ಸೋಮವಾರಪೇಟೆ, ಆ. ೨: ತಾಲೂಕಿನ ಕೂತಿ ಗಾಮದಲ್ಲಿ ಮಳೆ-ಗಾಳಿಗೆ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದು, ವಿದ್ಯುತ್ ಕಡಿತಗೊಂಡಿದ್ದರಿAದ ಸ್ಥಳೀಯರೇ ಸೇರಿ ವಿದ್ಯುತ್ ಮಾರ್ಗಕ್ಕೆ ಅಡಚಣೆಯಾಗಿದ್ದ ಮರಗಳು ಹಾಗೂ ಮರದ ರೆಂಬೆಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಿದರು.

ಮಳೆ ಹೆಚ್ಚಾದ ಸಂದರ್ಭ ವಿದ್ಯುತ್ ೭ ದಿನ ಕೈಕೊಟ್ಟಿತ್ತು. ಹಲವು ವಿದ್ಯುತ್ ಕಂಬಗಳು ಮುರಿದು ಹೋಗಿದ್ದವು. ಸೆಸ್ಕ್ ಇಲಾಖೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಲೈನ್‌ಮೆನ್‌ಗಳು ಇಲ್ಲದಿದ್ದರಿಂದ ಮಾರ್ಗ ಸರಿಪಡಿಸಲು ಇಲಾಖೆ ಮುಂದಾಗಿರಲಿಲ್ಲ. ಈ ಹಿನ್ನೆಲೆ ಗ್ರಾಮಸ್ಥರೇ ಸೇರಿಕೊಂಡು ಮಾರ್ಗವನ್ನು ಸುಸ್ಥಿತಿಗೆ ತಂದರು.

ಸ್ವಚ್ಛತಾ ಕಾರ್ಯದಲ್ಲಿ ಕೂತಿ ಗ್ರಾಮಾಧ್ಯಕ್ಷ ಹೆಚ್.ಡಿ. ಮೋಹನ್, ಕಾರ್ಯದರ್ಶಿ ವಿನೋದ್ ಕುಮಾರ್, ಸಂಜು, ದಿನೇಶ್, ಲಕ್ಷಿö್ಮÃಕಾಂತ್, ರೋಹಿತ್, ಕಿಶನ್, ದಯಾನಂದ, ರಾಮಚಂದ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.