ಮಡಿಕೇರಿ, ಆ. ೪: ೨೦೧೯-೨೦ನೇ ಸಾಲಿನಲ್ಲಿ ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ನಡೆದ ಕಾಮಗಾರಿಗಳು ಅಸಮರ್ಪಕ ಹಾಗೂ ಅವೈಜ್ಞಾನಿಕದೊಂದಿಗೆ ಹಣದುರುಪಯೋಗವಾಗಿದೆ ಎಂಬ ಆರೋಪಕ್ಕೆ ಸಂಬAಧಿಸಿದAತೆ ಲೋಕಾಯುಕ್ತ ಅಧಿಕಾರಿಗಳು ಇಂದು ಸ್ಥಳ ಪರಿಶೀಲಿಸಿದರು.
ಐವತ್ತೋಕ್ಲು, ಕೊಳಗದಾಳು, ಬಿನ್ನೋಜಿ, ಪಾಕ, ಚೀರಮ್ಮನಕೊಲ್ಲಿ, ನೀಲೊಕ್ಕಿ ಸೇರಿದಂತೆ ಇನ್ನಿತರೆಡೆ ಒಟ್ಟು ರೂ. ೩೫ ಲಕ್ಷ ವೆಚ್ಚದ ಕುಡಿಯುವ ನೀರು ಒದಗಿಸುವ ಸಂಬAಧ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ ಎಂದು ೧೯.೦೧.೨೦೨೩ ರಂದು ಚೇರಂಬಾಣೆಯ ಎಂ.ಎA. ಮನೋಜ್ ಮಂದಣ್ಣ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು. ಅದರಂತೆ ಅಧಿಕಾರಿಗಳ ತಂಡ ಇಂದು ಭೇಟಿ ನೀಡಿ ಪರಿಶೀಲಿಸಿತು.
ಚೀರಮ್ಮನಕೊಲ್ಲಿಯಲ್ಲಿ ೨೦೧೦ರಲ್ಲಿ ನಿರ್ಮಿಸಿದ ಚೆಕ್‌ಡ್ಯಾಂ ತೋರಿಸಿ ಬಿಲ್ ಮಾಡಲಾಗಿದೆ. ನೀಲೊಕ್ಕಿಯಲ್ಲಿ ಅಸಮರ್ಪಕವಾಗಿ ಚೆಕ್‌ಡ್ಯಾಂ ನಿರ್ಮಿಸಿ ಬಿಲ್ ಮಾಡಲಾಗಿದೆ. ಬಿನ್ನೋಜಿಯಿಂದ ಕೊಳಗದಾಳು ಭಗವತಿ ದೇವಾಲಯ ರಸ್ತೆಯಲ್ಲಿ ಅಳವಡಿಸಿರುವ ಸಾವಿರಾರು ಮೀಟರ್ ಪೈಪ್‌ಲೈನ್ ಅವೈಜ್ಞಾನಿಕದಿಂದ ಕೂಡಿದೆ. ಪಂಪ್‌ಹೌಸ್ ನಿರ್ಮಿಸದೆ ಅನುದಾನ ಬಿಡುಗಡೆ ಮಾಡಿಕೊಳ್ಳಲಾಗಿದೆ. ಜೊತೆಗೆ ಹಲವು ಕಾಮಗಾರಿಗಳು ಸರಿಯಾಗಿ ನಡೆದಿಲ್ಲ. ಇವೆಲ್ಲ ಕಾಮಗಾರಿಗಳಲ್ಲಿ ಹಣ ದುರುಪಯೋಗವಾಗಿದೆ ಎಂದು ದೂರುದಾರರು ಆರೋಪಿಸಿದ್ದರು. ಇಲಾಖೆಯ ಅಧಿಕಾರಿಗಳಾದ ಶ್ರೀಕಂಠಯ್ಯ, ರಶ್ಮಿ, ಅಂಬೇಡ್ಕರ್ ಎಸ್ ಸನಗುಂದ ಹಾಗೂ ಗುತ್ತಿಗೆದಾರ ಬಾಲಚಂದ್ರ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಲಿಖಿತ ದೂರಿನ ಮೂಲಕ ದೂರುದಾರರು ಆಗ್ರಹಿಸಿದ್ದರು. ೩ ವರ್ಷಗಳ ಹಿಂದೆ ಈ ಪ್ರಕರಣ ಸಂಬAಧ ಲೋಕಾಯುಕ್ತದ ಗಮನಸೆಳೆಯಲು ಗ್ರಾಮಸಭೆಯಲ್ಲಿಯೂ ತೀರ್ಮಾನಿಸಲಾಗಿತ್ತು.
ಸೇರಿದಂತೆ ಇನ್ನಿತರೆಡೆ ಒಟ್ಟು ರೂ. ೩೫ ಲಕ್ಷ ವೆಚ್ಚದ ಕುಡಿಯುವ ನೀರು ಒದಗಿಸುವ ಸಂಬAಧ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ ಎಂದು ೧೯.೦೧.೨೦೨೩ ರಂದು ಚೇರಂಬಾಣೆಯ ಎಂ.ಎA. ಮನೋಜ್ ಮಂದಣ್ಣ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು. ಅದರಂತೆ ಅಧಿಕಾರಿಗಳ ತಂಡ ಇಂದು ಭೇಟಿ ನೀಡಿ ಪರಿಶೀಲಿಸಿತು.