ವೀರಾಜಪೇಟೆ, ಆ. ೧: ಇಶಾ ಫೌಂಡೇಶನ್, ರೋಟರಿ ಕ್ಲಬ್ ಮತ್ತು ರೋಟರಿ ಶಾಲೆ ವೀರಾಜಪೇಟೆ ಸಹಯೋಗದಲ್ಲಿ ವೀರಾಜಪೇಟೆ ರೈತ ಉತ್ಪನ್ನ ಸಂಸ್ಥೆ ಮತ್ತು ಜೈನ್ ಇನ್‌ಸ್ಟಿಟ್ಯೂಟ್ ಆಫ್ ವಾಸ್ಕುಲರ್ ಸೈನ್ಸ್ನ ಸಾಂಸ್ಥಿಕ ನೆರವಿನೊಂದಿಗೆ ವೀರಾಜಪೇಟೆಯ ಸಾರ್ವಜನಿಕರಿಗೆ ಮಧುಮೇಹ ಪರೀಕ್ಷೆ ಮತ್ತು ಪಾದದ ಪ್ರತಿಫಲಿತ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಉಚಿತ ಮಧುಮೇಹ ತಪಾಸಣೆ, ಪಾದ ಸ್ಪರ್ಶ ಪರೀಕ್ಷೆ, ಇ.ಸಿ.ಜಿ., ರಕ್ತದೊತ್ತಡ ಪರೀಕ್ಷೆ ನಡೆಸಲಾಯಿತು. ೧೦೦ಕ್ಕೂ ಹೆಚ್ಚು ಜನರು ಇದರ ಪ್ರಯೋಜನವನ್ನು ಪಡೆದರು. ಜೈನ್ ಆಸ್ಪತ್ರೆಯ ಡಾ. ವಿನಯಾ, ದೀಪಾ ಮತ್ತು ತಂಡ ವೈದ್ಯಕೀಯ ಪರೀಕ್ಷೆ ನಡೆಸಿದರು. ಇಶಾ ಫೌಂಡೇಶನ್‌ನ ಲಕ್ಷಿö್ಮÃಕಾಂತ್ ಮತ್ತು ಮಹೇಶ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಅಧ್ಯಕ್ಷ ಬನ್ಸಿ ಪೂವಣ್ಣ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಶಾಲೆಯ ಬಿ.ಬಿ. ಮಾದಪ್ಪ, ಸುನೀಲ್ ನಾಣಯ್ಯ, ಪ್ರವೀಣ್ ಪೂವಯ್ಯ, ಸರೋಜ ಕಾರ್ಯಪ್ಪ ಉಪಸ್ಥಿತರಿದ್ದರು. ರೋಟರಿ ಶಾಲೆ ಶಿಕ್ಷಕಿ ಡೀನಾ ಸ್ವಾಗತಿಸಿ, ಇಶಾ ಫೌಂಡೇಶನ್‌ನ ಸಂಚಾಲಕಿ ಪವಿತ್ರಾ ವಂದಿಸಿದರು.