ಕಲುಷಿತ ನೀರು ಸೇವನೆ: ಇಬ್ಬರ ಸಾವು
ಚಿತ್ರದುರ್ಗ, ಆ. ೨: ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟು ೩೬ ಮಂದಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಮೃತರನ್ನು ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿ ನಿವಾಸಿಗಳಾದ ಮಂಜುಳಾ (೨೩) ಮತ್ತು ರಘು (೨೭) ಎಂದು ಗುರುತಿಸಲಾಗಿದೆ. ಮಂಜುಳಾ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟರೆ, ನೀರು ಸೇವಿಸಿ ಬೆಂಗಳೂರಿಗೆ ತೆರಳಿದ್ದ ರಘು ತೀವ್ರ ರೋಗ ಲಕ್ಷಣ ಕಂಡುಬAದ ನಂತರ ಮೃತಪಟ್ಟಿದ್ದಾರೆ. ನಿನ್ನೆ ಈ ಘಟನೆ ನಡೆದಿದ್ದು, ನಗರಸಭೆಯಿಂದ ಪೂರೈಕೆಯಾಗುವ ನೀರನ್ನು ಸೇವಿಸದಂತೆ ಸ್ಥಳೀಯ ನಿವಾಸಿಗಳಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಚಾರ್ಜರ್ ಕಚ್ಚಿ ಹಸುಗೂಸು ಸಾವು
ಕಾರವಾರ, ಆ. ೨: ಮೊಬೈಲ್ ಚಾರ್ಜರ್‌ನಿಂದ ಕರೆಂಟ್ ಶಾಕ್ ತಗುಲಿ ೮ ತಿಂಗಳ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿದ್ದರ ಗ್ರಾಮದಲ್ಲಿ ನಡೆದಿದೆ. ಸಿದ್ದರ ಗ್ರಾಮದ ಸಂತೋಷ್ ಕಲ್ಗುಟ್ಕರ್, ಸಂಜನಾ ದಂಪತಿಯ ೮ ತಿಂಗಳ ಸಾನಿಧ್ಯ ಮೃತಪಟ್ಟ ಮಗು. ಪೋಷಕರು ಮನೆಯಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಂಡು ಆಫ್ ಮಾಡದೆ ಹಾಗೇ ಬಿಟ್ಟಿದ್ದಾರೆ. ಆಟ ಆಡಿಕೊಂಡಿದ್ದ ಮಗು ಚಾರ್ಜರ್‌ನ ವೈರ್ ಅನ್ನು ಬಾಯಲ್ಲಿ ಇಟ್ಟುಕೊಂಡಿದೆ. ಈ ವೇಳೆ ಕರೆಂಟ್ ಶಾಕ್ ತಗುಲಿದ್ದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ವಿಹೆಚ್‌ಪಿ-ಭಜರಂಗ ದಳ ಪ್ರತಿಭಟನಾ ಮೆರವಣಿಗೆಗೆ ‘ಸುಪ್ರೀಂ' ಸಮ್ಮತಿ
ನವದೆಹಲಿ, ಆ. ೨: ನುಹ್ ಹಿಂಸಾಚಾರದ ವಿರುದ್ಧ ದೆಹಲಿ-ಎನ್‌ಸಿಆರ್‌ನಾದ್ಯಂತ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲು ವಿಎಚ್‌ಪಿ ಮತ್ತು ಭಜರಂಗದಳಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದರೆ, ಈ ವೇಳೆ ಯಾವುದೇ ದ್ವೇಷ ಭಾಷಣ ಅಥವಾ ಯಾವುದೇ ರೀತಿಯಲ್ಲಿ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಮಧ್ಯಾಹ್ನ ೨ ಗಂಟೆಗೆ ನಡೆದ ವಿಶೇಷ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ. ಭಾಟಿ ಅವರಿದ್ದ ಪೀಠವು, ಪ್ರತಿಭಟನಾ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಅಗತ್ಯವಿದ್ದರೆ, ಹೆಚ್ಚುವರಿ ಪೊಲೀಸ್ ಅಥವಾ ಅರೆಸೇನಾ ಪಡೆಗಳನ್ನು ನಿಯೋಜಿಸಲು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಆ ವೀಡಿಯೋ ರೆಕಾರ್ಡಿಂಗ್ ಅನ್ನು ಸಂರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯ ಆದೇಶಿಸಿದೆ.
೩೦ ಕೋಟಿಗೂ ಅಧಿಕ ಮಹಿಳೆಯರ ಉಚಿತ ಪ್ರಯಾಣ
ಬೆಂಗಳೂರು, ಆ. ೨: ನೂತನ ಸರ್ಕಾರ ‘ಶಕ್ತಿ’ ಯೋಜನೆ ಅನ್ವಯ ಕಳೆದ ಜೂನ್ ೧೧ ರಿಂದ ಜುಲೈ ೩೧ ರವರೆಗೆ ರಾಜ್ಯದಲ್ಲಿ ಒಟ್ಟು ೩೦,೦೬,೬೮,೦೮೮ ಮಹಿಳೆಯರು ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಮಹಿಳಾ ಪ್ರಯಾಣಿಕರ ಒಟ್ಟು ಟಿಕೆಟ್ ಮೌಲ್ಯ ರೂ. ೭೦೪,೦೩,೭೨,೨೭೫. ಈ ಪೈಕಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಒಟ್ಟು ೯ ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣಿಸಿದ್ದಾರೆ. ರೂ. ೨೬೬ ಕೋಟಿಗೂ ಅಧಿಕ ಟಿಕೆಟ್ ಮೌಲ್ಯವಾಗಿದೆ. ಬಿಎಂಟಿಸಿ ಬಸ್‌ಗಳಲ್ಲಿ ೯.೮೧ ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ ರೂ. ೧೨೫.೬೯ ಕೋಟಿ ಆಗಿದೆ. ವಾಯುವ್ಯ ಕರ್ನಾಟಕ ಸಂಸ್ಥೆ ಬಸ್‌ಗಳಲ್ಲಿ ೭ ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣಿಸಿದ್ದಾರೆ. ಟಿಕೆಟ್ ಮೌಲ್ಯ ಸುಮಾರು ರೂ. ೧೭೭ ಕೋಟಿ ಆಗಿದೆ. ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ೪ ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣಿಸಿದ್ದಾರೆ. ಟಿಕೆಟ್ ಮೌಲ್ಯ ರೂ. ೧೩೪ ಕೋಟಿ ಮೀರಿದೆ.
ಶಾಸಕ ಹೆಚ್.ಡಿ. ರೇವಣ್ಣಗೆ ಹೈಕೋರ್ಟ್ ಸಮನ್ಸ್
ಬೆಂಗಳೂರು, ಆ. ೨: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರ ಶಾಸಕ ಹೆಚ್.ಡಿ. ರೇವಣ್ಣ ಅವರು ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದ ಅರ್ಜಿಗೆ ಸಂಬAಧಿಸಿದAತೆ ಕರ್ನಾಟಕ ಹೈಕೋರ್ಟ್ ರೇವಣ್ಣಗೆ ಸಮನ್ಸ್ ಜಾರಿ ಮಾಡಿದೆ. ಹೊಳೆನರಸೀಪುರ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ನೇತೃತ್ವದ ಪೀಠ ಸಮನ್ಸ್ ಜಾರಿ ಮಾಡಿದೆ. ರೇವಣ್ಣ ಅಕ್ರಮದ ಮೂಲಕ ಚುನಾವಣೆಯಲ್ಲಿ ಗೆದ್ದು ಶಾಸಕರಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ದೇವರಾಜೇಗೌಡರು ವಾಗ್ದಾಳಿ ನಡೆಸಿದರು. ರೇವಣ್ಣ ಮತದಾರರಿಗೆ ನಗದು, ಕೋಳಿ ಮಾಂಸ ವಿತರಿಸಿ ಮತ ನೀಡುವಂತೆ ಆಮಿಷ ಒಡ್ಡಿದ್ದಾರೆ ಎಂದು ಮನವಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಅವರನ್ನು ಪರಾಜಿತ ಎಂದು ಘೋಷಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ರೇವಣ್ಣ ಅವರ ಕೃತ್ಯಗಳು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ ೧೨೩ಕ್ಕೆ ವಿರುದ್ಧವಾಗಿದ್ದು, ಅಕ್ರಮ ನಡೆದಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ರೇವಣ್ಣ ಅವರು ಬ್ಯಾಂಕ್ ಠೇವಣಿಗಳ ವಿವರವನ್ನೂ ಬಹಿರಂಗಪಡಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದೆ. ಹೀಗಾಗಿ ಅವರ ಉಮೇದುವಾರಿಕೆಯನ್ನು ಅನೂರ್ಜಿತಗೊಳಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ದೇವರಾಜೇಗೌಡ ಮೂರನೇ ಸ್ಥಾನ ಪಡೆದು ವಿಧಾನಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ ೩,೧೫೨ ಮತಗಳಿಂದ ಸೋತರು. ಅರ್ಜಿದಾರ ದೇವರಾಜೇಗೌಡ ಅವರು ಸಹ ಚುನಾವಣಾ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಆರೋಪವನ್ನು ಶ್ರೇಯಸ್ ಪಾಟೀಲ್ ವಿರುದ್ಧ ಮಾಡಿದ್ದು, ನ್ಯಾಯಾಲಯವೂ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಪೀಠವು ವಿಚಾರಣೆಯನ್ನು ಸೆಪ್ಟೆಂಬರ್ ೪ಕ್ಕೆ ಮುಂದೂಡಿದೆ.
ಜಮ್ಮು ಮತ್ತು ಕಾಶ್ಮೀರ: ಸ್ವಾತಂತ್ರ‍್ಯ ದಿನಾಚರಣೆ ವೇಳೆ ದಾಳಿಗೆ ಸಂಚು ರೂಪಿಸಿದ್ದ ಉಗ್ರರ ಬಂಧನ
ಬಾರಾಮುಲ್ಲಾ, ಆ. ೨: ಬಾರಾಮುಲ್ಲಾದ ಆಜಾದ್‌ಗುಂಜ್‌ನಲ್ಲಿ ಶಸ್ತಾçಸ್ತç ಮತ್ತು ಮದ್ದುಗುಂಡುಗಳೊAದಿಗೆ ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಇಬ್ಬರು ‘ಹೈಬ್ರಿಡ್’ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬುಧವಾರದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಂಧಿತರನ್ನು ಬಾರಾಮುಲ್ಲಾದ ಬಂಗಲೆ ಬಾಗ್‌ನ ನಿವಾಸಿ ಫೈಸಲ್ ಮಜೀದ್ ಗನಿ ಮತ್ತು ಓಲ್ಡ್ ಟೌನ್ ಬಾರಾಮುಲ್ಲಾದ ಬಾಗ್-ಎ-ಇಸ್ಲಾಂ ನಿವಾಸಿ ನೂರುಲ್ ಕಮ್ರಾನ್ ಗನಿ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ಶೋಧದ ಸಮಯದಲ್ಲಿ ೧ ಪಿಸ್ತೂಲ್, ೧ ಪಿಸ್ತೂಲ್ ಮ್ಯಾಗಜೀನ್, ೪ ಲೈವ್ ಪಿಸ್ತೂಲ್ ಗುಂಡುಗಳು ಮತ್ತು ೧ ಗ್ರೆನೇಡ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾರಾಮುಲ್ಲಾ ಪೊಲೀಸ್‌ನ ಜಂಟಿ ಪಡೆಗಳು, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ನ (ಸಿಆರ್‌ಪಿಎಫ್) ೫೩ ಬೆಟಾಲಿಯನ್ ಮತ್ತು ಸೇನೆಯ ೪೬ ಆರ್.ಆರ್. ಆಜಾದ್‌ಗುಂಜ್‌ನಲ್ಲಿ ಮೊಬೈಲ್ ವಾಹನ ಚೆಕ್‌ಪೋಸ್ಟ್ (ಎಂವಿಸಿಪಿ) ಸ್ಥಾಪಿಸಿವೆ. ಆಜಾದ್‌ಗುಂಜ್ ಬಾರಾಮುಲ್ಲಾ ಕಡೆಗೆ ಬರುತ್ತಿದ್ದ ಇಬ್ಬರು ಶಂಕಿತ ವ್ಯಕ್ತಿಗಳು ಜಂಟಿ ನಾಕಾ ಪಾರ್ಟಿಯನ್ನು ಗಮನಿಸಿ ಓಡಿಹೋಗಲು ಪ್ರಯತ್ನಿಸಿದರು. ಆದರೆ, ಜಾಣ್ಮೆಯಿಂದ ಅವರನ್ನು ಬಂಧಿಸಲಾಯಿತು' ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ಹೈಬ್ರಿಡ್ ಭಯೋತ್ಪಾದಕರಾಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್‌ಇಟಿಯೊಂದಿಗೆ ಸಂಬAಧ ಹೊಂದಿದ್ದಾರೆ. ಮುಂಬರುವ ಸ್ವಾತಂತ್ರ‍್ಯ ದಿನಾಚರಣೆಯ ದೃಷ್ಟಿಯಿಂದ ಟೌನ್ ಬಾರಾಮುಲ್ಲಾದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಶಸ್ತಾçಸ್ತç ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದರು ಎಂದು ಪೊಲೀಸ್ ಹೇಳಿಕೆ ತಿಳಿಸಿದೆ. ಭಾರತೀಯ ಶಸ್ತಾçಸ್ತç ಕಾಯ್ದೆ ಮತ್ತು ಯುಎ (ಪಿ) ಕಾಯಿದೆಯಡಿಯಲ್ಲಿ ಬಾರಾಮುಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.