ಕೂಡಿಗೆ, ಅ. ೧: ಹೆಬ್ಬಾಲೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅರುಣಕುಮಾರಿ, ಉಪಾಧ್ಯಕ್ಷರಾಗಿ ಲತಾ ಗೆಲುವು ಸಾಧಿಸಿದ್ದಾರೆ. ಬಿಸಿಎಂ ಎ ಮಹಿಳಾ ವಿಭಾಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಅರುಣಕುಮಾರಿ ಮತ್ತು ರತ್ನಮ್ಮ ಸ್ಪರ್ಧಿಸಿದ್ದರು.
೧೪ ಮಂದಿಯ ಆಡಳಿತ ಮಂಡಳಿ ಸದಸ್ಯರ ಪೈಕಿ ಅರುಣಕುಮಾರಿ ಅವರಿಗೆ ೭ ಮತಗಳು, ರತ್ನಮ್ಮ ಅವರಿಗೆ ೫ ಮತಗಳು ಲಭಿಸಿದವು.
ಪರಿಶಿಷ್ಟ ಜಾತಿ ವಿಭಾಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಾರಾಯಣ ಮತ್ತು ಲತಾ ಸ್ಪರ್ಧಿಸಿದ್ದರು. ಈ ಪೈಕಿ ಲತಾ ಅವರಿಗೆ ೭ ಮತ, ನಾರಾಯಣ ಅವರಿಗೆ ೫ ಮತಗಳು ಲಭಿಸಿವೆ. ಗ್ರಾಮ ಪಂಚಾಯಿತಿ ಆಡಳಿತದ ಮಂಡಳಿಯ ಸದಸ್ಯರ ಸಂಖ್ಯೆ ೧೪. ಇದರಲ್ಲಿ ಒಬ್ಬ ಮಹಿಳಾ ಸದಸ್ಯೆ ಚುನಾವಣೆಗೆ ಗೈರಾಗಿದ್ದರು. ಮತದಾನದ ಮೂಲಕ ಚಲಾಯಿಸಲಾದ ಒಟ್ಟು ೧೩ ಮತಗಳಲ್ಲಿ ಒಂದು ಮತ ತಿರಸ್ಕೃತಗೊಂಡಿತು.
ಚುನಾವಣೆಯ ಸಂದರ್ಭ ಸದಸ್ಯರಾದ ಮಂಜುನಾಥ ಅರುಣಕುಮಾರಿ, ಶಿವನಂಜಪ್ಪ, ನಾರಾಯಣ, ಚಂದ್ರಶೇಖರ್ ಜೋಗಿ, ತನುಕುಮಾರ್ ರತ್ನಮ್ಮ, ಪರಮೇಶ್, ಮಹದೇವ, ಪುಟ್ಟ ಲಕ್ಷಿö್ಮ, ಕವಿತ, ಲತಾ, ಯಶಸ್ವಿನಿ ಹಾಜರಿದ್ದರು. ಚುನಾವಣಾಧಿಕಾರಿಯಾಗಿ ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಭಾಸ್ಕರ್ ತಂಡ ಕಾರ್ಯನಿರ್ವಹಿಸಿತು.
ಚುನಾವಣೆ ಫಲಿತಾಂಶದ ನಂತರ ವಿಜಯೋತ್ಸವ ನಡೆಯಿತು.