(ವಿಶೇಷ ವರದಿ: ಹೆಚ್.ಕೆ. ಜಗದೀಶ್)ಗೋಣಿಕೊಪ್ಪಲು, ಆ.೩: ಪೊನ್ನಂಪೇಟೆ ನೂತನ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಾಗಿದ್ದ ಭೂಮಿಕೇಂದ್ರ, ಸಕಾಲಕೇಂದ್ರ ಹಾಗೂ ಕಡತ ಕೊಠಡಿಯ ರೆಕಾರ್ಡ್ ರೂಮ್‌ಗಳ ಸೇವೆಯು ಕೊನೆಗೂ ಮಂಜೂರಾಗಿದ್ದು ತಾ. ೫ ರಿಂದ ಇವುಗಳ ಸೇವೆಯು ಇಲ್ಲಿನ ನಾಗರಿಕರಿಗೆ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಹಾಗೂ ಅಧಿಕ ಅಧಿಕಾರಿಗಳು ಬಿರುಸಿನ ಕೆಲಸದಲ್ಲಿ ತೊಡಗಿದ್ದಾರೆ. ರೆಕಾರ್ಡ್ ರೂಮಿನಲ್ಲಿ ೩೦ ಸಾವಿರಕ್ಕೂ ಅಧಿಕ ಕಡತಗಳನ್ನು ವ್ಯವಸ್ಥಿತವಾಗಿ ಜೋಡಿಸಿಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಸಾರ್ವಜನಿಕರ ಸೇವೆಯ ಒತ್ತಡದ ನಡುವೆ ಈ ಕೆಲಸವನ್ನು ಇಲ್ಲಿಯ ಸಿಬ್ಬಂದಿಗಳು ಮಾಡುತ್ತಿದ್ದಾರೆ.
ನಾಗರಿಕರಿಗೆ ಲಭ್ಯವಾಗುವ ಸೇವೆಗಳನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ತಾ.೫ ರ ಪೂರ್ವಾಹ್ನ ೧೧ ಗಂಟೆಗೆ ಲೋಕಾರ್ಪಣೆ ಮಾಡಲಿ ದ್ದಾರೆ. ಕಳೆದ ಮೂರು ವರ್ಷಗಳಿಂದ ನಾಗರಿಕರ ಬಹು ಬೇಡಿಕೆಯಾಗಿದ್ದ ಪೊನ್ನಂಪೇಟೆ ನೂತನ ತಾಲೂಕು ಪ್ರಾರಂಭಗೊAಡಿದ್ದರೂ ಕಡತಕ್ಕಾಗಿ ವೀರಾಜಪೇಟೆಯ ತಾಲೂಕು ಕೇಂದ್ರಕ್ಕೆ ತೆರಳಿ ದಿನಗಟ್ಟಲೆ ಸಮಯ ಕಳೆಯಬೇಕಿತ್ತು. ಇದರಿಂದ ಸಹಜವಾಗಿಯೇ ತಾಲೂಕು ಕೇಂದ್ರ ಇದ್ದರೂ ವೀರಾಜಪೇಟೆ ತಾಲೂಕು ಕೇಂದ್ರಕ್ಕೆ ತೆರಳಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಾಗರಿಕರ ದ್ದಾಗಿತ್ತು.
ನೂತನ ತಾಲೂಕಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸುವಂತೆ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿಯು ಹಾಗೂ ನಾಗರಿಕರ ವೇದಿಕೆ ನಿರಂತರವಾಗಿ ಜಿಲ್ಲಾಧಿಕಾರಿ ಗಳ ಗಮನ ಸೆಳೆದಿತ್ತು. ಕಳೆದ ೨ ತಿಂಗಳ ಹಿಂದೆ ಕ್ಷೇತ್ರದ ನೂತನ ಶಾಸಕರಾದ ಎ.ಎಸ್.ಪೊನ್ನಣ್ಣ ಅವರಿಗೆ ಗೌರವ ನೀಡುವ ಕಾರ್ಯಕ್ರಮದಲ್ಲಿ ನಾಗರಿಕ ವೇದಿಕೆಯು ಪೊನ್ನಂಪೇಟೆ ನೂತನ ತಾಲೂಕಿನ ಸಮಸ್ಯೆಗಳನ್ನು ಬಗೆ ಹರಿಸುವಂತೆ ಮನವಿ ಪತ್ರ ಸಲ್ಲಿಸಿ ಗಮನ ಸೆಳೆದಿತ್ತು. ಸಭೆಯಲ್ಲಿ ನೂತನ ಶಾಸಕರು ಈ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದ್ದರು.
ಇದೀಗ ವೀರಾಜಪೇಟೆ ತಾಲೂಕು ನೂತನ ತಹಶೀಲ್ದಾರ್ ರಾಮಚಂದ್ರರವರ ವಿಶೇಷ ಆಸಕ್ತಿಯಿಂದ ಪೊನ್ನಂಪೇಟೆ ತಾಲೂಕಿನ ಬಾಳೆಲೆ, ಶ್ರೀಮಂಗಲ, ಹುದಿಕೇರಿ ಹಾಗೂ ಪೊನ್ನಂಪೇಟೆ ಹೋಬಳಿಗೆ ಸಂಬAಧಿಸಿದ ೩೦ ಸಾವಿರ ಕಡತವನ್ನು ಪೊನ್ನಂಪೇಟೆ ತಾಲೂಕು ಕೇಂದ್ರಕ್ಕೆ ವ್ಯವಸ್ಥಿತವಾಗಿ ರವಾನೆ ಮಾಡುವಲ್ಲಿ ಯಶಸ್ವಿ ಯಾಗಿದ್ದಾರೆ. ಕಡತ ವಿಲೇವಾರಿಗಾಗಿ ಕಳೆದ ಎರಡು ತಿಂಗಳಿನಿAದ ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ಅವರು ತಮ್ಮ ಸಹ ಸಿಬ್ಬಂದಿಗಳ ಸಹಕಾರ ಪಡೆದು ರೆಕಾರ್ಡ್ ರೂಮ್‌ನಲ್ಲಿದ್ದ ನಾಲ್ಕು ಹೋಬಳಿಗಳ ಕಡತವನ್ನು ವಿಂಗಡಿಸಿ ಇದನ್ನು ವ್ಯವಸ್ಥಿತವಾಗಿ ತರುವ ಮೂಲಕ ಪೊನ್ನಂಪೇಟೆಯ ತಾಲೂಕು ಕಚೇರಿಯ ನೂತನ ಕೊಠಡಿಯಲ್ಲಿ ಅಚ್ಚುಕಟ್ಟಾಗಿ ಜೋಡಣೆ ಮಾಡಿದ್ದಾರೆ. ಇದರಿಂದ ನಾಗರಿಕರು ಇನ್ನು ಮುಂದಕ್ಕೆ ತಮ್ಮ ಕಡತಕ್ಕಾಗಿ ವೀರಾಜಪೇಟೆ ತಾಲೂಕು ಕಚೇರಿಗೆ ಅಲೆದಾಡುವುದು ತಪ್ಪಿದಂತಾಗಿದೆ.
ಪೊನ್ನAಪೇಟೆ ತಾಲೂಕು ಕೇಂದ್ರದಲ್ಲಿ ನಾಗರಿಕರ ಸೇವೆಗಾಗಿ ಭೂಮಿ ಕೇಂದ್ರ ಹಾಗೂ ಸಕಾಲ ಕೇಂದ್ರವು ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಾರ್ಯ ನಿರ್ವಹಿಸಲಿದ್ದು ಇದರ ನಿರ್ವಹಣೆಗೆ ಬೇಕಾದ ಸಿಬ್ಬಂದಿಗಳನ್ನು ಸರ್ಕಾರ ನೇಮಿಸಿದೆ. ಭೂಮಿ ಕೇಂದ್ರದಲ್ಲಿ ಆರ್.ಟಿ.ಸಿ. ವಿತರಣೆ ಅರ್ಜಿ ಸ್ವೀಕಾರ ಮ್ಯೂಟೆಷನ್ ಕಾಪಿ ಪಡೆಯುವುದು ಸೇರಿದಂತೆ ಇನ್ನಿತರ ಸೇವೆಯು ಜನತೆಗೆ ಲಭ್ಯವಾಗಲಿದೆ. ಇದರೊಂದಿಗೆ ಸರ್ಕಾರದ ಬಹುಮುಖ್ಯ ಯೋಜನೆಯಲ್ಲಿ ಒಂದಾದ ಸಕಾಲ ಕೇಂದ್ರವು ಕಾರ್ಯ ನಿರ್ವಹಿಸಲಿದೆ. ಪೊನ್ನಂಪೇಟೆ ನೂತನ ತಾಲೂಕು ೨೦೨೦ ನವೆಂಬರ್ ತಿಂಗಳಿನಲ್ಲಿ ರಚನೆಗೊಂಡಿತ್ತು. ಕಳೆದ ೩ ವರ್ಷ ಗಳಿಂದ ಭೂಮಿ ಕೇಂದ್ರ, ಭೂದಾಖಲೆ ಹಾಗೂ ಕಡತ ಕೊಠಡಿ, ಸಕಾಲ ಯೋಜನೆ ಜಾರಿ, ಸಿಬ್ಬಂದಿ ನಿಯೋಜನೆ ಹಾಗೂ ಆಹಾಯ ಇಲಾಖೆಯ ಸಿಬ್ಬಂದಿ ನೇಮಕಾತಿ ವಿಳಂಬ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿತ್ತು.
ಸುಸಜ್ಜಿತ ಕಟ್ಟಡವಿದ್ದರೂ ಸಕಲ ಸವಲತ್ತುಗಳನ್ನು ಹೊಂದಿದ್ದರೂ ಸಹ ಭೂಮಿ ಕೇಂದ್ರವನ್ನು ಆರಂಭಿಸುವಲ್ಲಿ ಕೆಲವು ಇಲಾಖಾಧಿಕಾರಿಗಳ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿತ್ತು. ಅಗತ್ಯ ದಾಖಲೆಗಳಿಗಾಗಿ ಗ್ರಾಮೀಣ ಭಾಗದ ರೈತರು ಪೊನ್ನಂಪೇಟೆ ತಾಲೂಕಿನಿಂದ ವೀರಾಜಪೇಟೆ ತಾಲೂಕು ಕಚೇರಿಗೆ ತೆರಳುತ್ತಿರುವುದು ಸರ್ವೆ ಸಾಮಾನ್ಯವಾಗಿತ್ತು.
ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿ ಭೂಮಿ ತತ್ರಾಂಶ ಅಳವಡಿಕೆಯಾಗಿಲ್ಲದಿರುವುದು, ಭೂ ದಾಖಲೆಗಳ ಹಳೆ ಕಡತಗಳು - ಆಕಾರ್ ಬಂದ್ ಇತರ ದಾಖಲೆಗಳು ಪೊನ್ನಂಪೇಟೆ ತಾಲೂಕು ಕಚೇರಿಗೆ ವೀರಾಜಪೇಟೆ ಕಚೇರಿಯಿಂದ ಇನ್ನೂ ಕೂಡ ವರ್ಗಾಯಿಸದಿರುವ ಬಗ್ಗೆ ಹಾಗೂ ಭೂಮಿ ಶಾಖೆಗಾಗಿ ಕಂಪ್ಯೂಟರ್ ಹಾಗೂ ಇತರೆ ಉಪಕರಣಗಳನ್ನು ಖರೀದಿಸದೆ ಇರುವುದನ್ನು ಮನಗಂಡಿದ್ದ ಪೊನ್ನಂಪೇಟೆ ನಾಗರಿಕ ವೇದಿಕೆಯ ಪದಾಧಿಕಾರಿಗಳು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಕೊಡಗಿಗೆ ಭೇಟಿ ನೀಡಿದ್ದ ವೇಳೆ ಭೇಟಿ ಮಾಡಿ ಗಮನ ಸೆಳೆದಿದ್ದರು.
ದ.ಕೊಡಗಿನ ಗ್ರಾಮೀಣ ಭಾಗದ ಜನರು, ರೈತರು, ಕೃಷಿಕರು, ವಯೋವೃದ್ಧರು ಸೇರಿದಂತೆ ಹಲವು ಮಂದಿ ದೂರದ ವೀರಾಜಪೇಟೆಯ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನೂತನ ತಾಲೂಕು ರಚನೆ ಆಗಿತ್ತು. ನಾಗರಿಕರ ನಿರಂತರ ಹೋರಾಟದ ಫಲವಾಗಿ ನೂತನ ತಾಲೂಕು ಅಸ್ತಿತ್ವಕ್ಕೆ ಬಂದಿತ್ತು. ಪೊನ್ನಂಪೇಟೆ ತಾಲೂಕಿಗೆ ೪೯ ಗ್ರಾಮಗಳು ಮತ್ತು ೪ ಹೋಬಳಿಗಳನ್ನೊಳಗೊಂಡ ೨೧ ಗ್ರಾಮ ಪಂಚಾಯ್ತಿಗಳು ಒಳಗೊಂಡಿವೆ. ಕಂದಾಯ ಇಲಾಖೆಗೆ ಸಂಬAಧಿಸಿದ ಕೆಲಸಗಳು ಇನ್ನು ಮುಂದೆ ಈ ಕಚೇರಿಯಲ್ಲಿ ನಡೆಯಲಿದೆ. ಭೌಗೋಳಿಕವಾಗಿ ವಿಸ್ತಾರವಾಗಿರುವ ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗದಿಂದ ಹಲವಾರು ಸಮಸ್ಯೆಗಳನ್ನು ಹೊತ್ತು ತರುವ ಜನರಿಗೆ ಇಲಾಖೆಯ ಸೇವೆ ಲಭ್ಯವಾಗಲಿದೆ.
ಸಮಾಧಾನ ತಂದಿದೆ
ರೆವಿನ್ಯೂ ಇಲಾಖೆಯ ಕೆಲಸಗಳಿಗೆ ವೀರಾಜಪೇಟೆಗೆ ತೆರಳುವುದನ್ನು ಕಡಿಮೆ ಮಾಡುವ ಸಲುವಾಗಿ ಪೊನ್ನಂಪೇಟೆ ತಾಲೂಕು ರಚನೆಗೊಂಡಿದೆ. ಆದರೆ ಇಲ್ಲಿ ಭೂಮಿ ಕೇಂದ್ರ, ಸಕಾಲ ಹಾಗೂ ರೆಕಾರ್ಡ್ ರೂಮ್‌ನಲ್ಲಿ ಕಡತಗಳು ಇಲ್ಲದೆ ಜನರು ಸಂಕಷ್ಟ ಅನುಭವಿಸಿದ್ದರು. ನಾಗರಿಕ ವೇದಿಕೆ ವತಿಯಿಂದ ಈ ಬಗ್ಗೆ ಸಂಬAಧಿಸಿದವರಿಗೆ ನಿರಂತರ ಪತ್ರ ವ್ಯವÀಹಾರ ನಡೆಸಿ ಒತ್ತಡ ಹೇರಲಾಗಿತ್ತು. ಇದೀಗ ಪೊನ್ನಂಪೇಟೆ ತಾಲೂಕಿಗೆ ಸಂಬAಧಿಸಿದ ಭೂ ದಾಖಲೆಗಳು ವೀರಾಜಪೇಟೆಯಿಂದ ಬಂದಿವೆ. ಇದರೊಂದಿಗೆ ಭೂಮಿ ಹಾಗೂ ಸಕಾಲ ಕೇಂದ್ರಗಳು ನಾಗರಿಕರ ಸೇವೆಗೆ ಲಭ್ಯವಾಗಲಿದೆ. ಬಹು ಕಾಲದ ಬೇಡಿಕೆ ಈಡೇರಿದ ಸಮದಾನ ತಂದಿದೆ.
-ಮತ್ರಂಡ ಪಿ.ಅಪ್ಪಚ್ಚು, ನಾಗರಿಕ ವೇದಿಕೆ, ಪೊನ್ನಂಪೇಟೆ