ಕೂಡಿಗೆ, ಆ. ೩: ಕೊಡಗು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಸಭೆಯು ಜಿಲ್ಲಾ ಅಧ್ಯಕ್ಷ ಟಿ.ಕೆ. ಪಾಂಡುರAಗ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರ ಚೌಡೇಶ್ವರಿ ಅಮ್ಮನವರ ದೇವಾಲಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ನೇಕಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ಮಾತನಾಡಿ, ನೇಕಾರರ ಒಕ್ಕೂಟದ ಬೆಳವಣಿಗೆಗೆ ಎಲ್ಲಾ ತಾಲೂಕುಗಳ ನೇಕಾರ ಸಮುದಾಯದವರ ಸಹಕಾರ ಮುಖ್ಯ, ಅದೇ ರೀತಿಯಲ್ಲಿ ನೇಕಾರರ ಒಕ್ಕೂಟದ ಸಮುದಾಯದವರಿಗೆ ಸರಕಾರದಿಂದ ಸಿಗುವ ಸವಲತ್ತು ಗಳನ್ನು ಪಡೆಯಲು ಸದಸ್ಯರು ಮುಂದಾಗಬೇಕೆAದು ಸಲಹೆ ನೀಡಿದರು. ಜಿಲ್ಲೆಯ ಐದು ತಾಲೂಕು ಗಳಲ್ಲಿ ಒಕ್ಕೂಟದ ಸಂಘಟನೆಗೆ ಪೂರಕವಾದ ಜಿಲ್ಲಾ ಸಮಿತಿಯು ಕಾರ್ಯೊನ್ಮುಖವಾಗಬೇಕೆಂದು ಅಭಿಪ್ರಾಯಿಸಿದರು.

ಈ ಸಂದರ್ಭ ರಾಜ್ಯ ನೇಕಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಶೆಟ್ಟಿ, ಉಪಾಧ್ಯಕ್ಷ ಬಲಬದ್ರ ಜಗದೀಶ್, ಕಾರ್ಯದರ್ಶಿ ಬಿ.ಎಸ್. ಲಿಂಗರಾಜ್, ಕಚೇರಿ ಕಾರ್ಯದರ್ಶಿ ದಯಾನಂದ ಶೆಟ್ಟಿಗಾರ್, ರಾಜ್ಯ ಸಮಿತಿಯ ಜಿಲ್ಲೆಯ ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಜಿಲ್ಲಾ ಸಮಿತಿಯ ಸದಸ್ಯರಾದ ಮೋಹನ್, ಕುಶಾಲನಗರ ದೇವಾಂಗ ಸಂಘದ ಅಧ್ಯಕ್ಷ ಡಿ.ವಿ. ರಾಜೇಶ್, ಮಹಿಳಾ ಘಟಕದ ಅಧ್ಯಕ್ಷೆ ಪದ್ಮ ಮಹೇಶ್, ಜಿಲ್ಲಾ ಕಾರ್ಯದರ್ಶಿ ಟಿ.ವಿ. ಪ್ರಕಾಶ್, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್, ಕುಶಾಲನಗರ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ವೇಣು, ಕುಶಾಲನಗರ ದೇವಾಂಗ ಸಂಘದ ಪ್ರಮುಖರಾದ ರೇಣುಕುಮಾರ್, ವಿಜಯ್, ಸೋಮಶೇಖರ್, ರಾಕಿ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.

ಈ ಸಂದರ್ಭ ಜಿಲ್ಲಾ ನೇಕಾರರ ಸಮುದಾಯದ ಒಕ್ಕೂಟದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ನಡೆಯಿತು. ಅಧ್ಯಕ್ಷರಾಗಿ ಟಿ.ಕೆ. ಪಾಂಡುರAಗ ಪುನರ್ ಆಯ್ಕೆಗೊಂಡರು.

ನೇಕಾರ ಸಮುದಾಯದ ಒಕ್ಕೂಟದ ಸದಸ್ಯೆ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದ ಶೋಭಾ ಪ್ರಕಾಶ್ ಅವರನ್ನು ರಾಜ್ಯ ನೇಕಾರರ ಒಕ್ಕೂಟ ಮತ್ತು ಜಿಲ್ಲಾ ನೇಕಾರ ಒಕ್ಕೂಟದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.