ಮಡಿಕೇರಿ, ಆ. ೧: ರೋಟರಿ ಕ್ಲಬ್ ವೀರಾಜಪೇಟೆಯ ಅನುಸ್ಥಾ ಪನಾ ದಿನವನ್ನು ಭಾನುವಾರ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೈಸೂರಿನ ಫ್ಲವರ್ ಸಯಂತ್ ಸಾವಯವ ಪರಿಮಳ ಉತ್ಪಾದನಾ ಸಂತೆಯ ಮುಖ್ಯಸ್ಥ ಪಿ.ಕೆ. ರಾಮಕೃಷ್ಣ ಅವರು ಉಪಸ್ಥಿತ ರಿದ್ದು ಅನುಸ್ಥಾಪನಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಗೌರವ ಅತಿಥಿಗಳಾಗಿ ಡಿ.ಎಮ್. ತಿಲಕ್ (ಸಹಾಯಕ ಗವರ್ನರ್ ೨೦೨೩-೨೪) ಮತ್ತು ಎಮ್. ಧೀರಜ್ ಮಾಚಯ್ಯ (ವಲಯ ಸೇನಾನಿ) ೨೦೨೩-೨೪, ಮತ್ತು ಮಾಜಿ ಅಧ್ಯಕ್ಷರಾದ ಹರಿಶಂಕರ್ ಪ್ರಸಾದ್ ಅವರು ಭಾಗವಹಿಸಿದ್ದರು.

೨೦೨೨-೨೩ ನೇ ಸಾಲಿನಲ್ಲಿ ರೋಟರಿ ಸಂಸ್ಥೆಯಿAದ ಕೈಗೊಳ್ಳ ಲಾದ ಯೋಜನೆ ಮತ್ತು ಕಾರ್ಯ ಕ್ರಮಗಳ ವರದಿಯನ್ನು ಕಾರ್ಯ ದರ್ಶಿ ಡಾ. ಎಸ್. ವಿ. ನರಸಿಂಹನ್ ಚಿತ್ರ ಪ್ರದರ್ಶನದ ಮೂಲಕ ಮಂಡಿ ಸಿದರು. ರೋಟರಿ ವೀರಾಜ ಪೇಟೆಯ ೨೦೨೩-೨೪ ನೇ ಸಾಲಿನ ಅಧ್ಯಕ್ಷರಾಗಿ ಎಂ.ಎA. ಬನ್ಸಿ ಪೂವಣ್ಣ, ಕಾರ್ಯದರ್ಶಿಯಾಗಿ ಬಿ.ಬಿ. ಮಾದಪ್ಪ ಅವರು ಆಯ್ಕೆಯಾದರು. ಸಮಾರಂಭದಲ್ಲಿ ಕಲಾರತ್ನ ಸಾಧಿಕ್ ಅವರಿಗೆ ಸನ್ಮಾನಿಸಲಾಯಿತು. ಸದಸ್ಯರು ಮಕ್ಕಳಾದ ಬಲ್ಯಮಾಡ ಎಮ್. ಕಾರ್ಯಪ್ಪ ಹಾಗೂ ಕಾವಾಡಿಚಂಡ ಮಾನ್ಯ ಅಕ್ಕಮ್ಮ ಅವರಿಗೆ ೨೦೨೨-೨೩ ನೇ ಸಾಲಿನಲ್ಲಿ ಐ. ಸಿ. ಎಸ್. ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದಕ್ಕಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭ ಕಲಿಕೆಗೆ ಪೂರಕವಾದ ವಾತಾವರಣವಿಲ್ಲದೆ ಯಾಂತ್ರೀಕರಣದಿAದ ಮಕ್ಕಳಲ್ಲಿ ಬರವಣಿಗೆ ಕುಂಠಿತವಾಗಿರುವಿದನ್ನು ಸರಿಪಡಿಸಲು “ಕಾಲಿಗ್ರಾಫಿ” ಮೂಲಕ ಹೊಸ ವಿಧಾನವನ್ನು ಪ್ರಾಯೋ ಗಿಕವಾಗಿ ಜಾರಿ ಮಾಡಿದ್ದು ಮುಂದೆ ಅದನ್ನು ಇತರೆ ಶಾಲೆಗಳಿಗೆ ವಿಸ್ತರಿಸುವ ಹೊಸ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿ ಪ್ರಮುಖರು ತಿಳಿಸಿದರು.