ಕುಶಾಲನಗರ, ಆ. ೩: ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಕಾಡಾನೆಯ ಕಳೇಬರವನ್ನು ಮೃತಪಟ್ಟ ಸ್ಥಳದಲ್ಲೇ ಮಣ್ಣಿನಲ್ಲಿ ಹೂತು ಹಾಕಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿ ಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾ ಖೆಯ ಅಧಿಕಾರಿಗಳು ಆನೆಯ ಕಳೇಬರವನ್ನು ಅಲ್ಲಿಂದ ತೆಗೆದು ಮತ್ತೊಂದು ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಿದ ಘಟನೆ ವರದಿಯಾಗಿದೆ.

ಸುಂಟಿಕೊಪ್ಪ ವ್ಯಾಪ್ತಿಯ ಕಂಬಿ ಬಾಣೆ ಸಮೀಪ ಅತ್ತೂರು ನಲ್ಲೂರಿ ನಲ್ಲಿ ಇತ್ತೀಚೆಗೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದ ಕಾಡಾನೆಯ ಕಳೇಬರ ವನ್ನು ಮರಣೋತ್ತರ ಪರೀಕ್ಷೆ ಬಳಿಕ ಅಲ್ಲಿಯೆ ಮಣ್ಣಿನಲ್ಲಿ ಹೂತು ಹಾಕಿ ಅಂತ್ಯಕ್ರಿಯೆ ನಡೆಸಲಾಗಿತ್ತು.

ಇದರಿಂದ ಸ್ಥಳೀಯರಿಗೆ ಸಮಸ್ಯೆ ಗಳು ಉಂಟಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆರೋಪಿಸಿ ನಿನ್ನೆ ದಿನ ಸಭೆ ನಡೆಸಿ, ತಕ್ಷಣವೇ ಆನೆಯ ಕಳೇಬರವನ್ನು ತೆಗೆದು ಸುಟ್ಟು ಹಾಕಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದರು.

ಇಲ್ಲದಿದ್ದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿಗಳು ಮತ್ತು ಮಡಿಕೇರಿ ಅರಣ್ಯ ಕಚೇರಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು.

ಈ ಬೆಳವಣಿಗೆಗಳ ನಡುವೆ ಇಂದು ಅರಣ್ಯ ಇಲಾಖೆಯ ಮೇಲ ಧಿಕಾರಿಗಳ ಸೂಚನೆಯಂತೆ ಉಪ ವಲಯ ಅರಣ್ಯ ಅಧಿಕಾರಿ ದೇವಯ್ಯ ಮತ್ತು ಸಿಬ್ಬಂದಿ ಆನೆಯ ಕಳೇಬರ ವನ್ನು ಅಲ್ಲಿಂದ ತೆಗೆದು ಟ್ರಾö್ಯಕ್ಟರ್ ಮೂಲಕ ಆನೆ ಕಾಡು ಅರಣ್ಯಕ್ಕೆ ಸಾಗಿಸಿ ಅಂತ್ಯಕ್ರಿಯೆ ನಡೆಸಿದರೆಂದು ಕುಶಾಲ ನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಂ ತಿಳಿಸಿದ್ದಾರೆ.

ಕಾಫಿ ತೋಟದ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ಆನೆ ಸಾವಿಗೀಡಾಗಿದೆ ಎಂದು ಆರೋಪಿಸಿ ಕಂಬಿಬಾಣೆಯ ನಿವಾಸಿ ಉದಯ ಮತ್ತು ಅವರ ಪುತ್ರನ ಮೇಲೆ ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸಿದೆ. - ಸಿಂಚು