ಸೋಮವಾರಪೇಟೆ, ಆ. ೩: ಇಲ್ಲಿನ ಲಯನ್ಸ್ ಸಂಸ್ಥೆ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.
ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸೈನಿಕರಾದ ರಾಜಾರಾಮ್, ಚಂದ್ರಶೇಖರ್, ಎನ್.ಕೆ. ನಿಂಗಪ್ಪ, ಶಶಿಧರ್ ಅವರುಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೈ ಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ಕಾರ್ಗಿಲ್ ಗೆಲುವು ದೇಶಪ್ರೇಮಿಗಳಿಗೆ ಮರೆಯಲಾರದ ಅವಿಸ್ಮರಣೀಯ ದಿನವಾಗಿದೆ. ೧೯೯೯ ರ ಮೇ ತಿಂಗಳಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಪಾಕಿಸ್ತಾನವನ್ನು ನಮ್ಮ ಭಾರತೀಯ ವೀರ ಯೋಧರು ಸದೆ ಬಡಿದು ಅವರು ಅಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದುಕೊಂಡ ಮಹತ್ತರ ದಿನವಾಗಿದೆ ಎಂದು ಸ್ಮರಿಸಿದರು.
ನಮ್ಮ ೫೨೭ ಯೋಧರು ವೀರಮರಣ ಹೊಂದಿದರು. ಆಪರೇಷನ್ ವಿಜಯ್ ಮೂಲಕ ಕಾರ್ಗಿಲ್-ದ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಯೋಧರ ಶೌರ್ಯದ ನೆನಪು ಹಾಗೂ ಗೆಲುವಿನ ನೆನಪಿಗಾಗಿ ಜುಲೈ ೨೬ರ ದಿನವನ್ನು ಕಾರ್ಗಿಲ್ ದಿವಸ್ ಆಗಿ ಆಚರಿಸ ಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗಳು ಭಾರತ ದೇಶವನ್ನು ಪ್ರೀತಿಸಬೇಕು. ದೇಶದ ರಕ್ಷಣೆಯಲ್ಲಿ ಸೈನಿಕರ ತ್ಯಾಗ ಪ್ರಮುಖವಾದುದು ಎಂದು ಹೇಳಿದರು. ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಎ.ಎಸ್. ಮಹೇಶ್, ಖಜಾಂಚಿ ವೀರಪ್ಪ, ಜಿಲ್ಲಾ ಖಜಾಂಚಿ ಕೆ.ಎಂ. ಜಗದೀಶ್, ಮಾಜಿ ಅಧ್ಯಕ್ಷರುಗಳಾದ ಕೆ.ಎನ್. ತೇಜಸ್ವಿ, ಸಿ.ಕೆ. ಮಲ್ಲಪ್ಪ, ಯೋಗೇಶ್, ಎಂ.ಎ. ಹರೀಶ್, ಸಿ.ಕೆ. ರೋಹಿತ್, ಪ್ರಮುಖ ರಾದ ಲಿಂಗರಾಜು, ಬಸವರಾಜು, ಮುಖ್ಯ ಶಿಕ್ಷಕಿ ಲಕ್ಷಿö್ಮ ಇದ್ದರು.