ಮಡಿಕೇರಿ, ಆ. ೩: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ ಯೋಜನೆಗೆ ಸಂಬAಧಿಸಿ ದಂತೆ ಕೊಡಗು ಜಿಲ್ಲೆಯಲ್ಲಿ ಇನ್ನೂ ೬೬,೩೦೧ ಮಂದಿ ಗ್ರಾಹಕರು ಅರ್ಜಿ ಸಲ್ಲಿಸಲು ಬಾಕಿ ಇದ್ದು, ಇದುವರೆಗೆ ೧೧೪೧೪೯ ಅರ್ಜಿಗಳು ಸಲ್ಲಿಸಲ್ಪಟ್ಟಿವೆ.

ಈ ಬಗ್ಗೆ ‘ಶಕ್ತಿ’ಗೆ ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಅನಿತಾ ಬಾಯಿ ಮಾಹಿತಿ ನೀಡಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ೪೮,೮೭೦ ಮಂದಿ ಅರ್ಜಿ ಸಲ್ಲಿಸಿದ್ದು, ೧೮,೨೪೩ ಮಂದಿ ಅರ್ಜಿ ಸಲ್ಲಿಸಲು ಬಾಕಿ ಇದೆ. ಕುಶಾಲನಗರ ತಾಲೂಕಿನಲ್ಲಿ ೪೦,೧೭೨ ಮಂದಿ ಅರ್ಜಿ ಹಾಕಿದ್ದು, ೧೩,೩೯೩ ಮಂದಿ ಅರ್ಜಿ ಸಲ್ಲಿಸಲು ಬಾಕಿ ಇದೆ. ಸೋಮವಾರಪೇಟೆ ತಾಲೂಕಿನಲ್ಲಿ ೨೭೮೬೦ ಅರ್ಜಿಗಳು ಸಲ್ಲಿಕೆಯಾಗಿದ್ದು, ೮,೧೭೯ ಅರ್ಜಿಗಳು ಸಲ್ಲಿಕೆಗೆ ಬಾಕಿ ಉಳಿದಿದೆ. ವೀರಾಜಪೇಟೆ ತಾಲೂಕಿನಲ್ಲಿ ೩೧,೫೧೭ ಅರ್ಜಿಗಳು ಸಲ್ಲಿಸಲ್ಪಟ್ಟಿದ್ದು, ೧೨,೪೩೫ ಅರ್ಜಿಗಳು ಸಲ್ಲಿಕೆಗೆ ಬಾಕಿ ಇದೆ. ಪೊನ್ನಂಪೇಟೆ ತಾಲೂಕಿನಲ್ಲಿ ೩೨,೦೩೧ ಅರ್ಜಿಗಳು ಸಲ್ಲಿಕೆಯಾಗಿದ್ದು, ೧೪,೦೫೧ ಅರ್ಜಿಗಳು ಸಲ್ಲಿಕೆಯಾಗಿಲ್ಲ. ಜೂ. ೧೮ ರಿಂದ ಈ ಯೋಜನೆಗೆ ಸಂಬAಧಿಸಿದAತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊAಡಿದ್ದು, ಜುಲೈ ೨೭ರವರೆಗೆ ಜಿಲ್ಲೆಯಲ್ಲಿ ಒಟ್ಟು ೧,೮೦,೪೫೦ ಫಲಾನುಭವಿಗಳ ಪೈಕಿ ೧,೧೪,೧೪೯ ಫಲಾನುಭವಿಗಳಿಂದ ಅರ್ಜಿಗಳು ಸಲ್ಲಿಸಲ್ಪಟ್ಟಿವೆ ಎಂದು ಅನಿತಾ ಬಾಯಿ ತಿಳಿಸಿದ್ದಾರೆ.

ಗೃಹಜ್ಯೋತಿ ಯೋಜನೆ ಈಗಾಗಲೇ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಆರಂಭಗೊAಡಿದೆ. ಜುಲೈ ೨೭ರವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಫಲಾನುಭವಿಗಳಿಗೆ ಆಗಸ್ಟ್ನಿಂದ ಈ ಯೋಜನೆಯ ಫಲದೊರೆತಿದ್ದು, ಈ ಆಗಸ್ಟ್ ತಿಂಗಳ ತಾ. ೨೭ರ ಒಳಗಡೆ ನೋಂದಾವಣೆ ಮಾಡುವ ಫಲಾನುಭವಿಗಳಿಗೆ ಸೆಪ್ಟೆಂಬರ್ ತಿಂಗಳಿನಿAದ ಯೋಜನೆಯ ಲಾಭ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.

೧೨೦೨ ಮಂದಿಗೆ ದೊರೆಯದ ಲಾಭ

ಜುಲೈ ೨೭ರವರೆಗೆ ಸಲ್ಲಿಸಲ್ಪಟ್ಟ ಅರ್ಜಿಗಳ ಪೈಕಿ ೧೨೦೨ ಅರ್ಜಿಗಳ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರೆತಿಲ್ಲ. ಸಮರ್ಪಕ ದಾಖಲಾತಿ ಕೊರತೆ ಹಾಗೂ ತಂತ್ರಾAಶ ದೋಷದಿಂದ ೧೨೦೨ ಅರ್ಜಿಗಳು ಗೃಹಜ್ಯೋತಿ ಯೋಜನೆಗೆ ಒಳಪಟ್ಟಿಲ್ಲ.

ಅಂತಹ ಫಲಾನುಭವಿಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿದೆಯಾದರೂ ಈ ಬಗ್ಗೆ ಇನ್ನೂ ಕೂಡ ಸೂಕ್ತ ನಿರ್ದೇಶನ ಬಂದಿಲ್ಲ ಎಂದು ಅನಿತಾಬಾಯಿ ಮಾಹಿತಿ ನೀಡಿದರು. ಈ ಯೋಜನೆ ಸಂಬAಧದ ಹಣ ವಿದ್ಯುತ್ ನಿಗಮಕ್ಕೆ ಸರ್ಕಾರದ ಮಟ್ಟದಲ್ಲೇ ಪಾವತಿಯಾಗಲಿದೆ ಎಂದು ಅವರು ಹೇಳಿದರು. - ಉಜ್ವಲ್ ರಂಜಿತ್