*ಗೋಣಿಕೊಪ್ಪ, ಆ. ೧: ಪತ್ರಿಕಾ ದಿನಾಚರಣೆ ಅಂಗವಾಗಿ ಪೊನ್ನಂ ಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗೋಣಿಕೊಪ್ಪದ ಪತ್ರಿಕಾ ವಿತರಕ ಕೆ. ಅಬ್ದುಲ್ ರಶೀದ್ ಅವರನ್ನು ಅವರ ಮಳಿಗೆಯಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಸನ್ಮಾನಿಸಲಾಯಿತು.
ಪಿ. ಎಂ. ಅಂದ್ರು ಪತ್ರಿಕಾ ಏಜೆನ್ಸಿ ಮೂಲಕ ೪೮ ವರ್ಷಗಳಿಂದ ಮಾಧ್ಯಮ ಕ್ಷೇತ್ರಕ್ಕೆ ಅರ್ಪಿಸಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಪಟ್ಟಣದ ಮುಖ್ಯರಸ್ತೆಗೆ ಮಳಿಗೆ ಹೊಂದಿಕೊAಡಿರುವುದರಿAದ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಧಾನ ಕಾರ್ಯ ದರ್ಶಿ ಎನ್.ಎನ್. ದಿನೇಶ್, ಖಜಾಂಚಿ ವಿ.ವಿ. ಅರುಣ್ ಕುಮಾರ್, ನಿರ್ದೇಶಕ ಸಿಂಗಿ ಸತೀಶ್, ಸದಸ್ಯ ಮನೋಜ್ಕುಮಾರ್ ಇದ್ದರು.