ಕೊಡಗು ಜಿಲ್ಲೆಯು ಭೌಗೋಳಿಕವಾಗಿ ತನ್ನದೇ ಆದ ವೈಶಿಷ್ಟö್ಯಗಳನ್ನು ಹೊಂದಿರುವ ಜಿಲ್ಲೆ. ಇಲ್ಲಿನ ಸಂಸ್ಕೃತಿ, ಇತಿಹಾಸ, ಪದ್ಧತಿ-ಪರಂಪರೆಗಳು ಬಹು ಪ್ರಖ್ಯಾತವಾಗಿದ್ದು ರಾಷ್ಟçಮಟ್ಟದಲ್ಲಿಯೂ ಗುರುತಿಸಲ್ಪಟ್ಟಿರುತ್ತದೆ. ಮಾತ್ರವಲ್ಲದೆ ಕೃಷಿ ಪ್ರಧಾನವಾದ ಜಿಲ್ಲೆಯು ಹೌದು. ಕೊಡಗು ಜಿಲ್ಲೆಯಲ್ಲಿ ನಡೆಯುವ ಸಾಂಪ್ರದಾಯಿಕ ಆಚರಣೆಗಳು, ಆಹಾರ ಪದ್ಧತಿಗಳು ತನ್ನದೇ ಆದ ಹಿನ್ನೆಲೆಯನ್ನು ಹೊಂದಿವೆ. ಅಂತೆಯೇ ಕೊಡಗಿನಲ್ಲಿ ಕರ್ಕಾಟಕ ಮಾಸದಲ್ಲಿ ಕಕ್ಕಡ ಹದಿನೆಂಟರ ಅಥವಾ ಆಟಿ ಹದಿನೆಂಟರ ಆಚರಣೆಯು ಮಹತ್ವದ್ದಾಗಿದೆ. ಆಗಸ್ಟ್ ೩ ರಂದು ಆಟಿ ಹದಿನೆಂಟರ ದಿನವನ್ನು ಆಚರಿಸಲಾಗುತ್ತದೆ. ಆಟಿ ತಿಂಗಳು ಬಂತೆAದರೆ ಕೊಡಗಿನ ಜನರು ದೇಹದ ಉಷ್ಣಾಂಶವನ್ನು ಹೆಚ್ಚಿಸಲು ಕೆಸುವಿನ ಪತ್ರೊಡೆ, ಅಣಬೆ, ಏಡಿ, ನಾಟಿಕೋಳಿ, ಬಿದಿರಿನ ಕಣಲೆ ಮುಂತಾದ ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಇಲ್ಲಿ ಸುರಿಯುವ ಮಳೆಯಲ್ಲಿ ಈ ಖಾದ್ಯವನ್ನು ತಯಾರಿಸಿ ಸೇವಿಸುವುದರಿಂದ ದೇಹವನ್ನು ಬೆಚ್ಚಗಿರಿಸಬಹುದು, ಆ ಮೂಲಕ ಉಷ್ಣತೆ ಹೆಚ್ಚಿಸಬಹುದು ಎಂಬ ಕಾರಣಕ್ಕೆ.

ಕಕ್ಕಡ ಹದಿನೆಂಟರ ಪ್ರಮುಖ ಖಾದ್ಯವೇ ಮದ್ದು ಸೊಪ್ಪುವಿನಿಂದ ತಯಾರಿಸಿದ ಪಾಯಸವಾಗಿದೆ. ಈ ಸೊಪ್ಪನ್ನು ಕಕ್ಕಡ ಸೊಪ್ಪು, ಮದ್ದು ತೊಪ್ಪು ಎಂತಲೂ ಕರೆಯುವರು. ಒಟ್ಟು ಹದಿನೆಂಟು ಬಗೆಯ ಔಷಧೀಯ ಗುಣವನ್ನು ಇದು ಹೊಂದಿರುತ್ತದೆ. ಇದರಿಂದ ತಯಾರಿಸಿದ ಖಾದ್ಯಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಲಭಿಸಿ, ದೇಹವು ಬೆಚ್ಚಗಿರುತ್ತದೆ ಎಂಬ ನಂಬಿಕೆಯಿದೆ. ಈ ಸೊಪ್ಪು ಸಾಮಾನ್ಯವಾಗಿ ತೋಟದ ಬೇಲಿಗಳಲ್ಲಿ, ಕಾಡುಗಳಲ್ಲೂ ಸಿಗುತ್ತದೆ. ಈ ಸೊಪ್ಪಿನ ನೀರಿನಿಂದ ಅಕ್ಕಿ ಹಿಟ್ಟನ್ನು ಬಳಸಿ ಪಾಯಸ, ಹಲ್ವ, ಇಡ್ಲಿಯನ್ನು ತಯಾರಿಸುವರು. ಕಕ್ಕಡ ಮಾಸದಲ್ಲಿ ಈ ಸೊಪ್ಪಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಇದರ ಜೊತೆಗೆ ಮರದ ಕೆಸುವಿನಿಂದ ತಯಾರಿಸಿದ ಪತ್ರೊಡೆ ಮಾಡಿ ಸವಿಯುತ್ತಾರೆ. ಕೊಡಗಿನಲ್ಲಿ ಎಲ್ಲಾ ಜನಾಂಗದ ಜನರು ಕಕ್ಕಡ ಹದಿನೆಂಟನ್ನು ಸಂಭ್ರಮದಿAದ ಆಚರಿಸುತ್ತಾರೆ. ಸಾಮಾನ್ಯವಾಗಿ ಮಳೆಯ ನಡುವೆ ಗದ್ದೆ ನಾಟಿ ಕೆಲಸಗಳೆಲ್ಲವೂ ಮುಗಿಯುವುದರಿಂದ ಸಂಭ್ರಮ ಪಟ್ಟು ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಕಕ್ಕಡ ಮಾಸವು ವೈವಿಧ್ಯ ಖಾದ್ಯವನ್ನು ತಯಾರಿಸಿ ಸವಿಯುವ ಮಾಸವು ಹೌದು. ಕೊಡಗಿನ ಆಹಾರ ಪದ್ಧತಿಗೆ ಯಾವುದೇ ಭಾಗದವರು ಕೂಡ ಮನ ಸೋಲುತ್ತಾರೆ. ಕಕ್ಕಡ ಹದಿನೆಂಟನ್ನು ವಿವಿಧ ಸಂಘ-ಸAಸ್ಥೆಗಳು, ಕ್ಲಬ್‌ಗಳಲ್ಲೂ ಆಚರಿಸುತ್ತಾರೆ. ಸಾರ್ವಜನಿಕವಾಗಿಯೂ ಈ ಆಚರಣೆಯು ನಡೆಯುತ್ತದೆ. ಮಳೆಗಾಲದಲ್ಲಿ ಸಂಭ್ರಮದಿAದ ಆಚರಿಸುತ್ತಾರೆ. ಇದರ ಜೊತೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟಗಳನ್ನು ಆಯೋಜಿಸಿ ಸಂಭ್ರಮ ಪಡುತ್ತಾರೆ. ಕಕ್ಕಡ ಹದಿನೆಂಟು ಜನಪದ ಆಚರಣೆಯಾಗಿದೆ. ಗ್ರಾಮೀಣ ಸೊಗಡಿನ ಪರಿಚಯವನ್ನು ಮಾಡುವ ವಿಶಿಷ್ಟ ಸ್ವರೂಪವನ್ನು ಪಡೆದಿದೆ. ಕುಟುಂಬಗಳಲ್ಲಿ, ಊರಿನವರಲ್ಲಿ ಸಾಮರಸ್ಯ, ಸಹಬಾಳ್ವೆಯನ್ನು ಮೂಡಿಸುತ್ತದೆ. ಸರ್ವರಿಗೂ ಕಕ್ಕಡ ಹದಿನೆಂಟರ ಶುಭಾಶಯಗಳು.

- ಬಿ.ಎನ್. ಶಾಂತಿಭೂಷಣ್, ಉಪನ್ಯಾಸಕರು ವೀರಾಜಪೇಟೆ.