹೇಗೆ ದೂಷಿಸುತ್ತಾರೆಯೋ ಅಂತೆಯೇ, ಅಣು ಬಾಂಬ್‌ಗಳ ಮೇಲೆ ಇರುವ ಭಯದಿಂದಾಗಿಯೇ ಮೂರನೇ ವಿಶ್ವ ಯುದ್ಧ ನಡೆಯುತ್ತಿಲ್ಲ. ಜಗತ್ತಿನಲ್ಲಿ ಶಾಂತಿ ಕೂಡ ನೆಲೆಸಲು ಇದು ನೆರವಾಗಿದೆ ಎಂಬುದನ್ನು ಸಹ ನಾವು ಶ್ಲಾಘಿಸಬೇಕು. ಒಂದು ವೇಳೆ ಮತ್ತೆ ಅಕಸ್ಮಾತ್ ಅಣು ಶಕ್ತಿ ಪ್ರಯೋಗ ನಡೆದು ಮೂರನೇ ವಿಶ್ವ ಯುದ್ಧ ನಡೆದು ಬಿಟ್ಟರೆ, ಜಗತ್ತೇ ನಾಶವಾಗುವ ಮಹಾನ್ ಅದ್ವಾನದ ಸಂಭವವೂ ಇದ್ದೇ ಇದೆ...!

- ಡಿ.ಹೆಚ್. ರಜತ್ ರಾಜ್, ಮಡಿಕೇರಿ. ಮೊ. ೭೪೮೩೨೨೬೨೫೧