ಶನಿವಾರಸಂತೆ, ಆ. ೧: ಕ.ವಿ.ಪ್ರ.ನಿ.ನಿ. ಅರಕಲಗೂಡು ವ್ಯಾಪ್ತಿಗೆ ಬರುವ ೬೬ ಕೆ.ವಿ. ಮಾರ್ಗದ ೪ ಗೋಪುರಗಳಲ್ಲಿ ಡಿಸ್ಕ್ ಇನ್ಸುಲೇಟರ್ ಸ್ಟಿçಂಗ್ಸ್ ಬದಲಾಯಿಸುವ ಕೆಲಸಕ್ಕೆ ಮಾರ್ಗಮುಕ್ತತೆ ಇರುವುದರಿಂದ ತಾ.೩ ರಂದು ಬೆಳಿಗ್ಗೆ ೯.೩೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಶನಿವಾರಸಂತೆ ವಿದ್ಯುತ್ ಉಪಕೇಂದ್ರಕ್ಕೆ ಒಳಪಡುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಶನಿವಾರಸಂತೆ, ಗುಡುಗಳಲೆ, ಗೋಪಾಲಪುರ, ಮುಳ್ಳೂರು, ಹಂಡ್ಲಿ, ಗೌಡಳ್ಳಿ, ಶುಂಠಿ, ಮಾದ್ರೆ, ಕಾಜೂರು, ಬೆಸೂರು, ಬ್ಯಾಡಗೊಟ್ಟ, ಕಟ್ಟೆಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಶನಿವಾರಸಂತೆ ಸೆಸ್ಕ್ ಶಾಖಾ ಕಚೇರಿ ಕಿರಿಯ ಇಂಜಿನಿಯರ್ ಸುಧೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.