ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ಜು. ೩೧ : ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ (ಐಸಿಒ) ಭಾರತದ ಕಾಫಿ ಮಂಡಳಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಕಾಫಿ ಉದ್ಯಮದ ಸಹಯೋಗದೊಂದಿಗೆ ವಿಶ್ವ ಕಾಫಿ ಸಮ್ಮೇಳನ ೨೦೨೩ ಸೆಪ್ಟೆಂಬರ್ ೨೫ ರಿಂದ ೨೮ ರವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದೆ. ಇಂದು, ಈವೆಂಟ್ನ ಲೋಗೋ, ಥೀಮ್ ಮತ್ತು ಮುಖ್ಯಾಂಶಗಳನ್ನು ಅನಾವರಣಗೊಳಿಸಲಾಯಿತು.
ಅರಮನೆ ರಸ್ತೆಯ ಶಾಂಗ್ರಿಲಾ ಹೊಟೇಲ್ನಲ್ಲಿ ನಡೆದ ಈ ಲೋಗೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಅವರು ಭಾರತದ ಕಾಫಿ ರಾಜಧಾನಿಯಾಗಿ ಕರ್ನಾಟಕದ ಪಾತ್ರವನ್ನು ಒತ್ತಿಹೇಳಿದರಲ್ಲದೆ ಕಾರ್ಯಕ್ರಮದ ಆತಿಥೇಯ ರಾಜ್ಯವಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಅವರು ಈ ಸಮ್ಮೇಳನವು ತೋಟಗಳಿಂದ ಕೆಫೆವರೆಗೆ ಕಾಫಿ ಮೌಲ್ಯ ಸರಪಳಿಯಾದ್ಯಂತ ವ್ಯಾಪಕ ಹೂಡಿಕೆ ಅವಕಾಶಗಳನ್ನು ಮತ್ತು ಉದ್ಯೋಗಾವಕಾಶಗಳ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತದ ನಂ.೧ ಡಬಲ್ಸ್ ಟೆನ್ನಿಸ್ ಆಟಗಾರ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತರಾದ ರೋಹನ್ ಬೋಪಣ್ಣ ಅವರನ್ನು ರಾಯಭಾರಿ ಎಂದು ಘೋಷಿಸಿದ ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ. ಜಗದೀಶ್ ಅವರು ಮೊದಲ ಬಾರಿಗೆ ಏಷ್ಯಾದ ರಾಷ್ಟçವೊಂದರಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಜಾಗತಿಕ ವೇದಿಕೆಯಲ್ಲಿ ‘ಕಾಫೀಸ್ ಆಫ್ ಇಂಡಿಯಾ’ ಅನ್ನು ಪ್ರಚಾರ ಮಾಡುವ ಮೂಲಕ ಭಾರತದಲ್ಲಿ ಕಾಫಿ ಬೆಳೆಗಾರರಿಗೆ ಗಮನಾರ್ಹ ಪ್ರಯೋಜನಗಳ ಆಗಲಿದೆ ಎಂದರು. ಇದು ಅವರಿಗೆ ಹೊಸ ಅವಕಾಶಗಳು ಮತ್ತು ಮಾರುಕಟ್ಟೆಗಳನ್ನು ಸೃಷ್ಟಿಸುತ್ತದೆ ಎಂದರು.
ರೋಹನ್ ಬೋಪಣ್ಣ ಮಾತನಾಡಿ, ಕಾಫಿ ಬೆಳೆಗಾರರೊಬ್ಬರ ಪುತ್ರನಾಗಿ ಮತ್ತು ಯಶಸ್ವಿ ಟೆನ್ನಿಸ್ ಆಟಗಾರನಾಗಿ ವೇಗವಾಗಿ ವಿಸ್ತರಿಸುತ್ತಿರುವ ಭಾರತೀಯ ಕಾಫಿ ಉದ್ಯಮದ ಬೆಳವಣಿಗೆಯಲ್ಲಿ ಕೈ ಜೋಡಿಸುತ್ತಿರುವ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ಕಾಂಟಿನೆAಟಲ್ ಕಾಫಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಚಲ್ಲಾ ಶ್ರೀಶಾಂತ್, ಟಾಟಾ ಕಾಫಿ ಲಿಮಿಟೆಡ್ನ ಸಿಇಓ ಚಾಕೊ ಪುರಕಲ್ ಥಾಮಸ್, ಎಸ್ಎಲ್ಎನ್ ಕಾಫಿಯ ವ್ಯವಸ್ಥಾಪಕ ಎನ್. ಸಾತಪ್ಪನ್, ನೆಸ್ಲೆ ಇಂಡಿಯಾ ಲಿಮಿಟೆಡ್ನ ದಕ್ಷಿಣ ಏಷ್ಯಾದ ಪಾನೀಯ ವಿಭಾಗದ ನಿರ್ದೇಶಕ ಸುನಯನ್ ಮಿತ್ರ ಸೇರಿದಂತೆ ಪ್ರಮುಖ ಪ್ರಾಯೋಜಕ ಪ್ರತಿನಿಧಿಗಳು ಭಾಗವಹಿಸಿದ್ದರು.