ಮಡಿಕೇರಿ, ಆ. ೫: ಪೊಲೀಸರು ನಡೆಸಿದ್ದ ಹಲ್ಲೆಯಿಂದ ಮೃತಪಟ್ಟಿದ್ದ ಎನ್ನಲಾಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮೃತ ರಾಯ್ ಡಿಸೋಜ ಕುಟುಂಬವನ್ನು ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ವಿಚಾರಣೆ ನಡೆಸಿದ್ದಾರೆ.
ಮೂರ್ಛೆ ರೋಗದಿಂದ ಬಳಲುತ್ತಿದ್ದ ರಾಯ್ ಡಿಸೋಜ ೯-೬-೨೦೨೧ ರಂದು ನಡುರಾತ್ರಿ ಸ್ಥಿಮಿತ ಕಳೆದುಕೊಂಡು ವೀರಾಜಪೇಟೆಯ ಮುಖ್ಯ ರಸ್ತೆಯಲ್ಲಿ ಓಡುವ ಸಂದರ್ಭ ಪೊಲೀಸರ ನಡುವೆ ವಾಗ್ವಾದ ಉಂಟಾಗಿ ಪೇದೆಯೊಬ್ಬರ ಮೇಲೆ ಆಯುಧದಿಂದ ಹಲ್ಲೆ ನಡೆಸಿದ್ದರು. ಬಳಿಕ ವೀರಾಜಪೇಟೆ ಪೊಲೀಸ್ ಠಾಣೆ ಎದುರು ಓಡಾಡುತ್ತ ಕಿರುಚಾಡುತ್ತಿದ್ದರು. ಈ ವೀಡಿಯೋ ವೈರಲ್ ಕೂಡ ಆಗಿತ್ತು.
ಇವೆಲ್ಲ ಘಟನೆಗಳಿಂದ ಕುಪಿತಗೊಂಡ ಪೊಲೀಸರು ರಾಯ್ ಡಿಸೋಜ ಅವರನ್ನು ಠಾಣೆಯೊಳಗೆ ಕರೆದೊಯ್ದು ಅಮಾನುಷವಾಗಿ ಹಲ್ಲೆಗೈದಿದ್ದರು ಎಂದು ಕುಟುಂಬಸ್ಥರು ದೂರಿದ್ದರು. ಆ ಬಳಿಕ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಾದ ರಾಯ್ ಡಿಸೋಜ ಚಿಕಿತ್ಸೆ ಫಲಕಾರಿಯಾಗದೆ ೧೨-೯-೨೦೨೧ ಮೃತಪಟ್ಟಿದ್ದರು.
ಈ ವಿಚಾರ ತಿಳಿಯುತ್ತಿದ್ದಂತೆ ವಿವಿಧ ಸಂಘಟನೆಗಳು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. ಅಂದಿನ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಕೂಡ ವೀರಾಜಪೇಟೆಗೆ ಆಗಮಿಸಿ ಪ್ರಕರಣದ ಆರೋಪಿ ಸ್ಥಾನದಲ್ಲಿದ್ದ ೮ ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ್ದರು.
ಘಟನೆ ನಡೆದ ಬಳಿಕ ಮಾನವ ಹಕ್ಕು ಆಯೋಗ, ಸಿಐಡಿ, ಪೊಲೀಸರ ವಿಚಾರಣೆಯನ್ನು ರಾಯ್ ಕುಟುಂಬ ಎದುರಿಸಿದೆ. ಇದೀಗ ಪೊಲೀಸ್ ಇಲಾಖೆಯ ಆಂತರಿಕ ತನಿಖೆಗಾಗಿ ಡಿವೈಎಸ್ಪಿ ಗಂಗಾಧರಪ್ಪ ಅವರು ಕುಟುಂಬವನ್ನು ಕರೆಸಿ ವಿಚಾರಣೆ ನಡೆಸಿ ಅಂದು ನಡೆದ ಸನ್ನಿವೇಶಗಳ ಬಗ್ಗೆ ವಿವರ ಕೇಳಿದ್ದಾರೆ.
ರಾಯ್ ಸಹೋದರ ರಾಬಿನ್ ಡಿಸೋಜ ಹಾಗೂ ತಾಯಿ ಮೆಟಿಲ್ಡಾ ಲೋಬೋ ಕುಶಾಲನಗರ ಡಿವೈಎಸ್ಪಿ ಕಚೇರಿಗೆ ತೆರಳಿ ಅಂದು ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಡಿವೈಎಸ್ಪಿ ಗಂಗಾಧರಪ್ಪ ಅವರನ್ನು ಪ್ರತಿಕ್ರಿಯೆ ಬಯಸಿದಾಗ, ಈ ಪ್ರಕರಣದ ತನಿಖಾಧಿಕಾರಿಯಾಗಿ ತನ್ನನ್ನು ನೇಮಕ ಮಾಡಿದ್ದಾರೆ. ಪ್ರಕರಣದ ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡುತ್ತೇನೆ. ಯಾವುದೇ ವಿಚಾರವನ್ನು ಬಹಿರಂಗಪಡಿಸುವAತಿಲ್ಲ ಎಂದು ತಿಳಿಸಿದ್ದಾರೆ.
ಮೃತ ರಾಯ್ ಡಿಸೋಜ ಅವರ ಸಹೋದರ ರಾಬಿನ್ ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿ, ತನ್ನ ಸಹೋದರನ ಸಾವಿಗೆ ನ್ಯಾಯ ದೊರೆತ್ತಿಲ್ಲ. ಹಲವು ವಿಚಾರಣೆಗಳನ್ನು ಎದುರಿಸಿದ್ದೇವೆ. ಆದರೆ, ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಜೊತೆಗೆ ಪರಿಹಾರ ಮೊತ್ತವೂ ಸರಕಾರದಿಂದ ಲಭ್ಯವಾಗಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.