ಸುಂಟಿಕೊಪ್ಪ, ಜು. ೩೦: ಸುಂಟಿಕೊಪ್ಪ ಕಾರ್ಗಿಲ್ ವಿಜಯೋತ್ಸವಕ್ಕೆ ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಡಿ. ಪದ್ಮನಾಭ ಅವರು ಚಾಲನೆ ನೀಡಿದರು.

ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋ ಜಿಸಲಾದ ಕಾರ್ಗಿಲ್ ವಿಜಯೋತ್ಸವ ಕಾರ್ಯ ಕ್ರಮದ ರೂವಾರಿ ಯಾದಂತಹ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಎ.ಎಸ್. ಶ್ರೀಶಾ ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಮಾತನಾಡಿ, ಕಾರ್ಗಿಲ್ ವಿಜಯ್ ದಿವಸ ವಿಜಯ್ ದಿವಸ್ ಮಾತ್ರವಲ್ಲದೆ ಈ ಯುದ್ಧದಲ್ಲಿ ಹುತಾತ್ಮರಾದಂತಹ ೫೨೭ ಮಂದಿ ವೀರಯೋಧರನ್ನು ನೆನೆಯುವ ಮತ್ತು ಅವರುಗಳಿಗೆ ನಮನಗಳನ್ನು ಸಲ್ಲಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಸರಕಾರ ಗಮನಹರಿಸಿ ಜಿಲ್ಲಾಡಳಿತ ವತಿಯಿಂದ ಸರಕಾರಿ ಕಾರ್ಯಕ್ರಮವಾಗಿ ನಡೆಸುವಂತಾಗಬೇಕೆAದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮಲ್ಟಿ ಮೀಡಿಯದ ಸಿಬ್ಬಂದಿಗಳು ಹಾಗೂ ಸುಂಟಿಕೊಪ್ಪದ ನಾಗರಿಕರು ಪಾಲ್ಗೊಂಡಿದ್ದರು.