ಗೋಣಿಕೊಪ್ಪಲು, ಆ. ೨: ಸರ್ಕಾರ ಪುಟಾಣಿ ಮಕ್ಕಳ ಅನುಕೂಲಕ್ಕಾಗಿ ಜನನಿಬೀಡ ಪ್ರದೇಶದಲ್ಲಿ ಸಾಕಷ್ಟು ಅಂಗನವಾಡಿಗಳನ್ನು ತೆರೆಯುವ ಮೂಲಕ ಆ ಭಾಗದ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವುದಲ್ಲದೆ ಮಕ್ಕಳಿಗೆ ಕಲಿಕಾ ಅಭ್ಯಾಸವನ್ನು ಆರಂಭಿಸುತ್ತಾರೆ. ಇದರಿಂದ ಪ್ರಾಥಮಿಕ ಹಂತದಲ್ಲಿ ಶಿಕ್ಷಣಕ್ಕೆ ಪೂರಕವಾದಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಸಾಕಷ್ಟು ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ.
ಹಲವು ಕಟ್ಟಡಗಳು ಬಾಡಿಗೆ ಕಟ್ಟಡದಲ್ಲಿ ಮುಂದುವರೆಯುತ್ತಿದೆ. ಪುಟಾಣಿ ಮಕ್ಕಳ ಪೋಷಣೆಗಾಗಿ ಶಿಕ್ಷಕರು ಹಾಗೂ ಸಹಾಯಕರು ಕೇಂದ್ರದಲ್ಲಿ ಮುಂಜಾನೆಯಿAದ ಸಂಜೆಯವರೆಗೂ ಕೆಲಸ ನಿರ್ವಹಿಸುತ್ತಾರೆ. ಅಂಗನವಾಡಿ ಕಾರ್ಯಕರ್ತರಿಗೆ ಆ ಗ್ರಾಮದ ಸಂಪೂರ್ಣ ಮಾಹಿತಿಯು ಲಭ್ಯವಿರುತ್ತದೆ. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಮಕ್ಕಳನ್ನು ಸತ್ಪçಜೆಗಳನ್ನಾಗಿ ಮಾಡಲು ಬಹುದೊಡ್ಡ ಜವಾಬ್ದಾರಿಯನ್ನು ಆರಂಭದಲ್ಲಿಯೇ ನಿಭಾಯಿಸುತ್ತಾರೆ.
ಹಲವು ಕೇಂದ್ರಗಳಲ್ಲಿ ಮಕ್ಕಳಿಗೆ ಬೇಕಾದ ಪೂರಕ ವಾತಾವರಣ ಲಭ್ಯವಿದ್ದರೆ, ಇನ್ನೂ ಹಲವು ಕಡೆಗಳಲ್ಲಿ ವಾತಾವರಣಗಳು ಅಷ್ಟಾಗಿ ಕಂಡುಬರುತ್ತಿಲ್ಲ. ಇದಕ್ಕೆ ಉದಾಹರಣೆ ಎಂಬAತೆ ಗೋಣಿಕೊಪ್ಪ ನಗರದ ಅನತಿ ದೂರದಲ್ಲಿರುವ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಈರಣ್ಣ ಕಾಲೋನಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಅಂಗನವಾಡಿ ಕೇಂದ್ರವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಕಿಷ್ಕಿಂಧೆಯಾಗಿರುವ ಕೊಠಡಿಯಲ್ಲಿ ಮಕ್ಕಳಿಗೆ ಉತ್ತಮ ವಾತಾವರಣ ಕಂಡು ಬರುತ್ತಿಲ್ಲ. ಮಳೆಗಾಲದಲ್ಲಿ ಮಳೆ ನೀರು ಕೇಂದ್ರದ ಒಳಗೆ ನುಗ್ಗುತ್ತಿದೆ. ಮಕ್ಕಳ ಓಡಾಟಕ್ಕೂ ಸೂಕ್ತ ಸ್ಥಳಾವಕಾಶವಿಲ್ಲ. ಸರ್ಕಾರ ಉತ್ತಮ ರೀತಿಯ ಕಟ್ಟಡ ನಿರ್ಮಾಣಕ್ಕೆ ಹಲವು ರೀತಿಯ ಅನುದಾನವನ್ನು ವರ್ಷಂಪ್ರತಿ ನೀಡುತ್ತಲೇ ಬರುತ್ತಿವೆ. ಇದರ ಸದ್ಬಳಕೆ ಈ ಕೇಂದ್ರಕ್ಕೆ ಆಗುತ್ತಿಲ್ಲ.
ಈರಣ್ಣ ಕಾಲೋನಿಯಲ್ಲಿ ನೂರಾರು ಕುಟುಂಬಗಳು ವಾಸವಿದ್ದು ೯೦೦ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರವೂ ಕಳೆದ ಹತ್ತು ವರ್ಷಗಳ ಹಿಂದೆಯೇ ಮಂಜೂರಾಗಿದ್ದು ಹಳೆಯ ಬಾಡಿಗೆ ಕಟ್ಟಡದಲ್ಲಿಯೇ ಇಂದಿಗೂ ಮುಂದುವರೆಯುತ್ತಿದೆ. ಜನನಿಬೀಡ ಪ್ರದೇಶದಲ್ಲಿ ಬಡಾವಣೆಗಳು ಆರಂಭಿಸುವ ಮುನ್ನ ಆ ಭಾಗದ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರ ಹಾಗೂ ಇನ್ನಿತರ ನಾಗರಿಕ ಸೌಲಭ್ಯಕ್ಕೆ ಬೇಕಾದ ನಿವೇಶನವನ್ನು ಮೀಸಲಿಡಬೇಕಾದ ನಿಯಮವಿದೆ. ಈ ಬಡಾವಣೆಯೂ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪಂಚಾಯಿತಿ ಈ ನಿಟ್ಟಿನಲ್ಲಿ ನಾಗರಿಕ ಸೌಲಭ್ಯಕ್ಕೆ ಬೇಕಾದ ನಿವೇಶನವನ್ನು ಕಾಯ್ದಿರಿಸಬೇಕಾಗಿದೆ. ಆದರೆ ಪಂಚಾಯಿತಿ ಅಂಗನವಾಡಿ ಕೇಂದ್ರ ನಿರ್ಮಾಣ ವಿಚಾರದಲ್ಲಿ ಹಾಗೂ ಬಡಾವಣೆಯಲ್ಲಿ ನಿವೇಶನವನ್ನು ಕಾಯ್ದಿರಿಸಬೇಕಾದ ಜವಾಬ್ದಾರಿಯಿಂದ ನುಣುಚಿಕೊಂಡAತಿದೆ. ಈ ಭಾಗದಲ್ಲಿ ಹಲವು ಮನೆಗಳು ನಿರ್ಮಾಣದ ಹಂತದಲ್ಲಿದೆ. ಖಾಲಿ ನಿವೇಶನಗಳನ್ನು ಮಾಲೀಕರು ಮಾರಾಟ ಮಾಡುತ್ತಿದ್ದಾರೆ. ಆದರೆ ನಾಗರಿಕರ ಸೌಲಭ್ಯಕ್ಕೆ ಮೀಸಲಿಟ್ಟಿರುವ ಅಂಗನವಾಡಿ ಕೇಂದ್ರಕ್ಕೆ ಬೇಕಾದ ನಿವೇಶನವನ್ನು ಕಾಯ್ದಿರಿಸಿದ್ದರೂ ಇದಕ್ಕೆ ಬೇಕಾದ ಮೂಲ ದಾಖಲಾತಿಗಳನ್ನು ಇನ್ನು ಕೂಡ ಮಾಲೀಕರು ಒದಗಿಸಿಲ್ಲ. ಅಲ್ಲದೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಗ್ರಾಮ ಪಂಚಾಯಿತಿ ಕೆಲವು ನೆಪಗಳನ್ನು ಹೇಳುತ್ತ ವರ್ಷ ಕಳೆಯುತ್ತಿದೆ.
ಇತ್ತ ಬಾಡಿಗೆ ಕಟ್ಟಡದಲ್ಲಿ ಹಲವು ವರ್ಷಗಳಿಂದ ಅಂಗನವಾಡಿ ಕೇಂದ್ರವು ಹಲವು ಸಮಸ್ಯೆಗಳಿಂದ ಮುಂದುವರೆಯುತ್ತಿದೆ. ಪ್ರತಿನಿತ್ಯ ೧೦ಕ್ಕೂ ಹೆಚ್ಚು ಮಕ್ಕಳು ಈ ಅಂಗನವಾಡಿ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಕೆಲಸ ನಿರ್ವಹಿಸುತ್ತಿದ್ದಾರೆ.
- ಹೆಚ್.ಕೆ. ಜಗದೀಶ್, ಗೋಣಿಕೊಪ್ಪಲು