ಮಡಿಕೇರಿ, ಆ. ೧: ಸಮಾಜದಲ್ಲಿ ಶಿಕ್ಷಣ ಎಂಬುದು ದೇಶಕ್ಕೆ ಸತ್ಪçಜೆಗಳನ್ನು ರೂಪಿಸುವಂತಹ ಮಹತ್ವದ ಅಂಶ... ಶೈಕ್ಷಣಿಕ ವ್ಯವಸ್ಥೆ ದೇಶದ ಸುಭದ್ರತೆಗೆ ಬುನಾದಿಯಾಗಬೇಕು. ಈ ಮೂಲಕ ಶಾಂತಿ - ಸಾಮರಸ್ಯ- ದೇಶಪ್ರೇಮದೊಂದಿಗೆ ಯುವ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದು ದೇಶ ಕಟ್ಟುವಂತಾಗಬೇಕು ಎಂಬುದು ಎಲ್ಲರ ಅಭಿಲಾಷೆ... ಆದರೆ, ಪ್ರಸ್ತುತ ರಾಜಕೀಯ ಭಿನ್ನಾಭಿಪ್ರಾಯಗಳು ಈ ಶಿಕ್ಷಣ ವ್ಯವಸ್ಥೆಯನ್ನು ಅದರ ನೈಜ ಪರಿಕಲ್ಪನೆಯ ಹೊರತಾಗಿ ಬಿಂಬಿಸುವ ಪ್ರಯತ್ನಕ್ಕೆ ಕಾರಣವಾಗುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಆತಂಕಕಾರಿ ಎನಿಸುತ್ತಿದೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ನಾಣ್ನುಡಿ ಅರ್ಥಗರ್ಭಿತವಾದದ್ದು. ಚಿಕ್ಕಂದಿನಲ್ಲಿ ಮಕ್ಕಳು ಪಡೆಯುವ ಶಿಕ್ಷಣ ಅವರ ಭವಿಷ್ಯವನ್ನು ಮಾತ್ರವಲ್ಲ ದೇಶದ ಭವಿಷ್ಯವನ್ನೂ ರೂಪಿಸುತ್ತದೆ. ಹೀಗಿರುವಾಗ ಅವರವರ ಮೂಗಿನ ನೇರಕ್ಕೆ ಶೈಕ್ಷಣಿಕ ಕ್ರಮವನ್ನು ಹೇರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ಇದೀಗ ಇಂತಹದ್ದೊAದು ಗೊಂದಲಮಯವಾದ ಸನ್ನಿವೇಶವೊಂದನ್ನು ಸರಕಾರ ಸೃಷ್ಟಿಸಲು ಮುಂದಾಗಿದ್ದು, ಇದರ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.
ಪಠ್ಯ ಕ್ರಮದಲ್ಲಿ ಧರ್ಮ ಬೋಧನೆಗಳು
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರಕಾರ ರೂಪಿಸಿದ್ದ ಪಠ್ಯಕ್ರಮಗಳನ್ನು ಪರಿಷ್ಕರಣೆ ಮಾಡುವ ಮೂಲಕ ಇದೀಗ ವಿವಾದಕ್ಕೆ ಒಳಗಾಗಿದೆ. ಹಿಂದೂ ಧರ್ಮದ ಸಂಘಟನೆಗೆ ದುಡಿದವರ ಪಾಠವನ್ನು ಸೇರಿಸಿದಾಗ ಕಿಡಿಕಾರಿದ್ದ ಕಾಂಗ್ರೆಸ್ ಇದೀಗ ಇಸ್ಲಾಂ, ಕ್ರೆöÊಸ್ತ ಬೋಧನಗೆಳನ್ನು ಅಳವಡಿಸಿ ಟೀಕೆಗೆ ಗುರಿಯಾಗುತ್ತಿದೆ.
೭ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಇತಿಹಾಸ ಭಾಗದಲ್ಲಿ ‘ಜಗತ್ತಿನ ಪ್ರಮುಖ ಘಟನೆಗಳು’ ಎಂಬ ಪಾಠವನ್ನು ಹೊಸದಾಗಿ ಸೇರಿಸಲಾಗಿದೆ. ಇದರಲ್ಲಿ ‘ಕ್ರೆöÊಸ್ತ ಹಾಗೂ ಇಸ್ಲಾಂ ರಿಲಿಜನ್’ ಎಂಬ ಉಪವಿಷಯಗಳಲ್ಲಿ ಧರ್ಮದ ಬೋಧನೆಗಳನ್ನು ಸೇರಿಸಲಾಗಿದೆ.
ಧರ್ಮಗಳ ಉದಯ, ವಿಕಾಸ ಹಾಗೂ ಅವು ಬೀರಿರುವ ಪ್ರಭಾವಗಳನ್ನು ತಿಳಿಸಲಾಗಿದೆ. ಜೊತೆಗೆ ಯೇಸುಕ್ರಿಸ್ತ, ಪ್ರವಾದಿ ಮಹಮ್ಮದರ ಜೀವನ ಹಾಗೂ ಬೋಧನೆಗಳನ್ನು ವಿವರಿಸಲಾಗಿದೆ. ಅದರೊಂದಿಗೆ ರೋಮನ್ ಕ್ಯಾಥೋಲಿಕ್ ಚರ್ಚ್ ಪ್ರಬಲವಾಗಿ ಮೂಡಿಬಂದ ಹಿನ್ನೆಲೆ, ಇಸ್ಲಾಮಿಕ್ ಸಾಮ್ರಾಜ್ಯದ ಸ್ಥಾಪನೆ, ಅರಬ್ಬರ ಕೊಡುಗೆ ಮತ್ತು ಜಾಗತಿಕ ಇತಿಹಾಸ ಮೇಲೆ ಮಂಗೋಲರು ಮತ್ತು ಆಟೋಮನ್ ಟರ್ಕರ ಪ್ರಭಾವಗಳನ್ನು ಪಾಠದಲ್ಲಿ ನಿರೂಪಿಸಲಾಗಿದೆ.
ಇಸ್ಲಾಂ ಸ್ಥಾಪಕ ಮಹಮ್ಮದ್ ಪೈಗಂಬರರ ಅನೇಕ ಉಲ್ಲೇಖಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಇಸ್ಲಾಂ ಪದದ ಅರ್ಥವನ್ನು ‘ಶರಣಾಗತಿ’, ಮುಸ್ಲಿಂ ಎಂದರೆ ‘ಅಲ್ಲಾನಿಗೆ ಶರಣಾದವರು’ ಎಂದು ಹೇಳಲಾಗಿದೆ