ತಾ.೧ ರಂದು ಭೂ ಕಕ್ಷೆಯಿಂದ ಹೊರಸಾಗಿ ಚಂದ್ರನೆಡೆಗೆ ಸಾಗಿದ ಚಂದ್ರಯಾನ -೩ ನೌಕೆಯು ಇದೀಗ ಚಂದ್ರ ಕಕ್ಷೆ ಸೇರಿದೆ.
ಚಂದ್ರನ ಸುತ್ತ ನೌಕೆಯು ಹಂತ ಹಂತವಾಗಿ ಕಕ್ಷೆಯನ್ನು ಕಡಿತಗೊಳಿಸುತ್ತ ಪ್ರದಕ್ಷಿಸಲಿದೆ. ತಾ. ೬ ರಂದು (ಇಂದು) ರಾತ್ರಿ ೧೧:೩೦ಕ್ಕೆ ಕಕ್ಷೆಯನ್ನು ಕಿರಿದಾಗಿಸುವ ಮತ್ತೊಂದು ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿರುವ ಇಸ್ರೋ ಯೋಜನಾ ನಿರ್ವಹಣಾ ಕಚೇರಿಯ ಮೂಲಕ ನೆರವೇರಿಸಲಾಗು ವುದಾಗಿ ಇಸ್ರೋ ಪ್ರಕಟಣೆ ತಿಳಿಸಿದೆ. ತಾ. ೨೩ರ ತನಕ ಕಕ್ಷೆ ಕಿರಿದಾಗಿಸುವ ಕಾರ್ಯ ಹಂತ ಹಂತವಾಗಿ ನಡೆಯಲಿದ್ದು, ತಾ. ೨೩ ಅಥವಾ ೨೪ ರಂದು ಚಂದ್ರ ನೆಲೆಯನ್ನು ನೌಕೆಯು ತಲುಪುವ ನಿರೀಕ್ಷೆಯಿದೆ.