ಮಡಿಕೇರಿ, ಜು. ೩೧: ಕುಶಾಲನಗರ ಹಾಗೂ ಸೋಮವಾರಪೇಟೆ ಭಾಗದ ನಾಯರ್ ಸಮುದಾಯದ ೨೦೨೨-೨೩ ಸಾಲಿನ ವಾರ್ಷಿಕ ಮಹಾ ಸಭೆ ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕರಯೋಗಮ್ ಅಧ್ಯಕ್ಷ ಹರೀಶಕುಮಾರ್ ಕೆ.ಕೆ. ವಹಿಸಿದ್ದರು. ಕುಟುಂಬ ಪ್ರಬೋದನ್ ಕೊಡಗು ಜಿಲ್ಲಾ ಪ್ರಮುಖ್ ಟಿ.ಸಿ. ಚಂದ್ರನ್ ಅತಿಥಿಗಳಾಗಿ ಆಗಮಿಸಿ, ಸಂಸ್ಕೃತಿ, ಪದ್ಧತಿ, ಆಚಾರ ವಿಚಾರಗಳನ್ನು ಉಳಿಸಿಕೊಳ್ಳುವಲ್ಲಿ ಕುಟುಂಬದ ಪಾತ್ರ ಹಿರಿದಾದುದ್ದು ಹಾಗೂ ಕುಟುಂಬದ ಮೌಲ್ಯದ ಮಹತ್ವವನ್ನು ತಿಳಿಸಿದರು.
ಕಾರ್ಯದರ್ಶಿ ಕೆ.ಪಿ. ರಾಜನ್, ಖಚಾಂಚಿ ಉತ್ತಮನ್ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಹರೀಶ್, ಕಾರ್ಯದರ್ಶಿ ಪ್ರೀಜಿತಾ ಶ್ರೀಧರ್ ಮತ್ತು ಖಜಾಂಚಿ ಶಾಲಿನಿ ಉತ್ತಮನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಧರನ್ ನಾಯರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಉಷಾ ಹರೀಶ್ ಸ್ವಾಗತಿಸಿ, ರಾಜೂ ಮೆನೋನ್ ವಂದಿಸಿದರು.