ಮಡಿಕೇರಿ, ಜು. ೩೦: ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಎಂಡಿಎAಎ ಮಾರಾಟ ಹಾಗೂ ಸರಬರಾಜು ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಟ್ಟಮುಡಿ ನಿವಾಸಿ ಎಂ.ಎ. ರಿಜ್ವಾನ್ (೨೬) ಬಂಧಿತ ಆರೋಪಿಯಾಗಿದ್ದು, ಮಾದಕ ವಸ್ತು ಎಂಡಿಎAಎ ಮಾರಾಟ, ಸರಬರಾಜು ಪ್ರಕರಣದಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದ ಈತನನ್ನು ಬೆಂಗಳೂರಿನ ದಾಸರಹಳ್ಳಿಯಲ್ಲಿ ಬಂಧಿಸಲಾಗಿದೆ.

ಎಸ್‌ಪಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ಮಡಿಕೇರಿ ಡಿವೈಎಸ್‌ಪಿ ಎಂ. ಜಗದೀಶ್, ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಯು. ಉಮೇಶ್, ಠಾಣಾಧಿಕಾರಿ ಬಿ.ಎಸ್. ವಾಣಿಶ್ರೀ ಹಾಗೂ ಸಿಬ್ಬಂದಿ, ಡಿಸಿಆರ್‌ಬಿ ವಿಶೇಷ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.