ಸುಂಟಿಕೊಪ್ಪ, ಜು.೩೦ : ಆಗಸ್ಟ್ ೩ ರಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ೨ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದ್ದು, ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನವು ಬಿಸಿಎಂ.(ಎ) ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ‘ಮಹಿಳೆ’ಗೆ ಮೀಸಲಾಗಿದೆ.
ಸುಂಟಿಕೊಪ್ಪ ಗ್ರಾಮ ಪಂಚಾ ಯಿತಿಯು ಗ್ರೇಡ್೧ ಗ್ರಾಮ ಪಂಚಾ ಯಿತಿಯಾಗಿದ್ದು, ಜಿಲ್ಲೆಯ ಅತೀ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ೩ನೇ ಸ್ಥಾನದಲ್ಲಿದೆ. ಮೊದಲ ಅವಧಿ ಯಲ್ಲಿ ಅಧ್ಯಕ್ಷರಾಗಿ ಶಿವಮ್ಮ ಮಹೇಶ್ ಮತ್ತು ಉಪಾಧ್ಯಕ್ಷರಾಗಿ ಪ್ರಸಾದ್ ಕುಟ್ಟಪ್ಪ ಕಾರ್ಯನಿರ್ವಹಿಸಿದ್ದು, ಇದೀಗ ಇವರಿಬ್ಬರು ತಮ್ಮ ಸ್ಥಾನ ಮಾನಗಳನ್ನು ಅದಲು ಬದಲು ಮಾಡಿ ಕೊಳ್ಳುವ ಪ್ರಯತ್ನಕ್ಕೆ ಮುಂದಾಗುವುದರೊAದಿಗೆ ಪಂಚಾ ಯಿತಿಯ ಚುನಾವಣಾ ಕಣ ರಂಗೇ ರಿದೆ. ಒಟ್ಟು ೨೦ ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ೧೧ ಮಂದಿ ಅಧ್ಯಕ್ಷರಾಗಲು ಮೀಸಲಾತಿ ಯಡಿಯಲ್ಲಿ ಅವಕಾಶ ಪಡೆದಿದ್ದು ೩ ಮಂದಿ ಮಹಿಳೆಯರು ಉಪಾಧ್ಯಕ್ಷ ರಾಗಲು ಅವಕಾಶ ಪಡೆದಿದ್ದಾರೆ.
ಪಕ್ಷಗಳ ಬೆಂಬಲಿತ ಸದಸ್ಯರನ್ನು ನೋಡುವುದಾದರೆ ಕಾಂಗ್ರೆಸ್ ಜೆಡಿಎಸ್ ಮತ್ತು ಎಸ್‌ಡಿಪಿಐ ತಲಾ ೪ ಮಂದಿ ಸದಸ್ಯರನ್ನು ಹೊಂದಿದ್ದು, ಉಳಿದ ೮ ಮಂದಿ ಬಿಜೆಪಿ ಬೆಂಬಲಿತರಾಗಿದ್ದಾರೆ. ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆ ಅಕಾಂಕಿ ್ಷಗಳ ಚಟುವಟಿಕೆ ಬಿರುಸಾಗಿದ್ದು, ಹಾಲಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಇವರೊಂದಿಗೆ ರಫೀಕ್‌ಖಾನ್, ಆಲಿಕುಟ್ಟಿ, ಶಬ್ಬೀರ್ ತೀವ್ರ ಪೈಪೋಟಿ ಯಲ್ಲಿದ್ದಾರೆ. ಅಚ್ಚರಿಯ ವಿಚಾರವೆಂ ದರೆ ಈ ನಾಲ್ವರ ಪೈಕಿ ಪ್ರಸಾದ್ ಶಬ್ಬೀರ್ ಪಕ್ಷೇತರರಾಗಿದ್ದು, ರಫೀಕ್ ಖಾನ್ ಮತ್ತು ಆಲಿಕುಟ್ಟಿ ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ೩ನೇ ಬಾರಿ ಸದಸ್ಯರಾಗಿರುವ ಬಿ.ಎಂ. ಸುರೇಶ್ (ಪುಟ್ಟ), ಪಿ.ಆರ್. ಸುನಿಲ್ ಕುಮಾರ್, ಮಂಜು ಆಕಾಂಕ್ಷಿಗಳಾಗಿದ್ದಾರೆ.
ಸುಂಟಿಕೊಪ್ಪ ಗ್ರಾಮ ಪಂಚಾ ಯಿತಿಯಲ್ಲಿ ಕಳೆದ ೨ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿ ಅಧಿಕಾರ ನಡೆಸಲು ಎಸ್‌ಡಿಪಿಐ ಬೆಂಬಲಿತ ಸದಸ್ಯರ ಕೊಡುಗೆ ಅಪಾರವಾಗಿದ್ದು, ಈ ಬಾರಿ ಎಸ್‌ಡಿಪಿಐ ನಿಂದ ೨ನೇ ಬಾರಿ ಸದಸ್ಯ ರಾಗಿರುವ ನಾಗರತ್ನ ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗಳು ಸಹಕಾರ ನೀಡಿ ಅಧ್ಯಕ್ಷ ಸ್ಥಾನ ಕೊಡಬೇಕೆಂದು ಒತ್ತಾಯಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷೆ ಶಿವಮ್ಮ ಮಹೇಶ್ ಸೇರಿದಂತೆ ಗೀತಾ ಮತ್ತು ವಸಂತಿ ಆಕಾಂಕ್ಷಿಗಳಾಗಿದ್ದು ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ಶಿವಮ್ಮ ಮಹೇಶ್ ಪೈಪೋಟಿಯಲ್ಲಿ ಮುಂದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.