ಸಿದ್ದಾಪುರ, ಜು.೩೧ : ಕಳೆದ ೧೦ ದಿನಗಳಿಂದ ಆರ್ಭಟಿಸಿದ ಮಳೆಗೆ ವೀರಾಜಪೇಟೆ ತಾಲೂಕಿನಾದ್ಯಂತ ಈವರೆಗೆ ಒಟ್ಟು ೧೬ ಮನೆಗಳು ಹಾನಿ ಸಂಭವಿಸಿದೆAದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಎಚ್.ಎಸ್. ರಾಮಚಂದ್ರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು ಮಳೆಗಾಳಿಗೆ ಸಿಲುಕಿ ೧೬ ಮನೆಗಳು ಹಾನಿಯಾಗಿವೆ. ಈ ಪೈಕಿ ಮೂರು ಮನೆಗಳು ವೀರಾಜಪೇಟೆ ಪುರಸಭೆಯ ವ್ಯಾಪ್ತಿಗೆ ಒಳಪಟ್ಟಿವೆ. ಉಳಿದ ೧೩ ಮನೆಗಳು ವೀರಾಜಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ಒಂದು ಗುಡಿಸಲು ಹಾಗೂ ಒಂದು ಕೊಟ್ಟಿಗೆ ಹಾನಿಯಾಗಿದೆ ಹಾಗೂ ಒಂದು ಜಾನುವಾರು ಸಾವನ್ನಪ್ಪಿದೆ. ಜಾನುವಾರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅದರ ಮಾಲೀಕರಿಗೆ ಪರಿಹಾರ ನೀಡಲಾಗಿದೆ ಎಂದರು.
ಎರಡು ಮನೆಗಳಿಗೆ ಪರಿಹಾರ ನೀಡಲಾಗಿದ್ದು ಉಳಿದ ಮನೆ ಹಾನಿಗಳ ವರದಿಯು ಕಂದಾಯ ಪರಿವೀಕ್ಷಕರಿಂದ ಬಂದ ಬಳಿಕ ನೀಡಲಾಗುವುದು. ಪರಿಹಾರ ಕಾರ್ಯವು ಪ್ರಗತಿಯಲ್ಲಿದೆ ಎಂದು ರಾಮಚಂದ್ರ ತಿಳಿಸಿದರು. ವೀರಾಜಪೇಟೆ ತಾಲೂಕಿನಲ್ಲಿ ಮನೆಗಳ ಮೇಲೆ ಮರಗಳು ಬಿದ್ದು ಹಾಗೂ ಅತಿ ಶೀತದಿಂದ ಮನೆಯ ಗೋಡೆಗಳು ಕುಸಿದಿರುತ್ತದೆ. ಅಮ್ಮತ್ತಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಮನೆಗಳು ಹಾನಿಯಾಗಿರುವುದು ಕಂಡುಬAದಿದೆ. ಹಾನಿಗೀಡಾದ ಸ್ಥಳಗಳಿಗೆ ತಾಲೂಕು ತಹಶೀಲ್ದಾರ್ ಕಂದಾಯ ಪರಿವೀಕ್ಷಕರು ಗ್ರಾಮ ಆಡಳಿತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತಿದ್ದಾರೆ. ಜಾನುವಾರು ಸಾವನ್ನಪ್ಪಿದ ಮಾಲೀಕರಿಗೆ ೩೭,೫೦೦ ಪರಿಹಾರ ನೀಡಲಾಗಿದೆ ಎಂದರು.