ವೀರಾಜಪೇಟೆ, ಆ. ೧: ಯುವತಿಯೋರ್ವಳು ಇಂದು ಮುಂಜಾನೆ ಸ್ವಗೃಹದಲ್ಲಿ ನೇಣಿಗೆ ಶರಣಾಗಿರುವ ಘಟನೆ ನಗರದ ಪೊಲೀಸ್ ವಸತಿ ಗೃಹದಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಪೊಲೀಸ್ ಠಾಣೆಗಳ ಸಮುಚ್ಚಯದಲ್ಲಿ ಡಿ ಗ್ರೂಪ್ ನೌಕರರಾಗಿರುವ ಹೆಚ್.ಪಿ. ಕುಮಾರ ಮತ್ತು ತೇಜಾವತಿ ದಂಪತಿಯ ಕೊನೆಯ ಪುತ್ರಿ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್‌ಸಿ ವಿದ್ಯಾರ್ಥಿನಿಯಾಗಿದ್ದ ಹೆಚ್.ಕೆ. ಮಧುಮಿತ (೨೨) ನೇಣಿಗೆ ಶರಣಾದ ಯುವತಿ.
ಮೈಸೂರು ಮಹಾರಾಣಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎಸ್‌ಸಿ ವ್ಯಾಸಂಗ ಮಾಡುತ್ತಾ ಮೈಸೂರಿನ ಪಿ.ಜಿ.ಯೊಂದರಲ್ಲಿ ವಾಸವಿದ್ದ ಮಧುಮಿತ ಕೆಲವು ತಿಂಗಳುಗಳಿAದ ಪಿ.ಜಿ.ಯನ್ನು ಬಿಟ್ಟು ವೀರಾಜಪೇಟೆಯ ಮನೆಯಿಂದ ಮೈಸೂರಿನ ಕಾಲೇಜಿಗೆ ತೆರಳುತ್ತಿದ್ದಳು ಎನ್ನಲಾಗಿದೆ. ಇಂದು ಮುಂಜಾನೆ ಮನೆಯಲ್ಲಿ ತಾಯಿ ದಿನನಿತ್ಯದ ಕಾಯಕದಲ್ಲಿ ತೊಡಗಿದ್ದರು. ತಂದೆ ಕುಮಾರ ಕರ್ತವ್ಯ ನಿಮಿತ್ತ ಹೊರ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಮನೆಯ ಕೋಣೆಯೊಂದರ ಮೇಲ್ಛಾವಣಿಗೆ ತನ್ನ ವೇಲ್‌ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತಳ ತಾಯಿ ತೇಜಾವತಿ ನೀಡಿದ ದೂರಿನನ್ವಯ ವೀರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. -ಕಿಶೋರ್ ಕುಮಾರ್ ಶೆಟ್ಟಿ