ಕೂಡಿಗೆ, ಜು. ೩೦: ಕೂಡಿಗೆ ಜ್ಞಾನೋದಯ ಶಾಲೆಯಲ್ಲಿ ೨೦೨೩-೨೪ನೇ ಸಾಲಿನ ಜ್ಞಾನ ಸಿಂಚನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿ ಸಂಘದ ನಾಯಕ ನಾಗಿ ೯ನೇ ತರಗತಿ ಧನುಷ್ ಮತ್ತು ಉಪನಾಯಕನಾಗಿ ೯ನೇ ತರಗತಿ ಅಕ್ಷಯ್ ಆಯ್ಕೆಯಾದರು. ಕಾರ್ಯ ಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ, ಮುಖ್ಯೋಪಾಧ್ಯಾಯ ಹೆಚ್.ಎನ್. ನಾಗಾಚಾರಿ ಮತ್ತು ಶಿಕ್ಷಕರು ಹಾಜರಿದ್ದರು.