ವೀರಾಜಪೇಟೆ, ಆ. ೩: ಕೆದಮುಳ್ಳೂರು ಗ್ರಾಮ ಪಂಚಾ ಯಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೆಫ್ರಿ ಉತ್ತಪ್ಪ ಲಾಟರಿ ಮೂಲಕ ಆಯ್ಕೆ ಆಗಿದ್ದಾರೆ.

ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ದ್ವಿತೀಯ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಿತು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವೀರಾಜಪೇಟೆ ತಾಲೂಕು ಸಹಾಯಕ ನಿರ್ದೇಶಕ ಡಾ.ನವೀನ್ ಕುಮಾರ್ ಚುನಾವಣೆ ಅಧಿಕಾರಿಯಾಗಿದ್ದರು.

ಗ್ರಾಮ ಪಂಚಾಯಿತಿಯಲ್ಲಿ ೧೩ ಮಂದಿ ಸದಸ್ಯರಿದ್ದು, ಏಳು ಮಂದಿ ಭಾ.ಜ.ಪ ಬೆಂಬಲಿತ ಅಭ್ಯರ್ಥಿಗಳು, ೬ ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮಾಳೇಟಿರ ಕೆ. ಜೆಫ್ರಿ ಉತ್ತಪ್ಪ, ಭಾ.ಜ.ಪ ಬೆಂಬಲಿತ ಮಾಳೇಟಿರ ಸಾಬಾ ಮುತ್ತಪ್ಪ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಭಾ.ಜ.ಪ ಬೆಂಬಲಿತ ಎಂ.ಎA ಪರಮೇಶ್ವರ ಮತ್ತು ಕಾಂಗ್ರೆಸ್ ಬೆಂಬಲಿತ ಕೊರಿಯಾರು ತಾಯಮ್ಮ ನಾಮಪತ್ರ ಸಲ್ಲಿಸಿದ್ದರು. ಒಟ್ಟು ೧೩ ಮತಗಳು ಚಲಾವಣೆ ಗೊಂಡವು. ಆದರೆ ಮತದಾನದಲ್ಲಿ ಓರ್ವ ಸದಸ್ಯರು ನಿಗದಿತ ಸ್ಥಳದಲ್ಲಿ ಮತ ಗುರುತು ಹಾಕದ್ದರಿಂದ ತಿರಸ್ಕೃತಗೊಂಡಿತ್ತು. ಚುನಾವಣಾ ಅಧಿಕಾರಿ ತಿರಸ್ಕೃತವಾದ ಮತಪತ್ರವನ್ನು ಸದಸ್ಯರ ಮುಂದೆ ಪ್ರದರ್ಶನ ಮಾಡಿದರು. ಬಳಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಿಗೆ ಸಮ ಮತಗಳು ಲಭ್ಯವಾದ ಹಿನ್ನೆಲೆಯಲ್ಲಿ ಲಾಟರಿ ಚೀಟಿ ಎತ್ತುವ ಮೂಲಕ ಅಧ್ಯಕ್ಷರ ಆಯ್ಕೆ ನಡೆಸಲಾಗುತ್ತದೆ ಎಂದು ಚುನಾವಣಾ ಅಧಿಕಾರಿ ಹೇಳಿದರು. ಇದಕ್ಕೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿದರು. ನಂತರ ಲಾಟರಿ ಚೀಟಿ ಆಯ್ಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಾಳೇಟಿರ ಕೆ.ಜೆಫ್ರಿ ಉತ್ತಪ್ಪ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಭಾ.ಜ.ಪ ಅಭ್ಯರ್ಥಿ ಎಂ.ಎA ಪರಮೇಶ್ವರ ಪರ ಏಳು ಮತಗಳು ಕಾಂಗ್ರೆಸ್ ಅಭ್ಯರ್ಥಿ ಕೊರಿಯಾರು ತಾಯಮ್ಮ ಅವರಿಗೆ ೬ ಮತಗಳು ಲಭಿಸಿತು. ಭಾ.ಜ.ಪ ಅಭ್ಯರ್ಥಿ ಎಂ.ಎA ಪರಮೇಶ್ವರ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಸಭಾಂಗಣದಿAದ ಹೊರ ಬಂದ ಭಾ.ಜ.ಪ ಸದಸ್ಯರು ಪಕ್ಷದ ಮುಖಂಡರ ಬಳಿ ಚುನಾವಣೆ ಸಂದರ್ಭ ನಡೆದ ಬೆಳವಣಿಗೆÀಗಳನ್ನು ಮಂಡಿಸಿದರು. ಭಾ.ಜ.ಪ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಚಂಗಚAಡ ರತ್ನ ಮತ್ತು ಪಕ್ಷದ ಇತರ ಸದಸ್ಯರು ತಿರಸ್ಕೃತ ಮತ ಪತ್ರದಲ್ಲಿ ನಮೂದು ಮಾಡಿರುವ ಮತ ಗುರುತು ಸೆರಿಯಾಗಿದ್ದು, ಚುನಾವಣೆಯನ್ನು ಸಮರ್ಪಕವಾಗಿ ನಡೆಸಿಲ್ಲ ಎಂದು ಆರೋಪಿಸಿದರು. ಅಧಿಕಾರಿಯು ಸರಿಯಾದ ಉತ್ತರ ನೀಡುವವರೆಗೆ ಅವರನ್ನು ಸ್ಥಳದಿಂದ ತೆರಳಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಸ್ಥಳಕ್ಕೆ ಗ್ರಾಮಾಂ ತರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಆಗಮಿಸಿ ವಾತಾ ವರಣ ಶಾಂತಗೊಳಿಸಿದರು.

ಈ ಚುನಾವಣೆ ಅಸಿಂಧುವಾ ಗಿದ್ದು, ಈ ಸಂಬAಧ ವೀರಾಜಪೇಟೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುತ್ತದೆ ಮತ್ತು ಕಾನೂನು ಹೋರಾಟ ಮಾಡುತ್ತೇವೆ ಎಂದು ಭಾ.ಜ.ಪ ಬೆಂಬಲಿತ ಅಭ್ಯರ್ಥಿ ಮಾಳೇಟಿರ ಸಾಬಾ ಮುತ್ತಪ್ಪ ಪತ್ರಿಕೆಗೆ ತಿಳಿಸಿದರು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಕಾನೂನು ಬದ್ಧವಾಗಿ ನಡೆದಿದೆ. ಚುನಾವಣೆಗೆ ಮುನ್ನ ನಿಬಂಧನೆಗಳು, ಮತ ಚಲಾಯಿಸುವ ವಿಧಾನ ಹಾಗೂ ನಿಯಮಗಳನ್ನು ಎಲ್ಲಾ ಸದಸ್ಯರಿಗೆ ತಿಳಿಸಲಾಗಿತ್ತು. ಆದರೆ ಸದಸ್ಯ ರೋರ್ವರು ಮತ ಪತ್ರದಲ್ಲಿ ನಿಗದಿತ ಸ್ಥಳದಲ್ಲಿ ಮತ ಗುರುತು ಮಾಡದಿ ರುವುದರಿಂದ ಅದು ತಿರಸ್ಕೃತ ಗೊಂಡಿದೆ ಎಂದು ಚುನಾವಣಾ ಧಿಕಾರಿ ನವೀನ್‌ಕುಮಾರ್ ತಿಳಿಸಿ ದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸಿಬ್ಬಂದಿ, ಚುನಾಯಿತ ಪ್ರತಿನಿಧಿಗಳು, ವಿವಿಧ ಪಕ್ಷದ ಮುಖಂಡರು ಹಾಜರಿದ್ದರು.

ಕಿಶೋರ್‌ಕುಮಾರ್ ಶೆಟ್ಟಿ