ಮಡಿಕೇರಿ, ಆ. ೪: ನಗರದ ಮೊಬೈಲ್ ಶಾಪ್ವೊಂದರಲ್ಲಿ ಮಹಿಳೆಯೊಬ್ಬರು ಟೇಬಲ್ ಮೇಲೆ ಇರಿಸಿದ್ದ ಬ್ಯಾಗ್ ಅನ್ನು ಅಂತರರಾಜ್ಯ ಕಾರ್ಮಿಕರು ಕದ್ದೊಯ್ದ ಘಟನೆ ನಡೆದಿದೆ.
ಮೊಬೈಲ್ ಶಾಪ್ಗೆ ಆಗಮಿಸಿದ ಮಡಿಕೇರಿ ನಿವಾಸಿ ಮಹಿಳಾ ಗ್ರಾಹಕಿಯೊಬ್ಬರು ವ್ಯವಹಾರ ನಡೆಸುವ ಸಂದರ್ಭ ಬ್ಯಾಗ್ ಅನ್ನು ಪಕ್ಕದ ಟೇಬಲ್ ಮೇಲೆ ಇರಿಸಿದ್ದರು. ಇದನ್ನು ಗಮನಿಸಿದ ಮೂವರು ಮೆಲ್ಲನೆ ಯಾರ ಗಮನಕ್ಕೆ ಬಾರದಂತೆ ಬ್ಯಾಗ್ ಅನ್ನು ಕದ್ದೊಯ್ದಿದ್ದಾರೆ.
ನಂತರ ಗ್ರಾಹಕಿ ಬ್ಯಾಗ್ ಹುಡುಕಿದಾಗ ಪತ್ತೆಯಾಗಿಲ್ಲ. ಇದರಿಂದ ಗಾಬರಿಗೊಂಡ ಅವರು ಹುಡುಕಾಟ ಆರಂಭಿಸಿದ್ದಾರೆ. ಸ್ಥಳದಲ್ಲಿದ್ದ ಸಾಮಾಜಿಕ ಕಾರ್ಯಕರ್ತ ತೆನ್ನೀರ ಮೈನಾ ಸಿಸಿ ಕ್ಯಾಮರದ ದೃಶ್ಯಾವಳಿ ಪರಿಶೀಲನೆ ನಡೆಸುವಂತೆ ಮಾಲೀಕರಿಗೆ ತಿಳಿಸಿದ್ದಾರೆ. ಅದರಲ್ಲಿ ದೃಶ್ಯ ಸೆರೆಯಾಗಿದ್ದು, ಮೈನಾ ಅವರು ಕಳ್ಳರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಗಮನಿಸಿದ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.
ಘಟನೆಗೆ ಮುನ್ನ ಮಹಿಳೆ ಬ್ಯಾಗ್ನೊಳಗಿಟ್ಟಿದ್ದ ನಗದು ಹೊಂದಿದ್ದ ಚಿಕ್ಕ ವ್ಯಾಲೆಟ್ ಅನ್ನು ಕೈಯಲ್ಲಿ ಇಟ್ಟುಕೊಂಡಿದ್ದರು. ಇದರಿಂದ ಹಣ ಕಳವಾಗುವುದು ತಪ್ಪಿದಂತಾಗಿದೆ. ಬ್ಯಾಗ್ನಲ್ಲಿ ಬೆಲೆ ಬಾಳುವ ವಸ್ತು ಇರಲಿಲ್ಲ. ಈ ಸಂಬAಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ, ಕೆಲಸಕ್ಕೆಂದು ಬಂದ ಕಾರ್ಮಿಕರು ಈ ರೀತಿ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಜನವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.