ಶ್ರೀಮಂಗಲ, ಆ. ೩: ಕೊಡವ ಹಿತರಕ್ಷಣಾ ಬಳಗ, ಕ್‌ಗ್ಗಟ್ಟ್ ನಾಡ್, ಪೊನ್ನಂಪೇಟೆ ಆಶ್ರಯದಲ್ಲಿ ಕಕ್ಕಡ ಪದ್‌ನೆಟ್ಟ್ ಹಬ್ಬದ ಪ್ರಯುಕ್ತ ೧೨ನೇ ವರ್ಷದ ಪಂಜಿನ ಮೆರವಣಿಗೆ ಪೊನ್ನಂಪೇಟೆಯಲ್ಲಿ ಗುರುವಾರ ನಡೆಯಿತು. ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಸಾಗಿದ ಕೊಡವರು ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಒಡ್ಡೋಲಗಕ್ಕೆ ಸಾಮೂಹಿಕವಾಗಿ ಕುಣಿದು ಸಂಭ್ರಮಿಸಿದರು. -ಹರೀಶ್ ಮಾದಪ್ಪ