ಕೂಡಿಗೆ, ಆ. ೧ : ಕರ್ನಾಟಕ ಸರ್ಕಾರದಿಂದ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಯೋಜನೆಯಾಗಿ ರೂಪಿಸಿದ ಮೇಕೆ ಹಾಲು ಉತ್ಪಾದನಾ ಘಟಕ ಆರಂಭಗೊAಡು ಏಳು ವರ್ಷಗಳು ಕಳೆದರೂ ಇದುವರೆಗೂ ಪೂರ್ಣ ಕಾಮಗಾರಿ ನಡೆಯದೆ ನೆನೆಗುದಿಗೆ ಬಿದ್ದಿದೆ.
ಜೂನ್ ೨೫ ರಂದು ‘ನೆನೆಗುದಿಗೆ ಬಿದ್ದಿರುವ ಮೇಕೆ ಹಾಲು ಉತ್ಪಾದನ ಘಟಕ’ ಎಂಬ ಶೀರ್ಷಿಕೆಯಡಿಯಲ್ಲಿ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡಿತ್ತು. ಈ ವರದಿಗೆ ಮೈಸೂರಿನ ಕುರಿ ಮತ್ತು ಉಣ್ಣೆ ನಿಗಮದ ಸಹಾಯಕ ನಿರ್ದೇಶಕÀ ನಾಗರಾಜು ಸ್ಪಂದನ ನೀಡಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಪಶುಪಾಲನೆ ಇಲಾಖೆಯ ಜಾಗದಲ್ಲಿ ಕಳೆದ ಏಳು ವರ್ಷಗಳ ಹಿಂದೆ, ಆಗಿನ ರಾಜ್ಯ ಸರ್ಕಾರ ಮೇಕೆ ಹಾಲು ಉತ್ಪಾದನಾ ಘಟಕವನ್ನು ತೆರೆÀಯಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರಂತೆಯೇ ಮೇಕೆಯ ಹಾಲಿನ ಸಂಗ್ರಹದ ಕೊಠಡಿ, ಹುಲ್ಲುಗಾವಲು ಸೇರಿದಂತೆ ವಿವಿಧ ಕಟ್ಟಡದ ಕಾಮಗಾರಿಗಳು ನಡೆದ್ದಿದ್ದವು. ಆದರೆ ಇದುವರೆಗೂ ತಟಸ್ಥವಾಗಿದ್ದ ಕಟ್ಟಡಕ್ಕೆ ಜೀವ ಬಂದAತಾಗಿದೆ.
ಪಶುಪಾಲನೆ ಇಲಾಖೆಯಿಂದ ಈಗಾಗಲೇ ಈ ಕೇಂದ್ರವು ರಾಜ್ಯ ಕುರಿ ಮತ್ತು ಉಣ್ಣೆ ಮಂಡಳಿಗೆ ವಹಿಸಲಾಗಿದ್ದು, ಆ ಮಂಡಳಿಯ ಮುಖೇನ ವಿವಿಧ ಹಂತದ ಕಾಮಗಾರಿಗಳ ಕ್ರಿಯಾ ಯೋಜನೆಗಳು ರಾಜ್ಯ ಮಟ್ಟದಲ್ಲಿ ನಡೆಯುತ್ತಿದೆ ಎಂದು ಮೈಸೂರು ವಿಭಾಗದ ಕುರಿ ಮತ್ತು ಉಣ್ಣೆ ನಿಗಮದ ಸಹಾಯಕ ನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.
ಈಗಾಗಲೇ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಮೇಕೆ ಹಾಲು ಉತ್ಪಾದನ ಕೇಂದ್ರದ ಆವರಣದಲ್ಲಿರುವ ಕಟ್ಟಡದಲ್ಲಿ ಮೇಕೆ ಹಾಲಿನ ಸಂಸ್ಕರಣೆಗೆ ಸಂಬAಧಿಸಿದ ಕೆಲವು ಯಂತ್ರಗಳ ಅಳವಡಿಸುವ ಕಾರ್ಯ ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಪೂರಕವಾಗಿ ಹಣವನ್ನು ಬಿಡುಗಡೆಗೊಳಿಸಿದರೆ ಅದರ ಮೂಲಕ ಘಟಕವನ್ನು ಅಭಿವೃದ್ಧಿಪಡಿ ಸಲಾಗುವುದು ಎಂದು ಅಧಿಕಾರಿ ಕಣಿವೆಗೆ ಕಾರ್ಯಕ್ರಮದ
ನಿಮಿತ್ತ ಬಂದ ಸಂದರ್ಭದಲ್ಲಿ ತಿಳಿಸಿದ್ದಾರೆ.