ಮಡಿಕೇರಿ, ಆ. ೧: ಸಾಧಾ ರಣವಾಗಿ ಯಾವುದೇ ಇಲಾಖೆ, ಕಚೇರಿಯ ಸಿಬ್ಬಂದಿಗಳು ತಮ್ಮ ಕರ್ತವ್ಯದಿಂದ ನಿವೃತ್ತರಾದ ಸಂದಭ ðದಲ್ಲಿ ಅವರ ಸಹೋದ್ಯೋಗಿಗಳು, ಸಣ್ಣಪುಟ್ಟ ಸಮಾರಂಭಗಳನ್ನು ಆಯೋಜಿಸಿ ನಿವೃತ್ತರಾದವರನ್ನು ಬೀಳ್ಕೊಡುವುದು ಸಹಜ. ಕ್ರೀಡೆಗಳಲ್ಲೂ ಅಷ್ಟೆ.. ಕೆಲವು ಖ್ಯಾತ ಕ್ರೀಡಾಪಟುಗಳು ನಿವೃತ್ತಿ ಘೋಷಿಸಿ ದ್ದಲ್ಲಿ ಅವರು ಆಡುವ ಕೊನೆಯ ಪಂದ್ಯಗಳಲ್ಲಿ ಇತರ ಕ್ರೀಡಾಪಟು ಗಳು ಅವರನ್ನು ಮೈದಾನದಲ್ಲಿ ಎತ್ತಿಕೊಂಡೋ. ಪರಸ್ಪರ ಆಲಿಂ ಗನ, ಹಸ್ತಲಾಘವದ ಮೂಲಕ ಸಂಭ್ರಮದ ನಡುವೆ ಶುಭಾಶಯ ಕೋರಿ ಬೀಳ್ಕೊಡುತ್ತಾರೆ. ಇದು ಕ್ರಿಕೆಟ್, ಹಾಕಿಯಂತಹ ಕ್ರೀಡೆಯಲ್ಲಿ ಕಂಡು ಬರುತ್ತದೆ. ಆದರೆ, ಇದೊಂದು ವಿಶಿಷ್ಟ ರೀತಿಯ ಬೀಳ್ಕೊಡುಗೆಯಾಗಿತ್ತು.
ಜುಲೈ ೩೧ರಂದು ಮಡಿಕೇರಿ ಆಕಾಶವಾಣಿಯಿಂದ ಸೇವಾ ನಿವೃತ್ತರಾದ ಕೂಪದಿರ ಶಾರದ ನಂಜಪ್ಪ ಅವರನ್ನು ಅವರ ಅಭಿ ಮಾನಿಗಳು ವಿಭಿನ್ನವಾಗಿ ಬೀಳ್ಕೊ ಟ್ಟರು... ಆಕಾಶವಾಣಿ ಸಿಬ್ಬಂದಿಗಳು ಬೀಳ್ಕೊಡುಗೆ ಸಮಾರಂಭ ನಡೆಸಿದ್ದು ಒಂದೆಡೆಯಾದರೆ.. ದಿನವಿಡೀ ಶಾರದಾ ಅಭಿಮಾನಿಗಳು ಆಕಾಶ ವಾಣಿ ಕಚೇರಿಗೆ ಆಗಮಿಸಿ ಹೂಗುಚ್ಚ ನೀಡಿ ಶುಭ ಕೋರಿದ್ದು ಒಂದೆಡೆ ಯಾಗಿತ್ತು. ಇದಕ್ಕೂ ಮಿಗಿಲಾಗಿ ಸಂಜೆ ಕಚೇರಿಯಿಂದ ಅವರು ಹೊರಬರುತ್ತಿದ್ದಾಗ ಬಾಗಿಲಿನಲ್ಲಿ ಹಲವರು ಕಾದು ನಿಂತಿದ್ದರು. ಮುಕ್ಕೋಡ್ಲುವಿನ ವ್ಯಾಲಿ ಡ್ಯೂ ಅಸೋಸಿಯೇಷನ್ ನೇತೃತ್ವದಲ್ಲಿ ಹಲವಾರು ಮಂದಿ ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ದುಡಿಕೊಟ್ಟ್ಪಾಟ್ ಸಹಿತವಾಗಿ ಕಚೇರಿಯ ಬಾಗಿಲಿನಿಂದ ರಸ್ತೆ ಬದಿಯ ಗೇಟ್‌ನ ತನಕ ಅವರನ್ನು ಹೃದಯಸ್ಪರ್ಶಿಯಾಗಿ ಕರೆ ತರುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಈ ಸಂದರ್ಭ ಯುಕೋ ಸಂಘಟನೆಯವರು, ಕೊಡವಾಮೆರ ಕೊಂಡಾಟ ಸಂಘಟನೆಯವರು, ಮಡಿಕೇರಿ ಕೊಡವ ಸಮಾಜದ ಪ್ರಮುಖರು, ಪೊಮ್ಮಕ್ಕಡ ಕೂಟ, ದೇಚೂರು ಕೊಡವಕೇರಿಯ ಸದಸ್ಯರು ಸೇರಿದಂತೆ ಇತರ ಅಭಿಮಾನಿಗಳು ‘ಸಾಥ್’ ನೀಡಿ ದ್ದರು. ಹಾಜರಿದ್ದ ಆಕಾಶವಾಣಿಯ ಇನ್ನಿತರ ಸಿಬ್ಬಂದಿಗಳಿಗೂ ಸಾರ್ವಜನಿಕರ ಈ ಅಭಿಮಾನ ಅಚ್ಚರಿ ಮೂಡಿಸಿದಂತಿತ್ತು. ಸಾರ್ಥಕ್ಯ ಸೇವೆಗೆ ಈ ರೀತಿಯ ಅಭಿಮಾನವ್ಯಕ್ತಗೊಳ್ಳುತ್ತದೆ ಎಂಬದಕ್ಕೆ ಈ ಹೃದಯಸ್ಪರ್ಶಿ ಸನ್ನಿವೇಶ ಸಾಕ್ಷಿ ಎನಿಸಿತ್ತು. ಬಹುಶಃ ಇಂತಹದ್ದೊAದು ಬೀಳ್ಕೊಡುಗೆ ಜಿಲ್ಲೆಯಲ್ಲಿ ಇದೇ ಪ್ರಥಮ ಎನ್ನಬಹುದು.
ಶಶಿ ಸೋಮಯ್ಯ