ನಾಪೋಕ್ಲು, ಆ. ೧: ಇಲ್ಲಿನ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ತಾ. ೩ ರಂದು (ನಾಳೆ) ಮೂರನೇ ವರ್ಷದ ಕಕ್ಕಡ ೧೮ರ ತೀನಿ ನಮ್ಮೆಯನ್ನು ಹಮ್ಮಿ ಕೊಳ್ಳಲಾಗಿದ್ದು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ವಿವಿಧ ತಿನಿಸುಗಳ ಪ್ರದರ್ಶನ ಮತ್ತು ಪೈಪೋಟಿ ಯನ್ನು ಏರ್ಪಡಿಸಲಾಗಿದೆ ಎಂದು ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ತಿಳಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಪೀಳಿಗೆ ಹಳೆ ಕಾಲದ ತಿಂಡಿ ತಿನಿಸುಗಳನ್ನು ಮರೆಯುತ್ತಿದ್ದಾರೆ. ಅಂತಹ ತಿಂಡಿ ತಿನಿಸುಗಳು ಚರಿತ್ರೆಯಲ್ಲಿ ಮರೆತುಹೋಗುವ ಸಾಧ್ಯತೆ ಇದೆ. ಅದನ್ನು ದಾಖಲಿಸುವ ಹಿನ್ನೆಲೆಯಲ್ಲಿ ಕಕ್ಕಡ ೧೮ರ ತೀನಿ ನಮ್ಮೆಯನ್ನು ಹಮ್ಮಿಕೊಳ್ಳಲಾಗಿದೆ. ತೀನಿ ನಮ್ಮೆಯ ಪೈಪೋಟಿಯಲ್ಲಿ ಪ್ರದರ್ಶನಕ್ಕಿರಿಸುವ ತಿನಿಸುಗಳನ್ನು ತೀರ್ಪುಗಾರರು ಪರೀಕ್ಷಿಸಲಿದ್ದು ನಾಪೋಕ್ಲು, ಆ. ೧: ಇಲ್ಲಿನ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ತಾ. ೩ ರಂದು (ನಾಳೆ) ಮೂರನೇ ವರ್ಷದ ಕಕ್ಕಡ ೧೮ರ ತೀನಿ ನಮ್ಮೆಯನ್ನು ಹಮ್ಮಿ ಕೊಳ್ಳಲಾಗಿದ್ದು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ವಿವಿಧ ತಿನಿಸುಗಳ ಪ್ರದರ್ಶನ ಮತ್ತು ಪೈಪೋಟಿ ಯನ್ನು ಏರ್ಪಡಿಸಲಾಗಿದೆ ಎಂದು ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ತಿಳಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಪೀಳಿಗೆ ಹಳೆ ಕಾಲದ ತಿಂಡಿ ತಿನಿಸುಗಳನ್ನು ಮರೆಯುತ್ತಿದ್ದಾರೆ. ಅಂತಹ ತಿಂಡಿ ತಿನಿಸುಗಳು ಚರಿತ್ರೆಯಲ್ಲಿ ಮರೆತುಹೋಗುವ ಸಾಧ್ಯತೆ ಇದೆ. ಅದನ್ನು ದಾಖಲಿಸುವ ಹಿನ್ನೆಲೆಯಲ್ಲಿ ಕಕ್ಕಡ ೧೮ರ ತೀನಿ ನಮ್ಮೆಯನ್ನು ಹಮ್ಮಿಕೊಳ್ಳಲಾಗಿದೆ. ತೀನಿ ನಮ್ಮೆಯ ಪೈಪೋಟಿಯಲ್ಲಿ ಪ್ರದರ್ಶನಕ್ಕಿರಿಸುವ ತಿನಿಸುಗಳನ್ನು ತೀರ್ಪುಗಾರರು ಪರೀಕ್ಷಿಸಲಿದ್ದು ಪುರಸ್ಕೃತೆ ರಾಣಿ ಮಾಚಯ್ಯ, ಅಂಕುರ್ ವಿದ್ಯಾಸಂಸ್ಥೆಯ ಪ್ರಾಂಶು ಪಾಲರಾದ ಕೇಟೋಳಿರ ರತ್ನ ಚರ್ಮಣ್ಣ ಹಾಗೂ ಜ್ಞಾನೋದಯ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ವೇತನ್ ಚಂಗಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ನಿರ್ದೇಶಕರಾದ ಕುಲ್ಲೇಟಿರ ಹೇಮಾ ಅರುಣ್, ಬಿದ್ದಂಡ ಉಷಾ ದೇವಮ್ಮ, ನಾಟೋಳಂಡ ಕಸ್ತೂರಿ ಉಪಸ್ಥಿತರಿದ್ದರು.