ಮಡಿಕೇರಿ, ಆ. ೨: ಸಾರ್ವಜನಿಕ ಹಿತಾಸಕ್ತಿ ಮತ್ತು ಆಡಳಿತಾತ್ಮಕ ಕಾರಣಗಳ ಮೇರೆಗೆ ದಕ್ಷಿಣ ವಲಯದಲ್ಲಿರುವ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ (ಸಿವಿಲ್) ಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಪೊನ್ನಂಪೇಟೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿದ್ದ ಲಕ್ಷö್ಮಣ್ ಕಮ್ಮಣ್ಣನವರ್ ಅವರನ್ನು ಮಂಡ್ಯ ಜಿಲ್ಲೆಯ ಡಿ.ಸಿ.ಆರ್.ಬಿ ವಿಭಾಗಕ್ಕೆ ವರ್ಗಾವಣೆ ಗೊಳಿಸಲಾಗಿದೆ. ಸೋಮವಾರಪೇಟೆ ಅಪರಾಧ ವಿಭಾಗದಲ್ಲಿದ್ದ ಎಸ್.ಸಿ. ವಿರೂಪಾಕ್ಷ ಅವರನ್ನು ಹಾಸನ ಜಿಲ್ಲೆಯ ಬೇಲೂರು ಅಪರಾಧ ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದೆ. ಹೆಚ್.ಜೆ ಚಂದ್ರಪ್ಪ ಎಂಬವರನ್ನು ಕುಶಾಲನಗರ ಸಂಚಾರಿ ಠಾಣೆಗೆ ನೇಮಕ ಮಾಡಲಾಗಿದೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿದ್ದ ಹೆಚ್.ಟಿ ಗೀತಾ ಅವರು ಕುಶಾಲನಗರ ಟೌನ್ ಅಪರಾಧ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

ಮಡಿಕೇರಿ ಗ್ರಾಮಾಂತರ ಅಪರಾಧ ವಿಭಾಗದಲ್ಲಿದ್ದ ಬಿ.ಎಸ್. ವಾಣಿಶ್ರೀ ಅವರು ವೀರಾಜಪೇಟೆ ಗ್ರಾಮಾಂತರ ಅಪರಾಧ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

ಹೆಚ್.ವಿ. ಚಂದ್ರಶೇಖರ್ ಅವರನ್ನು ಕುಶಾಲನಗರ ಟೌನ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.