ಕೊಡ್ಲಿಪೇಟೆ, ಆ. ೩: ಸೋಮವಾರಪೇಟೆ ಹಾಗೂ ಕೊಡ್ಲಿಪೇಟೆ ಮುಖ್ಯ ರಸ್ತೆಯ ತಿರುವಿನ ರಸ್ತೆ ಬದಿಯಲ್ಲಿ ಬೃಹತ್ ಮಾವಿನ ಮರ ಒಣಗಿ ಬೀಳುವ ಸ್ಥಿತಿಯಲ್ಲಿದ್ದು, ಅರಣ್ಯ ಇಲಾಖೆ ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದು ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಆಗಿರುವುದರಿಂದ ದಿನನಿತ್ಯ ಹೆಚ್ಚು ವಾಹನಗಳು ಸಂಚರಿಸುತ್ತವೆ ಹಾಗೂ ಹ್ಯಾಂಡ್‌ಪೋಸ್ಟ್ನಲ್ಲಿ ದಿನನಿತ್ಯ ಮಸೀದಿಗೆ ಮಕ್ಕಳು ತೆರಳುವುದರಿಂದ ಮಕ್ಕಳು ಸಹ ಭಯದ ಭೀತಿಯಲ್ಲಿ ತಿರುಗುವ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಇಲಾಖೆಯವರು ಒಣಗಿದ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.