ಪೊನ್ನಂಪೇಟೆ, ಆ. ೧: ಬಲ್ಯ ಮಂಡೂರು ವಲಯ ಕಾಂಗ್ರೆಸ್ ವತಿಯಿಂದ ವೀರಾಜಪೇಟೆ ಕ್ಷೇತ್ರದ ಶಾಸಕ ಎಸ್.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಪೊನ್ನಣ್ಣ ಅವರು, ಯಾವುದೇ ರೀತಿಯ ಕೀಳು ಮಟ್ಟದ ರಾಜಕೀಯ ಮಾಡದೇ, ನನ್ನ ಕ್ಷೇತ್ರದ ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಕಳೆದ ೨೦ ವರ್ಷಗಳ ಸಮಸ್ಯೆಗಳನ್ನು, ಕೆಲವೇ ತಿಂಗಳಲ್ಲಿ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಹಂತ ಹಂತವಾಗಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ಒಂದು ಕಡೆ ಹೆಚ್ಚು ಮತ ಸಿಕ್ಕಿದೆ ಎಂದು ಆ ಕಡೆಗೆ ಹೆಚ್ಚು ಒಲವು ತೋರುವುದಾಗಲಿ ಅಥವಾ ಒಂದು ಕಡೆ ಕಡಿಮೆ ಮತ ಸಿಕ್ಕಿದೆ ಎಂದು ಆ ಭಾಗವನ್ನು ಕಡೆಗಣಿಸುವುದಾಗಲಿ ಮಾಡುವುದಿಲ್ಲ. ತಕ್ಷಣಕ್ಕೆ ಎಲ್ಲಿಗೆ ಹೆಚ್ಚು ಪ್ರಾಮುಖ್ಯತೆ ಇದೆಯೋ ಅಲ್ಲಿಗೆ ಇವತ್ತಿನ ಪರಿಸ್ಥಿತಿಗನುಗುಣವಾಗಿ ಹೆಚ್ಚು ಒತ್ತು ನೀಡಿ ಕೆಲಸ ನಿರ್ವಹಿಸ ಲಾಗುವುದು. ನಿಮ್ಮ ಸೇವೆಗಿಂತ ಬೇರೆ ದೊಡ್ಡ ಜವಾಬ್ದಾರಿ ನನಗಿಲ್ಲ. ನಾನು ಹುಟ್ಟಿದ ನಾಡಿನ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ನನಗೆ ಮತ ನೀಡಿದ ಪ್ರತಿಯೊಬ್ಬರು ಹೆಮ್ಮೆ ಪಡುವಂತೆ ಕಾರ್ಯನಿರ್ವಹಿಸುತ್ತೇನೆ ಎಂದರು.
ಬಲ್ಯಮAಡೂರು ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಲ್ಯಮಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೊಟ್ಟಂಗಡ ಬಿ. ರಾಜ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರೀರ ನವೀನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪೆಮ್ಮಂಡ ಕೆ. ಪೊನ್ನಪ್ಪ, ದೇವತಕ್ಕ ಕೊಟ್ಟಂಗಡ ಪೆಮ್ಮಯ್ಯ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಿಕ್ಕಿ ನಾಣಯ್ಯ, ಕಾಂಗ್ರೆಸ್ ಮುಖಂಡರಾದ ಮಳವಂಡ ಅರವಿಂದ್, ಮುಕ್ಕಾಟಿರ ಸಂದೀಪ್, ಆಚಣಮಾಡ ಜರೀಸ್ ಪೂವಣ್ಣ, ದೇಯಂಡ ಲಾಲ ತಮ್ಮಯ್ಯ, ಮಾಚಿಮಾಡ ಗೋಪಾಲ್, ಪೆಮ್ಮಂಡ ಅರುಣ, ಮಾಣಿಪಂಡ ಶರತ್, ಚಿಂಡಮಾಡ ವಿಶು, ಕೊಟ್ಟಂಗಡ ಮಹೇಶ್, ಚಂಡoಗಡ ಪ್ರತು, ನಂದ, ಪ್ರವೀಣ, ಸೂರಜ್, ಮಧು, ರೋಷನ್, ಮಾಚಿಮಾಡ ವಾಣಿ, ದೇಯಂಡ ಹ್ಯಾರಿ, ಸುಗುಣ, ವಕೀಲರಾದ ವಿ. ಸುರೇಶ್, ಸಾಮಾಜಿಕ ಕಾರ್ಯಕರ್ತ ದೇಯಂಡ ಸಂತೋಷ್, ಬಸವೇಶ್ವರ ದೇವಸ್ಥಾನ ಅರ್ಚಕ ವಿರೂಪಾಕ್ಷ ಹಾಗೂ ಬಲ್ಯಮಂಡೂರು ಗ್ರಾಮಸ್ಥರು ಇದ್ದರು, ದುರ್ಗಾಪರಮೇಶ್ವರಿ ದೇವಸ್ಥಾನ ಅರ್ಚಕ ಪ್ರಮೋದ್ ಭಟ್ ಪ್ರಾರ್ಥಿಸಿ, ಕೋಳೆರ ಸನ್ನು ಕಾವೇರಪ್ಪ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.