*ಗೋಣಿಕೊಪ್ಪ, ಆ. ೨: ಹುಲಿ ದಾಳಿಗೆ ಕೋಣ ಬಲಿಯಾದ ಘಟನೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಗಲ್ ಹಾಡಿಯಲ್ಲಿ ನಡೆದಿದೆ.

ಮೇಯಲು ಬಿಟ್ಟಿದ್ದ ಕೋಣದ ಮೇಲೆ ಹುಲಿ ದಾಳಿ ನಡೆಸಿ ಕತ್ತಿನ ಭಾಗ ಸೀಳಿದೆ. ಮೂರು ವರ್ಷ ಪ್ರಾಯದ ಕೋಣ ಹಾಡಿಯ ನಿವಾಸಿ ಜೆ. ಆರ್. ಸಿಂಧು ಅವರಿಗೆ ಸೇರಿದ್ದಾಗಿದೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದರು.