ಕೂಡಿಗೆ, ಜು. ೩೦: ಭಾರತೀಯ ಯೋಧರ ಸಾಹಸಗಾಥೆ ಮತ್ತು ಅವರ ತ್ಯಾಗದ - ಪ್ರತೀಕವಾದ ೨೪ನೇ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮಾಚರಣೆಯನ್ನು ಸೈನಿಕ ಶಾಲೆ ಕೂಡಿಗೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ಲೆಫ್ಟಿನೆಂಟ್ ಕರ್ನಲ್ ಪಿ.ಎಸ್. ಗಣಪತಿ (ನಿವೃತ್ತ), ಗೂಗಲ್ ಮೀಟ್ ವರ್ಚುವಲ್ ಮೂಲಕ ಹಾಜರಿದ್ದರು.
ಕಾರ್ಯಕ್ರಮದ ಮೊದಲಿಗೆ ಶಾಲೆಯ ಪ್ರಾಂಶುಪಾಲ ಕರ್ನಲ್ ೫ ಕಣ್ಣನ್, ಆಡಳಿತಾಧಿಕಾರಿಗಳಾದ ಏಂಗ್ ಕಮಾಂಡರ್ ವಿ. ಪ್ರಕಾಶ್ ರಾವ್, ಉಪಪ್ರಾಂಶುಪಾಲ ಸ್ಕಾ÷್ವಡ್ರನ್ ಲೀಡರ್ ಮನ್ ಪ್ರೀತ್ ಸಿಂಗ್‌ರವರು ಶಾಲೆಯ ಎನ್‌ಸಿಸಿ ಘಟಕದ ಸಹಯೋಗದೊಂದಿಗೆ ಶಾಲೆಯ ಆವರಣದಲ್ಲಿ ನಿರ್ಮಿಸಲ್ಪಟ್ಟರುವ ವೀರ ಯೋಧರ ಸ್ಮಾರಕಕ್ಕೆ ಪುಷ್ಪ ಗುಚ್ಛವನ್ನು ಸಮರ್ಪಿಸುವು ದರೊಂದಿಗೆ ಗೌರವ ವಂದನೆ ಸಲ್ಲಿಸಿದರು. ಮುಖ್ಯ ಅತಿಥಿಗಳಾದ ಲೆಫ್ಟಿನೆಂಟ್ ಕರ್ನಲ್ ಪಿ.ಎಸ್. ಗಣಪತಿ (ನಿವೃತ್ತ) ಅವರು ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಶೌರ್ಯದ ಹಲವು ಪ್ರಸಂಗ ಗಳನ್ನು ಸ್ಮರಿಸುವುದರ ಮೂಲಕ ಪ್ರಸ್ತುತ ದಿನದ ಮಹತ್ವವನ್ನು ವಿವರಿಸಿದರು. ಈ ಹೋರಾಟವು ನಮ್ಮ ರಾಷ್ಟçದ ಸಾರ್ವಭೌಮತ್ವವನ್ನು ಪರಾಕ್ರಮದಿಂದ ರಕ್ಷಿಸಿದ ನಮ್ಮ ಸೈನಿಕರ ಅದಮ್ಯ ಮನೋಭಾವ ಮತ್ತು ಶೌರ್ಯಕ್ಕೆ ಸಾಕ್ಷಿಯಾಗಿದೆ. ಹಾಗೆಯೇ ಭಾರತೀಯ ಶಾಂತಿ ಪಾಲನಾ ಪಡೆ ಐಪಿಕೆಎಫ್)ಯ ಭಾಗವಾಗಿ ಶ್ರೀಲಂಕಾದ ಅಂತರ್ ಯುದ್ಧ ಸಂದರ್ಭದಲ್ಲಿ ಸಲ್ಲಿಸಿದ ಸೇವೆ ಹಾಗೂ ಎಲ್‌ಟಿಟಿಇ ಯೊಂದಿಗಿನ ಹೋರಾಟದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊAಡರು. ಹಾಗೆಯೇ ಮುಖ್ಯ ಅತಿಥಿಗಳು ತಮ್ಮ ಸಮರ್ಥ ನಾಯಕತ್ವದಡಿ ಅವರ ೮ನೇ ಮಹ ಘಟಕದ ಪಡೆಗಳು ಶ್ರೀಲಂಕಾದಲ್ಲಿ ನಡೆಸಿದ ರಸ್ತೆ ತೆರವು ಕಾರ್ಯಾಚರಣೆ ಹಾಗೂ ೧೯೯೮ರ ಸಮಯದಲ್ಲಿ ಜಾಕ್ಕಾದಲ್ಲಿ ಎದುರಿಸಿದ ಭೀಕರ ಯುದ್ಧದ ಸನ್ನಿವೇಶವನ್ನು ವಿವರಿಸಿದರು. ಭಾರತ-ಶ್ರೀಲಂಕಾ ಒಪ್ಪಂದವನ್ನು ಜಾರಿಗೊಳಸಲು ಹಾಗೂ ಶ್ರೀಲಂಕಾದಲ್ಲಿ ರಾಜಕೀಯ ಸ್ಥಿರತೆಯನ್ನು ಕಾಪಾಡುವಲ್ಲಿ ಭಾರತೀಯ ಸೇನೆ ಮಹತ್ವದ ಪಾತ್ರವನ್ನು ವಹಿಸಿತು' ಎಂದು ತಿಳಿಸಿದರು. ಹಾಗೆಯೇ ಪ್ರತಿ ಯೊಬ್ಬರೂ ಭಾರತೀಯ ಸೇನೆಗೆ ಸೇರಿ, ತಾಯ್ನಾಡಿನ ಸೇವೆಗೆ ಮುಂದಾಗಬೇಕೆAದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲರು, ೧೯೯೯ರಲ್ಲಿ ಆಪರೇಷನ್ ವಿಜಯ್ ಸಂದರ್ಭದಲ್ಲಿ ರಾಷ್ಟçದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಭಾರತೀಯ ವೀರಯೋಧರು ತೋರಿದ ಧೈರ್ಯ, ಶೌರ್ಯ ಮತ್ತು ಸಮರ್ಪಣೆಗೆ ಕೃತಜ್ಞತೆ ಸಲ್ಲಿಸಿದರು.
ಶಾಲೆಯು ಆಜಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ, 'ವೀರ್ ಗಾಳಿ ಯೋಜನೆಯಡಿಯಲ್ಲಿ ಈ ವಿಶೇಷ ಸಭೆಯನ್ನು ಏರ್ಪಡಿಸ ಲಾಗಿದೆ ಎಂದು ತಿಳಿಸುವುದ ರೊಂದಿಗೆ, ಶಾಲೆಯು ೭೫ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ತಿಳಿಸಿದರು.