ವೀರಾಜಪೇಟೆ, ಆ. ೧ : ವೀರಾಜಪೇಟೆಯ ಪಟ್ಟಣ ಸಹಕಾರ ಬ್ಯಾಂಕ್‌ಗೆ ಹಲವು ವರ್ಷಗಳ ಸುದೀರ್ಘ ಅಂತರದ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ನೂತನ ನಿರ್ದೇಶಕರುಗಳು ಆಯ್ಕೆಗೊಂಡಿದ್ದಾರೆ. ಸುಮಾರು ೨೦ ವರ್ಷಗಳಿಂದ ಇಲ್ಲಿಗೆ ಅವಿರೋಧ ಆಯ್ಕೆ ನಡೆದುಕೊಂಡು ಬಂದಿದ್ದು, ಇದೀಗ ಸ್ಪರ್ಧಾತ್ಮಕ ರೀತಿಯಲ್ಲಿ ಚುನಾವಣೆ ಎದುರಾಗಿತ್ತು. ಇದೀಗ ನಡೆದ ಚುನಾವಣೆಯಲ್ಲಿ ಮೂವರು ಹೊಸ ಮುಖಗಳು ಸೇರಿ ಇತರ ಸ್ಥಾನಕ್ಕೆ ಹಾಲಿ ನಿರ್ದೇಶಕರುಗಳೇ ಆಯ್ಕೆಗೊಂಡಿದ್ದಾರೆ. ಚುನಾವಣಾ ಕಣದಲ್ಲಿ ಒಟ್ಟು ೩೪ ಮಂದಿ ಸ್ಪರ್ಧೆಯಲ್ಲಿದ್ದರು.
ಬ್ಯಾಂಕ್‌ನಲ್ಲಿ ಸುಮಾರು ೩೮೧೩ ಸದಸ್ಯರಿದ್ದು ೨೮೩೧ ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಉಳಿದ ಸದಸ್ಯರು ವಿವಿಧ ಕಾರಣಗಳಿಂದ ಮತ ಹಾಕುವ ಹಕ್ಕು ಕಳೆದುಕೊಂಡಿದ್ದರು. ಚುನಾವಣೆಯಲ್ಲಿ ೨೦೮೮ ಮತ ಚಲಾವಣೆಗೊಂಡು ಶೇಕಡ ೭೪ ರಷ್ಟು ಮತದಾನವಾಗಿತ್ತು.
ಸಾಮಾನ್ಯ ಕ್ಷೇತ್ರದಿಂದ ಪಟ್ಟಡ ರಂಜಿ ಪೂಣಚ್ಚ (೧೧೯೩ ಮತಗಳು), ಪಾಂಡAಡ ಪಿ. ರಚನ್ ಮೇದಪ್ಪ (೧೧೦೭ ಮತಗಳು), ಕೋಲತಂಡ ಡಬ್ಲೂö್ಯ.ಯು. ಬೋಪಯ್ಯ (೧೧೦೧ ಮತಗಳು), ಸಂಪಿ ಪೂಣಚ್ಚ ಎನ್. ಮಾದೇಯಂಡ (೧೦೫೯ ಮತಗಳು), ರಘು ಸೋಮಯ್ಯ ಕೆ.ಎಂ (೧೦೦೮ ಮತಗಳು), ದೇವಯ್ಯ ಕೆ. ಮಲ್ಲಂಡ (೯೬೮ ಮತಗಳು), ಮತ್ತು ಚರ್ಮಣ ಎಂ. ಕಾಂಡAಡ (೮೭೪ ಮತ).
ಮಹಿಳಾ ಮೀಸಲು ಕ್ಷೇತ್ರದಿಂದ ಕಾವೇರಮ್ಮ ಐ.ಎಂ. (ರತ್ತು -೧೦೧೪ ಮತಗಳು) ಮತ್ತು ದೇಚಮ್ಮ ಕಾಳಪ್ಪ (೭೯೦ ಮತ), ಹಿಂದುಳಿದ ಪ್ರವರ್ಗ ‘ಎ' ಮೀಸಲು
(ಮೊದಲ ಪುಟದಿಂದ) ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಜೀತ್ ಎನ್.ಕೆ ಅವರು ೭೬೨ ಮತಗಳು.) ಹಿಂದುಳಿದ ಪ್ರವರ್ಗ ‘ಬಿ' ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾವೇರಪ್ಪ ಪಿ. ಮಾದಪಂಡ (ಕಾಶಿ- ೧೨೨೩ ಮತ) ಪರಿಶಿಷ್ಟ ಜಾತಿ ಕ್ಷೇತ್ರದಿಂದ ಮುತ್ತಮ್ಮ ಹೆಚ್.ಸಿ (೫೩೨ ಮತ) ಪಡೆದು ಗೆಲುವು ಸಾಧಿಸಿದರು. ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಹಾಲಿ ನಿರ್ದೇಶಕರಾಗಿದ್ದ ಪ್ರತಾಪ್ ಕೆ.ಬಿ (೧೧೧೨ ಮತ) ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.
ಮಹಿಳಾ ಸಮಾಜ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಮತದಾನ ಪ್ರಕ್ರಿಯೆ ಸಂಜೆ ೪ ಗಂಟೆಗೆ ಮುಕ್ತಾಯಗೊಂಡು ಬಳಿಕ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್‌ಗೆ ಸುಮಾರು ೨೦ ವರ್ಷಗಳಿಂದ ಚುನಾವಣೆ ನಡೆಯದೆ ಅವಿರೋಧ ಆಯ್ಕೆ ನಡೆದು ಬರುತ್ತಿತ್ತು. ಚುನಾವಣಾಧಿಕಾರಿಯಾಗಿ ಪಿ.ಆಶಾ ಮತ್ತು ಸಹಾಯಕ ಚುನಾವಣಾಧಿಕಾರಿ ಕರಣ್ ಕಾರ್ಯಪ್ಪ ಕಾರ್ಯ ನಿರ್ವಹಿಸಿದರು.