ನಾಪೋಕ್ಲು, ಆ. ೧: ಈ ಹಿಂದೆ ನಾಲ್ಕುನಾಡು ಭತ್ತದ ಕೃಷಿಗೆ ಹೆಸರುವಾಸಿಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಭತ್ತದ ಕೃಷಿಯಲ್ಲಿ ಲಾಭವಿಲ್ಲ, ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಉಪಟಳ, ಹೆಚ್ಚಿದ ರಸಗೊಬ್ಬರ ಬೆಲೆ, ಕಡಿಮೆ ಇಳುವರಿ, ಭತ್ತದ ಬೆಲೆಯಲ್ಲಿ ಇಳಿಕೆ, ಮತ್ತಿತರ ಕಾರಣಗಳಿಂದ ಭತ್ತದ ಬೇಸಾಯ ಮಾಡುವವರು ವಿರಳವಾಗಿದ್ದಾರೆ. ಇದರ ನಡುವೆ ಹಿಂದಿನಿAದಲೂ ಸಾಂಪ್ರದಾಯಿಕ ಕೃಷಿ ಮಾಡಿಕೊಂಡು ಬಂದಿರುವ ರೈತರು ಮಾತ್ರ ಲಾಭ ನಷ್ಟದ ಬಗ್ಗೆ ಚಿಂತೆ ಮಾಡದೆ ಭತ್ತದ ಕೃಷಿಯನ್ನು ಮುಂದುವರಿಸಿಕೊAಡು ಬರುತ್ತಿದ್ದಾರೆ.

ಇದಕ್ಕೆ ಉದಾಹರಣೆ ನೆಲಜಿ ಗ್ರಾಮದ ಪ್ರಗತಿಪರ ಕೃಷಿಕ ಬದ್ದಂಜೆಟ್ಟಿರ ನಾಣಯ್ಯ. ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿಕೊಂಡು ಕಾಲ ಕಾಲಕ್ಕೆ ಸರಿಯಾಗಿ ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿರುವ ಇವರು ಸುಮಾರು ಎಂಟು ಎಕರೆ ಭತ್ತದ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷದ ಮುಂಗಾರು ಮಳೆ ಸಂದರ್ಭದಲ್ಲಿ ಈ ವ್ಯಾಪ್ತಿಯಲ್ಲಿ ಜುಲೈ ಮೊದಲ ವಾರದಿಂದಲೇ ನಾಟಿ ಕಾರ್ಯ ಆರಂಭಗೊಳ್ಳುತ್ತಿತ್ತು. ಆದರೆ, ಈ ವರ್ಷ ಮುಂಗಾರು ಕ್ಷೀಣಗೊಂಡ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆಯಿಂದ ಪೈರು ಬಿತ್ತನೆಗೆ ವಿಳಂಬವಾಗಿದೆ. ನಾಣಯ್ಯ ಅವರು ಕೆರೆಯಿಂದ ನೀರು ಹಾಯಿಸಿ ಪೈರು ಬೆಳೆಸಿದ ಹಿನ್ನೆಲೆಯಲ್ಲಿ ವಿಳಂಬವಾದರೂ ನಾಲ್ಕುನಾಡಿನಲ್ಲಿ ಮೊದಲ ಬಾರಿಗೆ ನಾಟಿ ಕಾರ್ಯ ಆರಂಭಿಸಿದ್ದಾರೆ.

(ಮೊದಲ ಪುಟದಿಂದ) ಇವರ ಭತ್ತದ ಗದ್ದೆಯಲ್ಲಿ ಸಂತಸದಿAದ ಪುರುಷರು ಹಾಗೂ ಮಹಿಳೆಯರು ಹಾಸ್ಯ ಚಟಾಕಿಯೊಂದಿಗೆ ಸಸಿ ನಾಟಿ ಮಾಡುತ್ತಿರುವ ದೃಶ್ಯ ದಾರಿಹೋಕರ ಮನ ಸೆಳೆಯುತ್ತಿತ್ತು. ಇಂತಹ ಸುಂದರ ಸನ್ನಿವೇಶಗಳನ್ನು ಇತ್ತೀಚೆಗೆ ಕಾಣಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳು ಜನ ವಲಯದಲ್ಲಿ ಕೇಳಿಬರುತ್ತಿತ್ತು. ಒಟ್ಟಿನಲ್ಲಿ ರೈತ ದೇಶದ ಬೆನ್ನೆಲುಬು ಎಂಬುದಕ್ಕೆ ಇದು ಸಾಕ್ಷಿಯಂತಿತ್ತು. -ಪಿ.ವಿ.ಪ್ರಭಾಕರ್