ವೀರಾಜಪೇಟೆ, ಜು. ೩೦: ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರಾಗಿದ್ದ ದೊಡ್ಡ ವೀರರಾಜೇಂದ್ರ ಅವರ ಹೆಸರಿನಲ್ಲೇ ವೀರರಾಜೇಂದ್ರಪೇಟೆ ನಿರ್ಮಾಣಗೊಂಡು ಕಾಲಕ್ರಮೇಣ ವೀರಾಜಪೇಟೆಯಾಗಿ ಪರಿವರ್ತನೆಗೊಂಡಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ವೀರಾಜಪೇಟೆ ಕೂಡ ಒಂದಾಗಿದೆ. ತಾಲೂಕು ಕೇಂದ್ರ ಆಗಿರುವ ವೀರಾಜಪೇಟೆ ಪಟ್ಟಣದೊಳಗೆ ಕೇರಳ ಸಂಪರ್ಕ ಕಲ್ಪಿಸುವ ಕೊಣನೂರು ಮಾಕುಟ್ಟ ರಾಜ್ಯ ಹೆದ್ದಾರಿಯೂ ಹಾದು ಹೋಗುತ್ತಿದ್ದು ಆ ಹೆದ್ದಾರಿಯೇ ಇದೀಗ ರಸ್ತೆ ಬದಿ ಇರುವ ಕಟ್ಟಡ ಮಾಲೀಕರಿಗೆ ಕಂಟಕಪ್ರಾಯವಾಗಿದೆ.
ಸರ್ಕಾರದ ಆದೇಶ ಸಂಖ್ಯೆ ಪಿಡಬ್ಲೂö್ಯಡಿ೨೩ ಆರ್ಡಿಎಫ್ ೨೦೦೪ ದಿನಾಂಕ ೧೮.೧೦.೨೦೦೪ರ ಅನ್ವಯ ರಸ್ತೆಯ ಮಧ್ಯಭಾಗದಿಂದ ರಾಷ್ಟಿçÃಯ ಹಾಗೂ ರಾಜ್ಯ ಹೆದ್ದಾರಿಗಳು ರಸ್ತೆಯ ಮಧ್ಯಭಾಗದಿಂದ ನಿಗದಿಪಡಿಸಿದಂತೆ ೪೦ ಮೀಟರ್ಗಳಾಗಿದೆ. ಇತರ ಜಿಲ್ಲಾ ಮುಖ್ಯ ರಸ್ತೆಗಳು ೨೫ ಮೀಟರ್ಗಳಂತೆ ನಿಗದಿಪಡಿಸಲಾಗಿತ್ತು. ತದನಂತರ ರಾಜ್ಯ ಲೊಕೋಪಯೋಗಿ ಇಲಾಖೆಯ ಉಲ್ಲೇಖ(೨)ರ ಆದೇಶದಲ್ಲಿ ನಗರ, ಪಟ್ಟಣ ಗ್ರಾಮಗಳ ಪರಿಮಿತಿ ಹಾಗೂ ಇತರ ಆಕ್ಷೇಪಿತ ಪ್ರದೇಶಗಳಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ಗಡಿರೇಖೆ ಮತ್ತು ಕಟ್ಟಡ ರೇಖೆಗಳನ್ನು ಮಾರ್ಪಡಿಸಲಾಗಿದ್ದು ರಾಜ್ಯ ಹೆದ್ದಾರಿಯ ಭೂ ದಾಖಲಿತ ರಸ್ತೆ ಭೂ ಗಡಿಯ ಅಂಚಿನಿAದ ಕಟ್ಟಡ ರೇಖೆಯ ಅಂತರ ಸಿಟಿ ಕಾರ್ಪೊರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಪರಿಮಿತಿ, ಟೌನ್ ಪಂಚಾಯಿತಿ, ಗ್ರಾಮ ಪಂಚಾಯಿತಿ ಪರಿಮಿತಿಯಲ್ಲಿ ೬ ಮೀಟರ್, ಸಿಟಿ ಕಾರ್ಪೊರೇಷನ್ ಪರಿಮಿತಿಯಿಂದ ೧೫ ಕಿ.ಮೀ, ಸಿಟಿ ಮುನ್ಸಿಪಲ್ ಕೌನ್ಸಿಲ್ನಿಂದ ೧೦ ಕಿ.ಮೀ ಎಂದು ನಿಗದಿಪಡಿಸಲಾಗಿತ್ತು. ಅಲ್ಲದೆ ಟೌನ್ ಮುನ್ಸಿಪಲ್ ಪರಿಮಿತಿ, ಟೌನ್ ಪಂಚಾಯತ್ ಪರಿಮಿತಿ, ಗ್ರಾಮ ಪಂಚಾಯಿತಿ ಪರಿಮಿತಿ ಯೊಳಗೆ ೫ ಕಿ.ಮೀ ದೂರದವರೆಗೆ ೧೨ ಮೀಟರ್ ನಿಗದಿಪಡಿಸಲಾಗಿತ್ತು.
ಆದರೆ ಸರ್ಕಾರ ನಿಗದಿಪಡಿಸಿದ ಪರಿಮಿತಿಯ ಅಂತರದಲ್ಲಿ ಹಲವು ಪಟ್ಟಣ, ಗ್ರಾಮಗಳು ಬರುವುದರಿಂದ ಇದನ್ನು ಜಾರಿಗೊಳಿಸಿದರೆ ಉಂಟಾಗುವ ತೊಂದರೆಗಳನ್ನು ಗಮನದಲ್ಲಿಟ್ಟ ಇಲಾಖೆ ರಾಜ್ಯ ಹೆದ್ದಾರಿಗಳ ಕಟ್ಟಡ ರೇಖೆಗಳ ಅಂತರವನ್ನು ಸಿಟಿ ಕಾರ್ಪೋರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ರಸ್ತೆಯ ಭೂ ಗಡಿಯಿಂದ ೬ ಮೀಟರ್, ಸಿಟಿ ಕಾರ್ಪೊರೇಷನ್ ಪರಿಮಿತಿಯಿಂದ ೧೫ ಕೀ.ಮೀ. ವರೆಗೆ ೧೨ ಮೀಟರ್ಗೆ ನಿಗದಿಪಡಿಸಿದೆ.
ವಿಸ್ತರಣೆ ಅನಿವಾರ್ಯ
ಹೆದ್ದಾರಿ ವಿಸ್ತರಣೆಯನ್ನು ೧೯೮೭ ರಲ್ಲೇ ರೂಪಿಸಲಾಗಿತ್ತು. ಇದೀಗ ೩೬ ವರ್ಷಗಳೇ ಕಳೆದಿದೆ. ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಓಡಾಟಕ್ಕೆ ತೊಂದರೆ ಆಗಿದ್ದು ರಸ್ತೆ ವಿಸ್ತರಣೆ ಅನಿವಾರ್ಯ. ವಿಸ್ತರಣೆ ಮಾಡದಿದ್ದರೆ ಅಪಘಾತಗಳ ಸಂಖ್ಯೆ ಹೆಚ್ಚಾಗಲಿದ್ದು, ಇದರಿಂದ ಸಮಸ್ಯೆ ಉಂಟಾಗಿ ಜನರಿಗೆ ತೊಂದರೆ ಆಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಕರಣ ನ್ಯಾಯಾಲಯದಲ್ಲಿದ್ದು ನ್ಯಾಯಲಯ ಹಾಗೂ ಸರ್ಕಾರದ ನಿರ್ದೇಶನದಂತೆ ರಸ್ತೆ ವಿಸ್ತರಣೆ ಮಾಡಲಾಗುವುದು ಎಂಬುದು ಇಲಾಖಾ ಮಾಹಿತಿಯಾಗಿದೆ.
ವೀರಾಜಪೇಟೆ ಪಟ್ಟಣದ ಜನಸಂಖ್ಯೆ ಸುಮಾರು ೨೨ ಸಾವಿರಕ್ಕು ಅಧಿಕ ಇದ್ದು ವಾಹನಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ. ಗ್ರಾಮಾಂತರ ಪ್ರದೇಶಗಳಿಂದಲೂ ಜನರು ಪಟ್ಟಣಕ್ಕೆ ಆಗಮಿಸುತ್ತಾರೆ. ಪ್ರತಿ ಬುಧವಾರ ನಡೆಯುವ ವಾರದ ಸಂತೆ ಸೇರಿದಂತೆ ಉಳಿದ ದಿನಗಳಲ್ಲಿಯೂ ವಾಹನಗಳ ಭರಾಟೆಯ ನಡುವೆ ಪಾದಚಾರಿಗಳ ಓಡಾಟ ಕಷ್ಟಕರವಾಗಿದೆ. ಈಗಿರುವ ರಸ್ತೆ ಕೇವಲ ೩೦ ಅಡಿಗಳಷ್ಟು ಮಾತ್ರ ಅಗಲವಿದ್ದು ಸಂಚಾರಕ್ಕೆ ತೀವ್ರ ತೊಡಕಾಗಿದೆ. ವಿಸ್ತರಣೆಯ ಸರ್ವೆ ಕಾರ್ಯ ಮುಗಿದಿದೆ. ಲೋಕೋಪಯೋಗಿ ಇಲಾಖೆ ರಸ್ತೆ ಅಗಲೀಕರಣ ಕಾರ್ಯಕ್ಕೆ ಚಾಲನೆ ನೀಡಲು ಮುಂದಾಗಿತ್ತು. ಪಟ್ಟಣದ ಹೆದ್ದಾರಿಯ ಇಕ್ಕೆಲಗಳ ವಾಸದ ಮನೆಗಳಲ್ಲಿರುವ ಜನರ ಮತ್ತು ವ್ಯಾಪಾರಿಗಳ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವಿಸ್ತರಣೆ ಕಾರ್ಯ ಸ್ಥಗಿತಗೊಂಡಿತ್ತು.
ವಾಹನಗಳ ಸಂದಣಿ ಹೆಚ್ಚಿದಂತೆ ವಾಹನಗಳ ಸುಗಮ ಸಂಚಾರ ಮಾಡಿಕೊಡುವುದು ಸಂಬAಧಪಟ್ಟ ಇಲಾಖೆಗಳ ಕರ್ತವ್ಯವೇ ಆಗಿದ್ದರೂ ಪಟ್ಟಣಕ್ಕೆ ಅಂಟಿಕೊAಡಿರುವ ಮಲೆತಿರಿಕೆ ಬೆಟ್ಟ ರಸ್ತೆ ವಿಸ್ತರಣೆಗೆ ಅಡಚಣೆ ಆಗಿದೆ. ರಸ್ತೆ ವಿಸ್ತರಣೆ ಕೆಲವರಿಗೆ ಅನಾನುಕೂಲವಾಗುತ್ತದೆ. ಸಾವಿರಾರು ಜನರಿಗೆ ಅನುಕೂಲ ಆಗುವುದನ್ನು ಗಮನದಲ್ಲಿಟ್ಟುಕೊಂಡೆ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ.
ರಸ್ತೆ ವಿಸ್ತರಣೆ ಎಂದಾಗ ಮೊದಲು ನೆನಪಿಗೆ ಬರುವುದೇ ಕಳೆದ ನಾಲ್ಕು ವರ್ಷಗಳಿಂದ ಕೊಡಗಿನಲ್ಲಿ ಸಂಭವಿಸಿರುವ ಭೂ ಕುಸಿತ. ಈ ಭೂ ಕುಸಿತದಿಂದಾಗಿ ಹತ್ತಾರು ಜನ ಪ್ರಾಣ ತೆತ್ತಿದ್ದಾರೆ. ಜನರು ಮನೆ, ಮಠ, ತೋಟಗಳನ್ನು ಕಳೆದುಕೊಂದು ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ೨೦೧೯ ರಲ್ಲಿ ನಡೆದ ಪ್ರಕೃತಿ ವಿಕೋಪದ ಸಂದರ್ಭ ಮಲೆತೆರಿಕೆ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಭೂ ವಿಜ್ಞಾನಿಗಳು ಬೆಟ್ಟ ಪ್ರದೇಶದಲ್ಲಿ ಅಧ್ಯಯನ ನಡೆಸಿ ಮಾನವನ ಹಸ್ತಕ್ಷೇಪವೇ ಭೂ ಕುಸಿತಕ್ಕೆ ಕಾರಣ; ಈ ಬೆಟ್ಟ ಪ್ರದೇಶ ಜನರ ವಾಸಕ್ಕೆ ಯೋಗ್ಯ ಇಲ್ಲ ಎಂದು ಸರ್ಕಾರಕ್ಕೆ ವರದಿ ನೀಡಿದೆ. ಮಳೆಗಾಲ ಬಂತೆAದರೆ ಬೆಟ್ಟದ ತಪ್ಪಲಲ್ಲಿ ವಾಸಿಸುವವರ ಆತಂಕ ಹೆಚ್ಚುತ್ತಲೆ ಇರುತ್ತದೆ. ರಸ್ತೆ ವಿಸ್ತರಣೆಗೆ ತೊಡಕಾಗುತ್ತಿರುವುದು ಇದೂ ಒಂದು ಕಾರಣವಾಗಿದೆ. ರಸ್ತೆಯ ಅಗಲೀಕರಣ ಆಗದ ಹಿನ್ನೆಲೆಯಲ್ಲಿ ವಾಹನ ಪಾರ್ಕಿಂಗ್ಗೆ ಸಮಸ್ಯೆಯಾಗುತ್ತಿದೆ. ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ಬೆಳಗ್ಗಿನಿಂದ ಸಂಜೆವರೆಗೆ ತಮ್ಮ ಅಂಗಡಿ ಮುಂದೆ ನಿಲ್ಲಿಸುತ್ತಿದ್ದಾರೆ. ಇದರಿಂದ ಗ್ರಾಮಾಂತರ ಪ್ರದೇಶಗಳಿಂದ ಬರುವ ಜನರಿಗೆ ಪಾರ್ಕಿಂಗ್ ವ್ಯವಸ್ಥೆ ಸಿಗುತ್ತಿಲ್ಲ. ಕೇರಳ ಮಾದರಿಯಲ್ಲಿ ಪಾರ್ಕಿಂಗ್ಗೆ ಸಮಯ ನಿಗದಿ ಮಾಡಿದರೆ ಎಲ್ಲಾ ವಾಹನ ಮಾಲೀಕರಿಗೆ ಉಪಯೋಗವಾಗುತ್ತದೆ.
ಇಂದಿನ ಪರಿಸ್ಥಿತಿಗೆ ಅನುಗುಣದಂತೆ ನಗರದಲ್ಲಿ ರಸ್ತೆ ವಿಸ್ತರಣೆ ಅನಿವಾರ್ಯ. ಕಳೆದ ೩೫ ವರ್ಷಗಳಿಂದ ರಸ್ತೆ ವಿಸ್ತರಣೆ ಆಗುತ್ತದೆ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಇದುವರೆಗೂ ವಿಸ್ತರಣೆ ಕಂಡಿಲ್ಲ. ವೀರಾಜಪೇಟೆ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ವ್ಯಾಪಾರ ವಹಿವಾಟುಗಳಿಗೆ ಗೋಣಿಕೊಪ್ಪ, ಮಡಿಕೇರಿ ಕಡೆಗಳಿಗೆ ತೆರಳುತ್ತಿದ್ದಾರೆ. ಇದರಿಂದ ಅಂಗಡಿ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ ಎಂಬುದು ವರ್ತಕ ಚಂದ್ರ ಅವರ ಅಭಿಪ್ರಾಯವಾಗಿದೆ. - ಪಳೆಯಂಡ ಪಾರ್ಥ ಚಿಣ್ಣಪ್ಪ