ಮಡಿಕೇರಿ, ಆ. ೧: ವೀರಾಜಪೇಟೆಯ ಪತ್ರಕರ್ತ ರವಿಕುಮಾರ್ ಅವರಿಗೆ ಪುರಸಭಾ ಸದಸ್ಯರೋರ್ವರು ದೂರವಾಣಿಯ ಮೂಲಕ ಬೆದರಿಕೆ ಹಾಕಿರುವುದಕ್ಕೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವೀರಾಜಪೇಟೆ ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘ ಖಂಡಿಸಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸದಸ್ಯೆ ಬೆದರಿಕೆ ತಂತ್ರದ ಮೂಲಕ ವರದಿಗಾರಿಕೆಗೆ ತಡೆಯೊಡ್ಡಲು ಪ್ರಯತ್ನಿಸಿರುವುದಕ್ಕೆ ಸಂಘಗಳು ಆಕ್ಷೇಪ ವ್ಯಕ್ತಪಡಿಸಿವೆ.