ಮಡಿಕೇರಿ, ಜು. ೩೧: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ‘ಸ್ವರಾಜ್ಯ - ಸುರಾಜ್ಯ’ ಎಂಬ ಶೀರ್ಷಿಕೆಯಡಿ ಕವಿ ಗೋಷ್ಠಿ ನಡೆಯಲಿದೆ.
ಇಲ್ಲಿ ವಾಚಿಸಲ್ಪಟ್ಟ ಮೂರು ಉತ್ಕೃಷ್ಟ ಕವಿತೆಗಳನ್ನು ರಾಜ್ಯಸಮಿತಿಗೆ ಕಳಿಸಲಾಗುವುದು. ಅಲ್ಲಿ ಆಯ್ಕೆಯಾದ ೨೫ ಕವಿತೆಗಳಿಗೆ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ವಾಚನದ ಅವಕಾಶ ದೊರಕಲಿದೆ ಅಲ್ಲಿ ಆಯ್ಕೆಯಾಗುವ ಮೊದಲ ಮೂರು ಕವಿತೆಗಳಿಗೆ ಬಹು ಮಾನಗಳನ್ನು ನೀಡಲಾಗುವುದು ಎಂದು ಪರಿಷದ್ ಅಧ್ಯಕ್ಷ ಡಾ. ಕುಶ್ವಂತ್ ಕೋಳಿಬೈಲು ತಿಳಿಸಿದ್ದಾರೆ.
ಈ ಕವಿಗೋಷ್ಠಿಗಾಗಿ ಕವಿತೆಗಳನ್ನು ಆಹ್ವಾನಿಸಲಾಗಿದ್ದು ಕವಿತೆಗಳು ಆಗಸ್ಟ್ ಐದರ ಒಳಗೆ ಅ.ಭಾ.ಸಾ.ಪ. ಜಿಲ್ಲಾ ಕಾರ್ಯದರ್ಶಿ ಬಬ್ಬಿರ ಸರಸ್ವತಿ ರವರ ಮೊಬೈಲ್ ಸಂಖ್ಯೆ ೯೪೮೩೬೪೫೬೬೪ ಅಥವಾ ಜಿಲ್ಲಾ ಖಜಾಂಜಿ ಹೇಮಂತ್ ಪಾರೇರ ಅವರ ೯೭೪೩೩೫೩೫೯೭ ಸಂಖ್ಯೆಗೆ ಕಳಿಸಬೇಕು.